ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕೆ ಕಾರ್ಯಾಗಾರಕ್ಕೆ ಚಾಲನೆ
ಕಲಬುರಗಿ,ಆ.24-ನಗರದ ನೂತನ ವಿದ್ಯಾಲಯ ಸಂಸ್ಥೆಯ ನೂತನ ಪದವಿ ಮಹಾವಿದ್ಯಾಲಯದ ಚಿತ್ರಕಲಾ ವಿಭಾಗದಲ್ಲಿ ಆ.24 ಮತ್ತು 25 ರಂದು ಆಯೋಜಿಸಿರುವ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕೆ ಮತ್ತು ಮಾರಾಟ ಕಾರ್ಯಾಗಾರವನ್ನು ನೂತನ ವಿದ್ಯಾಲಯ ಸಂಸ್ಥೆಯ ಸದಸ್ಯ ಆನಂದ ಆರ್ ಪಪ್ಪು ಅವರು ಜ್ಯೋತಿ ಬೆಳಗಿಸಿ ಕಾರ್ಯಗಾರವನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಸ್ಪೂರ್ತಿ ನೀಡುತ್ತವೆ ಎಂದು ತಿಳಿಸುತ್ತ, ಕಾರ್ಯಾಗಾರದ `ದಶಮಾನೋತ್ಸವ’ ಸಮಾರಂಭವನ್ನು ವಿಜೃಂಭಣೆಯಿಂದ ಆಚರಿಸುವುದಾಗಿ ತಿಳಿಸಿದರು.
ಸ್ವತಂತ್ರ ಚಿತ್ರಕಲಾವಿದ ಆನಂದ ಸದಾನಂದ ತಮಕರ್ ಅವರು ಮಣ್ಣಿನ ಗಣಪತಿಯನ್ನು ಮಾಡುವುದರ ಮೂಲಕ ಅದರ ವಿಧಾನಗಳನ್ನು ತರಬೇತಿ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷತೆ ನೀಡಿದರು.
ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದ್ಯಸ ಹನುಂತ ಬಾಡದ ಅವರು ಗೌರವ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮದ ಕುರಿತು ತಮ್ಮ ಮೆಚ್ಚುಗೆಯನ್ನು ಸೂಚಿಸಿದರು. ಇಂತಹ ಕಾರ್ಯಾಗಾರಳಿಗೆ ಶಿಲ್ಪಕಲಾ ಅಕಾಡಮಿಯ ಬೆಂಬಲವನ್ನು ಸೂಚಿಸಿದರು.
ಪದವಿ ಮಹಾವಿದ್ಯಲಯ ಡಾ. ಶ್ರೀಕಾಂತ ಏಕ್ಕಳಿಕರ ಅಧ್ಯಕ್ಷತೆವಹಿಸಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಕಳೆದ ಒಂಭತ್ತು ವರ್ಷಗಳಿಂದ ಸತತವಾಗಿ ಈ ಕಾರ್ಯಾಗರವನ್ನು ವಿಭಾಗವು ಆಯೋಜಿಸುತ್ತಿದ್ದು, ಇದರಿಂದ ನಮ್ಮ ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ಕಲೆ ಹೊರಹಾಕಲು ಉಪಯೋಗವಾಗಿದೆ, ಅಲ್ಲದೆ ಇದರಿಂದ ಪರಿಸರ ಮಾಲಿನ್ಯ ಸಹಾಯಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ನೂತನ ಪದವಿ ಮಹಾವಿದ್ಯಾಲಯ ಐಕ್ಯೂಎಸಿ ಸಂಯೋಜಕ ಗೋವಿಂದ ಪೂಜಾರ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಪ್ರಾರ್ಥನಾ ಗೀತೆಯನ್ನು ಸೌಭಾಗ್ಯಲಕ್ಷ್ಮಿ ಅವರು ಪ್ರಸ್ತುತಪಡಿಸಿದರು. ಕಾರ್ಯಕ್ರಮವನ್ನು ಡಾ.ವಿಷ್ಣು ಗುಂಡಗುರ್ಕಿ ಅವರು ನಡೆಸಿಕೊಟ್ಟರು. ವಿಭಾಗದ ಮುಖ್ಯಸ್ಥರಾದ ಜಿತೇಂದ್ರ ಕೊಥಳಿಕರ ಅವರು ವಂದನಾರ್ಪಣೆಯನ್ನು
ಮಾಡಿದರು. ಕಾರ್ಯಾಗಾರದಲ್ಲಿ ಸಂಸ್ಥೆಯ ಇತರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು, ಮಹವಿದ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.