ಐತಿಹಾಸಿಕ ಮೂಲನಂದೀಶ್ವರ ಜಾತ್ತಾಮಹೋತ್ಸವ ನಾಳೆಯಿಂದ
ಬಸವನಬಾಗೇವಾಡಿ,ಆ.೨೫:ಪಟ್ಟಣದ ಮೂಲನಂದೀಶ್ವರ (ಬಸವೇಶ್ವರ) ದೇವಸ್ಥಾನದ ಜಾತ್ರಾಮಹೋತ್ಸವಕ್ಕೆ ಕ್ಷಣ ಕಣನೆ ಆರಂಭವಾಗಿದೆ. ಜಾತ್ರೆಯು ಆ.೨೬ ರಿಂದ ೩೦ ರವರೆಗೆ ಐದು ದಿನಗಳ ಕಾಲ ಜರುಗಲಿದೆ. ಈಗಾಗಲೇ ಜಾತ್ತೆಯ ಅಗತ್ಯ ಸಿದ್ದತೆಯನ್ನು ಕೂಡಲಸಂಗಮ ಅಭಿವೃದ್ದಿ ಮಂಡಳಿ,ಬಸವೇಶ್ವರ ಜಾತ್ರಾ ಉತ್ಸವ ಸಮಿತಿ, ಬಸವೇಶ್ವರ ಸೇವಾ ಸಮಿತಿ, ರಾಷ್ಟೀಯ ಬಸವ ಸೈನ್ಯ ಸೇರಿದಂತೆ ವಿವಿಧ ಸಂಘಟನೆಗಳು ಕೈಗೊಂಡಿವೆ. ಜಾತ್ರೆಗೆ ರಾಜ್ಯ, ಹೊರ ರಾಜ್ಯದ ಭಕ್ತರು ಆಗಮಿಸುತ್ತಾರೆ. ದೇವಸ್ಥಾನ, ಬಸವೇಶ್ವರ ವೃತ್ತ ಅಲಂಕಾರ ವಿದ್ಯುದೀಪದಿಂದ ಕಂಗೊಳಿಸುತ್ತಿದೆ. ಜಾತ್ರೆಯ ಅಂಗಡಿಗಳನ್ನು ದೇವಸ್ಥಾನದ ಆಂಗ್ಲ ಮಾಧ್ಯಮ ಶಾಲೆಯ ಪಕ್ಕದಲ್ಲಿರುವ ಅನಿಲ ಅಗರವಾಲ ಅವರ ಜಮೀನಿನಲ್ಲಿ ಈಗಾಗಲೇ ಹಾಕಲಾಗಿದೆ. ವ್ಯಾಪಾರಸ್ಥರು ಗ್ರಾಹಕರ ನಿರೀಕ್ಷೆಯಲ್ಲಿದ್ದಾರೆ.
ಜಾತ್ರೆಯ ಕಾರ್ಯಕ್ರಮಗಳು:
ಆ.೨೬ ರಂದು ಬೆಳಗ್ಗೆ ೮.೩೦ ಗಂಟೆಗೆ ದೇವಸ್ಥಾನದಿಂದ ಸಕಲ ವಾದ್ಯಮೇಳದೊಂದಿಗೆ ವಿರಕ್ತಮಠಕ್ಕೆ ತೆರಳಿ ಪೂಜ್ಯರಾದ ಮುರುಘೇಂದ್ರ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿಯವರನ್ನು ದೇವಸ್ಥಾನಕ್ಕೆ ಬರಮಾಡಿಕೊಂಡ ನಂತರ ಸರ್ವ ಅಲಂಕೃತ ಉತ್ಸವ ನಂದಿ ಮೂರ್ತಿಯನ್ನು ಹೊತ್ತ ಬೆಳ್ಳಿ ಪಲ್ಲಕ್ಕಿ ಉತ್ಸವ ದೇವಸ್ಥಾನದಿಂದ ಸಕಲ ವಾದ್ಯಮೇಳದೊಂದಿಗೆ ಭವ್ಯ ಮೆರವಣಿಗೆಯ ಮೂಲಕ ಹೊರಟು ಇತಿಹಾಸ ಪ್ರಸಿದ್ಧ ಹೋರಿಮಟ್ಟಿ ಗುಡ್ಡಕ್ಕೆ ದರ್ಶನ ನೀಡಿದ ನಂತರ ಅಲ್ಲಿ ಶಿವಾನಂದ ಈರಕಾರ ಮುತ್ಯಾ ಅವರಿಂದ ಈ ವರ್ಷದ ನುಡಿ-ಹೇಳಿಕೆಗಳು ಜರುಗುತ್ತವೆ.ನಂತರ ಬಸವನಹಟ್ಟಿ, ಬುತ್ತಿ ಬಸವಣ್ಣ ಗುಡಿಗೆ ತೆರಳಿದ ನಂತರ ಸಂಜೆ ೭ ಗಂಟೆಗೆ ಪಟ್ಟಣದ ಕಂಬಿ ಕಟ್ಟಿಗೆ ಪಲ್ಲಕ್ಕಿ ಉತ್ಸವ ಆಗಮಿಸುತ್ತದೆ. ಪಲ್ಲಕ್ಕಿ ಉತ್ಸವವನ್ನು ಸಕಲವಾದ್ಯ, ಆನೆಅಂಬಾರಿ ವೈಭವದೊಂದಿಗೆ ಬರಮಾಡಿಕೊಂಡ ನಂತರ ಭವ್ಯ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ಪಲ್ಲಕ್ಕಿಯನ್ನು ಬರಮಾಡಿಕೊಳ್ಳಲಾಗುವುದು. ಇದೇ ಸಂದರ್ಭದಲ್ಲಿ ದೇವಾಲಯದ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಅಕರ್ಷಕ ಮನಮೋಹಕ ಸಿಡಿಮದ್ದು ಸುಡಲಾಗುವುದು. ರಾತ್ರಿ ೧೦ ಗಂಟೆಯಿAದ ದೇವಸ್ಥಾನದ ಆವರಣದಲ್ಲಿ ಪಲ್ಲಕ್ಕಿ ಉತ್ಸವ ಜರುಗುತ್ತದೆ.
