ರಾಜ್ಯದ ಲೋಕಾಯುಕ್ತದಲ್ಲಿ ೧೮,೮೮೬ ಪ್ರಕರಣ: ಉಪ ಲೋಕಾಯುಕ್ತ ನ್ಯಾ.ಕೆ.ಎನ್. ಫಣೀಂದ್ರ
ಸAಜೆವಾಣಿ ವಾರ್ತೆ,
ವಿಜಯಪುರ,ಆ.೨೫: ರಾಜ್ಯದ ಲೋಕಾಯುಕ್ತ ಹಾಗೂ ಉಪ ಲೋಕಾಯುಕ್ತದಲ್ಲಿ ಒಟ್ಟು ೧೮,೮೮೬ ಪ್ರಕರಣಗಳಿವೆ ಎಂದು ಉಪ ಲೋಕಾಯುಕ್ತ ನ್ಯಾ.ಕೆ.ಎನ್. ಫಣೀಂದ್ರ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಎರಡು ದಿನಗಳವರೆಗೆ ಉಪ ಲೋಕಾಯುಕ್ತರು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಉಪ ಲೋಕಾಯುಕ್ತ- ೧ ರಲ್ಲಿ ೭೦೨೮, ಉಪ ಲೋಕಾಯುಕ್ತ- ೨ ರಲ್ಲಿ ೬೩೬೩ ಪ್ರಕರಣ ಹಾಗೂ ೫೪೯೫ ಪ್ರಕರಣ ಲೋಕಾಯುಕ್ತದಲ್ಲಿ ಇವೆ ಎಂದರು.
ಜಿಲ್ಲೆಯಲ್ಲಿ ಎರಡು ದಿನಗಳಲ್ಲಿ ಒಟ್ಟು ೧೯೨ ದೂರುಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಗಿದ್ದು, ಈ ಪೈಕಿ ೩೭ ದೂರುಗಳನ್ನು ನೋಂದಾಯಿಸಿಕೊAಡು ಈ ಪ್ರಕರಣಗಳ ವಿಚಾರಣೆ ನಡೆಸಿ, ಇತ್ಯರ್ಥ ಮಾಡಲು ಸೂಚಿಸಲಾಗಿದೆ ಎಂದು ಉಪ ಲೋಕಾಯುಕ್ತ ನ್ಯಾ.ಕೆ.ಎನ್. ಫಣೀಂದ್ರ ಹೇಳಿದರು.
ಮೊದಲನೇ ದಿನ ೭೭ ಅಹವಾಲು ಬಂದಿದ್ದು, ಎರಡನೇ ದಿನ ೧೨೨ ಅಹವಾಲು ಸ್ವೀಕರಿಸಲಾಯಿತು. ಒಟ್ಟಾರೆ ೧೯೨ ದೂರನ್ನು ಸಾರ್ವಜನಿಕರಿಂದ ಸ್ವೀಕರಿಸಲಾಯಿತು. ಇವುಗಳಿಗೆ ಕೆಲ ಸಮಯ ನೀಡಿ ವರದಿ ನೀಡಲು ಸೂಚಿಸಲಾಯಿತು. ಇನ್ನು ಕೆಲವರು ನೇರವಾಗಿ ಅರ್ಜಿ ಸಲ್ಲಿಸಿದ್ದು, ಅವುಗಳನ್ನು ಪರಿಹರಿಸುವಂತೆ ಸಂಬAಧಿಸಿದ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ ಎಂದರು.
ನೋAದಾಯಿಸಿಕೊAಡ ೩೭ ದೂರನ್ನು ಹೊರತು ಪಡಿಸಿ, ಇನ್ನುಳಿದ ದೂರುಗಳ ಪರಿಹಾರಕ್ಕೆ ಸ್ಥಳೀಯ ಲೋಕಾಯುಕ್ತ ಎಸ್ಪಿ ಅವರಿಗೆ ಸೂಚಿಸಲಾಗಿದೆ ಎಂದರು.