ನಿಂಬರಗಾ ಗ್ರಾಪಂ ಪಿಡಿಒ ಅಮಾನತ್ತಿಗೆ ಒತ್ತಾಯ
ಆಳಂದ:ಆ.೨೫: ತಾಲೂಕಿನ ನಿಂಬರಗಾ ಗ್ರಾಮ ಪಂಚಾಯತಿಯಲ್ಲಿ ಅವ್ಯವಹಾರ ಕೈಗೊಂಡ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳದೆ ಮೇಲಾಧಿಕಾರಿಗಳ ಆದೇಶ ಉಲ್ಲಂಘಿಸುತ್ತಿರುವ ಅಭಿವೃದ್ಧಿ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಕೈಗೊಳ್ಳಬೇಕು ಎಂದು ಸರ್ವ ಸಮಾಜ ಕಲ್ಯಾಣ ಸಮಿತಿಯ ಅಧ್ಯಕ್ಷ ವಿಠ್ಠಲ ಕೋಣೆಕರ್ ಅವರು ಒತ್ತಾಯಿಸಿದರು.
ಪಟ್ಟಣದ ತಾಪಂ ಕಚೇರಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ಅವರಿಗೆ ನಿಂಬರಗಾ ಗ್ರಾಪಂಗೆ ಸಂಬAಧಿತ ಸಿಬ್ಬಂದಿಗಳ ಅವ್ಯವಹಾರ ಕುರಿತು ತನಿಖೆ ಹಾಗೂ ತಪ್ಪಿತಸ್ಥ ಪಿಡಿಒ ಅಮಾನತ್ತು ಕೈಗೊಳ್ಳಬೇಕು ಎಂಬ ಬೇಡಿಕೆಯ ಮನವಿ ಸಲ್ಲಿಸಿ ಒತ್ತಾಯಿಸಿದರು.
ಗ್ರಾಮ ಪಂಚಾಯತಿ ಅಧಿಕಾರಿಗಳು ೨೦೨೧-೨೨ನೇ ಸಾಲಿನಲ್ಲಿ ಅವ್ಯವಹಾರ ಮಾಡಿದ್ದಾರೆ, ಇದರ ವಿರುದ್ಧ ಸರ್ವ ಸಮಾಜ ಕಲ್ಯಾಣ ಸಮೀತಿ ಹಾಗೂ ನಿಂಬರ್ಗಾ ಗ್ರಾಮಸ್ಥರು ಗ್ರಾಮ ಪಂಚಾಯತ ಎದರುಗಡೆ ಪ್ರತಿಭಟನೆ ಕೈಗೊಳ್ಳಲಾಗಿತ್ತು. ಪ್ರತಿಭಟನಾ ಸ್ಥಳಕ್ಕೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಬಂದು ತಪ್ಪಿತಸ್ಥ ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಜರುಗಿಸಲು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕಲಬುರಗಿ ರವರ ಆದೇಶ ಪಂಚಾಯತ ರಾಜ್ ಕಾಯ್ದೆ ೧೯೯೩/೧೧೩ರ ಪ್ರಕರಣದಂತೆ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ನಿಂಬರ್ಗಾ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳವರಿಗೆ ಆದೇಶ ನೀಡಿದ್ದು, ಸುಮಾರು ೦೮ ತಿಂಗಳು ಕಳೆದರೂ ಕೂಡಾ ಇಲ್ಲಿಯವರೆಗೆ ಯಾವದೇ ಕ್ರಮ ತೆಗೆದುಕೊಂಡಿರುವದಿಲ್ಲ. ಆದಕಾರಣ ಇವರ ಬೇಜಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಉದ್ದೇಶಪೂರ್ವಕವಾಗಿ ದುಷ್ಟ ಸಿಬ್ಬಂದಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಕೂಡಲೇ ಅಮಾನತ್ತು ಗೋಳಿಸಿ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ಮತ್ತೆ ನಿಂಬರ್ಗಾ ಗ್ರಾಮದ ಜನರು ಕೂಡಿ ಮತ್ತು ಸರ್ವ ಸಮಾಜ ಕಲ್ಯಾಣ ಸಮಿತಿ ವತಿಯಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಪರಮೇಶ್ವರ ಶಿವಗೊಂಡಗೊಳ, ಚಂದ್ರಕಾAತ ದೂಗೊಂಡ, ಮಹಿಂದ್ರ ನಿರ್ಮೂಲಕರ್ ಇತರರು ಇದ್ದರು.