ಆ.೨೭ ರಂದು ಜಾತ್ರೆಯಂಗವಾಗಿ ಬೆಳಗ್ಗೆ ೯ ಗಂಟೆಯಿAದ ಪ್ರಸಿದ್ಧ ಗೀಗೀ,ಚೌಡಕಿ, ಡೊಳ್ಳು, ಭಜನಾ ಪದಗಳು ಸುಪ್ರಸಿದ್ಧ ಕಲಾವಿದರಿಂದ ದೇವಸ್ಥಾನದ ಆವರಣದಲ್ಲಿ ಜರುಗುತ್ತವೆ. ಮಧ್ಯಾನ್ಹ ೩ ಗಂಟೆಗೆ ಗುರುಕೃಪಾ ಪ್ರಾಥಮಿಕ ಶಾಲೆಯ ಹತ್ತಿರ ಜಂಗೀ ಕುಸ್ತಿಗಳು ಜರುಗಲಿವೆ. ರಾತ್ರಿ ೧೦.೩೦ ಗಂಟೆಗೆ ಸ್ಥಳೀಯ ಬಸವೇಶ್ವರ ಬೈಲಾಟ ಸಂಘದಿAದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಭಕ್ತಿ ಪ್ರದಾನ ನಾಟಕ ಪ್ರದರ್ಶನವಾಗಲಿದೆ.
ಆ.೨೮ ರಂದು ಬೆಳಗ್ಗೆ ೯ ಗಂಟೆಯಿAದ ದೇವಾಲಯದ ಆಂಗ್ಲಮಾಧ್ಯಮ ಶಾಲಾ ಆವರಣದಲ್ಲಿ ಕಸರತ್ತಿನ ಪ್ರದರ್ಶನ ಹಾಗೂ ಭಾರ ಎತ್ತುವ ಸ್ಪರ್ಧೆ, ಮಧ್ಯಾನ್ಹ ೩ ಗಂಟೆಗೆ ನಿರ್ಣಾಯಕ ಜಂಗೀ ಕುಸ್ತಿಗಳು ಜರುಗಲಿವೆ. ರಾತ್ರಿ ೧೦.೩೦ ಗಂಟೆಗೆ ಮಹಾಲಿಂಗಪೂರದ ಮಹಾಋಷಿ ಭಗೀರಥ ಕೃಪಾಪೋಷಿತ ಕಲಾ ನಾಟ್ಯ ಸಂಘದಿAದ ಮಾನವಂತರ ಮನೆತನ ಎಂಬ ಸಾಮಾಜಿಕ ನಾಟಕ ಪ್ರದರ್ಶನವಾಗಲಿದೆ.
ಆ.೨೯ ರಂದು ದೇವಾಲಯದ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಇದೇ ಪ್ರಥಮ ಬಾರಿಗೆ ಜಾತ್ರೆಯಂಗವಾಗಿ ಎರಡು ದಿನಕಾಲ ಹಮ್ಮಿಕೊಂಡಿರುವ ಕೃಷಿ ಮೇಳದ ಉದ್ಘಾಟನೆ ನೆರವೇರಲಿದೆ. ಸಂಜೆ ೬.೩೦ ಗಂಟೆಗೆ ಕರ್ನಾಟಕ ಚಲನಚಿತ್ರ ಹಾಸ್ಯ ನಟರ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗಲಿದೆ.
ಆ.೩೦ ರಂದು ಸಂಜೆ ೭ ಗಂಟೆಗೆ ಝಿ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳಾದ ಗೋಪಾಲ ಹೂಗಾರ, ಗೋಪಾಲ ಇಂಚಗೇರ ಅವರ ನೇತೃತ್ವದಲ್ಲಿ ಕಲಾ ಸಿಂಚನ ಮೆಲೋಡಿಸ್ ತಂಡದಿAದ ಜಾನಪದ ಸಂಜೆ ಕಾರ್ಯಕ್ರಮ ಜರುಗಲಿದೆ.