ಕಿರು ಸೇತುವೆ ಮೇಲಿಂದ ಬಿದ್ದು ವ್ಯಕ್ತಿ ಸಾವು
ಕಲಬುರಗಿ,ಆ.24-10 ರಿಂದ 15 ಅಡಿ ಎತ್ತರದ ಕಿರು ಸೇತುವೆ ಮೇಲಿಂದ ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಬ್-ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಹುಣಸಿಹಡಗಿಲ್ ಹತ್ತಿರ ನಡೆದಿದೆ.
ಶರಣಸಿರಸಗಿ ಗ್ರಾಮದ ನಿಂಗಪ್ಪ ಕೊರಬ ಮೃತಪಟ್ಟವರು.
ಆ.20 ರಂದು ಹುಣಸಿಹಡಗಿಲ್ ಗ್ರಾಮಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ರಾತ್ರಿ ಮದ್ಯ ಸೇವಿಸಿ ನಡೆದುಕೊಂಡು ಬರುವಾಗ ಕಿರು ಸೇತುವೆ ಹತ್ತಿರ ಕುಳಿತುಕೊಳ್ಳಲು ಹೋಗಿ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಅವರ ಪತ್ನಿ ವಿಜಮ್ಮಾ ಅವರು ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಬಂಧನ
ನಗರದ ಆದರ್ಶ ನಗರ ಕಾಲೋನಿಯಲ್ಲಿ ಮಟಕಾ ಬರೆದುಕೊಳ್ಳುತ್ತಿದ್ದ ಅಬೂಬಕರ್ ಕಾಲೋನಿಯ ಬಸಾರತ್ ಅಹ್ಮದ್ (40) ಎಂಬಾತನನ್ನು ಎಂ.ಬಿ.ನಗರ ಪೊಲೀಸರು ಬಂಧಿಸಿ 450 ರೂ.ನಗದು, ಒಂದು ಬಾಲ್ ಪೆನ್ ಮತ್ತು ಮಟಕಾ ಚೀಟಿ ಜಪ್ತಿ ಮಾಡಿದ್ದಾರೆ. ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.