ಪತಿ ಕೊಲೆ: ಪತ್ನಿ ಸೇರಿ ನಾಲ್ವರ ಬಂಧನ
ಕಲಬುರಗಿ,ಆ.24-ಇಲ್ಲಿನ ಕನಕನಗರದಲ್ಲಿ ಆ.1 ರಂದು ನಡೆದ ಆಟೋ ಚಾಲಕ ಈಶ್ವರ ಸೋಮಶೇಖರ ಚಿತ್ತಾಪೂರ (25) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ರಂಜೀತಾ ಸೇರಿ ನಾಲ್ವರನ್ನು ಆರ್.ಜಿ.ನಗರ ಪೊಲೀಸರು ಬಂಧಿಸಿದ್ದಾರೆ.
ಆ.1 ರಂದು ಈಶ್ವರ ಕೊಲೆಯಾಗಿತ್ತು. ಈ ಬಗ್ಗೆ ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್.ನಾಯಕ್, ಕಲಬುರಗಿ ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಭೂತೇಗೌಡ ಅವರ ಮಾರ್ಗದರ್ಶನದಲ್ಲಿ ಆರ್.ಜಿ.ನಗರ ಪೊಲೀಸ್ ಠಾಣೆಯ ಪಿಐ ಕುಬೇರ ಎನ್.ರಾಯಮಾನೆ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಲ್ಲನಗೌಡ, ಅರೇಶ, ಆತ್ಮಕುಮಾರ, ಸಿಕ್ರೇಶ್ವರ, ಚನ್ನಬಸವ, ಉಮೇಶ, ಮುಜಾಹಿದ್ ಕೊತ್ವಾಲ್, ರಾಜಕುಮಾರ, ಕರಣಕುಮಾರ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಜಯಶ್ರೀ ಗಂಡ ವೈಜನಾಥ ಹೊಸಮನಿ (44), ರಂಜೀತ್ ತಂದೆ ವೈಜನಾಥ ಹೊಸಮನಿ (19), ರಂಜೀತಾ ಗಂಡ ಈಶ್ವರ ಚಿತ್ತಾಪೂರ (22) ಮತ್ತು ಸಂಜೀವಕುಮಾರ ಲಕ್ಕಪ್ಪ ವಾಲೀಕಾರ (42) ಎಂಬುವವರನ್ನು ಬಂಧಿಸಿದೆ.