ಜಗತ್ ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಶರಣಬಸವ ವಿವಿ
ಕಲಬುರಗಿ:ಆ.24:ಮುಂದಿನ ಕೆಲವೆ ವರ್ಷಗಳಲ್ಲಿ ಶರಣಬಸವ ವಿಶ್ವವಿದ್ಯಾಲಯ ಜಗತ್ ಪ್ರಸಿದ್ಧ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸೇರಲಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ.ಅನೀಲಕುಮಾರ ಬಿಡುವೆ ಹೇಳಿದರು.
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ 30 ದಿನಗಳ ಸಾಂಸ್ಕøತಿಕ ಶಿವಾನುಭವ ಉಪನ್ಯಾಸ ಮಾಲಿಕೆಯಲ್ಲಿ ಶನಿವಾರ ಶರಣಬಸವ ವಿಶ್ವವಿದ್ಯಾಲಯ ಎಂಬ ವಿಷಯ ಕುರಿತು ಮಾತನಾಡಿದರು.
ಕಲ್ಯಾಣ ಕರ್ನಾಟಕದ ಮೊಟ್ಟ ಮೊದಲ ಖಾಸಗಿ ವಿಶ್ವವಿದ್ಯಾಲಯವನ್ನು ಪೂಜ್ಯ ಡಾ.ಶರಣಬಸವ ಅಪ್ಪ ಅವರು 2017 ರಲ್ಲಿ ಸ್ಥಾಪಿಸಿ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿದ್ದಾರೆ. 60 ವಿವಿಧ ಕೋರ್ಸುಗಲ್ಲಿ ಸುಮಾರು 6500 ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾರೆ. ಬಡ ಮಕ್ಕಳಿಗೆ ನಿಗುವಂತೆ ಕಡಿಮೆ ಶುಲ್ಕದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಸುಮಾರು ವರ್ಷಕ್ಕೆ 50 ಕೋಟಿ ರೂ.ಗಳು ಬಜೆಟ್ ಹಣವನ್ನು ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಮತ್ತು ಪೂಜ್ಯ ಡಾ.ದಾಕ್ಷಾಯಣಿ ಅಪ್ಪ ಅವರು ಕೊಡುತ್ತಿದ್ದಾರೆ. ಕಡಿಮೆ ಖರ್ಚಿನಲ್ಲಿ ಶಿಕ್ಷಣ ಕೊಡುವ ವಿಶ್ವವಿದ್ಯಾಲಯ ಯಾವುದಾದರೂ ಇದ್ದರೆ ಅದು ಶರಣಬಸವ ವಿಶ್ವವಿದ್ಯಾಲಯವಾಗಿದೆ. 1934 ರಲ್ಲಿ ಅಂದು ದೊಡ್ಪಪ್ಪ ಅಪ್ಪ ಅವರು ಹೆಣ್ಣು ಮಕ್ಕಳಿಗಾಗಿ ಶಿಕ್ಷಣ ಆರಂಭಿಸಿದರೆ 2017 ರಲ್ಲಿ ಪೂಜ್ಯ ಡಾ.ಅಪ್ಪಾ ಅವರು ಖಾಸಗಿ ವಿಶ್ವವಿದ್ಯಾಲಯ ಆರಂಭಿಸಿ ಈ ಭಾಗ ಶೈಕ್ಷಣಿಕವಾಗಿ ಬೆಳೆಯಲು ಕಾರಣರಾಗಿದ್ದಾರೆ. ಶರಣ ವಿವಿಯಲ್ಲಿ ಪುರುಷರಿಗಿಂತ ಮಹಿಳೆಯರೆ ಹೆಚ್ಚು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದರಿಂದ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ. ಪೂಜ್ಯ ಡಾ. ಅಪ್ಪ ಅವರು ಸುಮಾರು 20 ವರ್ಷಗಳ ಹಿಂದೆ ಕನಸ್ಸು ಕಂಡಿದ್ದನ್ನು ಅವರು ನೇರವೇಸಿದ್ದಾರೆ. ಅಪ್ಪ ಅವರು ಬಹಳ ವರ್ಷಗಳ ಹಿಂದೆ ತೋರಿಸಿದ ಶಿಕ್ಷಣ ಪದ್ಧತಿಯಂತೆ ಈಗ ದೇಶದಲ್ಲಿ ಶಿಕ್ಷಣಪದ್ಧತಿ ಕಾಣುತ್ತೇವೆ. ಇಂತಹ ವಿಶ್ವವಿದ್ಯಾಲಯ ಸ್ಥಾಪಿಸಿ ಬಹಳ ದೊಡ್ಡ ಕೊಡುಗೆ ಈ ಭಾಗಕ್ಕೆ ನೀಡಿದ್ದಾರೆ. ಮಹಾದೇವಿ ಕನ್ಯಾ ಪ್ರಾಥಮಿಕ ಶಾಲೆಯಿಂದ ಶರಣಬಸವ ವಿಶ್ವವಿದ್ಯಾಲಯ ಮಟ್ಟದವರೆಗೆ ಶರಣಬಸವೇಶ್ವರ ಸಂಸ್ಥಾನ ಬೆಳೆಯಲು ಇದರ ಹಿಂದೆ ಪೂಜ್ಯ ಡಾ.ಅಪ್ಪಾಜಿಯವರ ಮಾರ್ಗದರ್ಶನ, ಚಿ.ದೊಡ್ಡಪ್ಪ ಅಪ್ಪ ಅವರ ಆರ್ಶೀವಾದ, ಪೂಜ್ಯ ಡಾ.ದಾಕ್ಷಾಯಣಿ ಅವ್ವಾಜಿ ಮತ್ತು ಕಾರ್ಯದರ್ಶಿ ಬಸವರಾಜ ದೇಶಮುಖ ಅಣ್ಣ ಅವರ ನಿರಂತರ ಕಾರ್ಯವೈಖರಿ ಇದೆ ಎಂದು ಹೇಳಿದರು.