ರಾಜ್ಯಮಟ್ಟಕ್ಕೆ ಆಯ್ಕೆ
ಕಲಬುರಗಿ:ಅ.2: ಜಿಲ್ಲೆಯಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಆರಾಧನಾ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳಾದ ಕು. ಅಭಿಷೇಕ್ ಪೂಜಾರಿ 1500 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾನೆ,ಹಾಗೂ ನಮ್ಮ ಕು. ಅಣ್ಣಪ್ಪ . ಬಿ. ಪೂಜಾರಿ ಕುಸ್ತಿಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾನೆ.
ಅದೇ ರೀತಿ ಈ ವಿದ್ಯಾರ್ಥಿಗಳು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಅವರ ವೈಯಕ್ತಿಕ ಆಟಗಳಲ್ಲಿ ಆಯ್ಕೆಯಾಗಿರುತ್ತಾರೆ ಎಂದು ಕಾಲೇಜಿನ ಪ್ರಾಚಾರ್ಯರು ಶ್ರೀ ಚೇತನ್ ಕುಮಾರ್ ಗಾಂಗಜಿ, ಸಂಸ್ಥೆಯ ನಿರ್ದೇಶಕರಾದ ರಾಜಕುಮಾರ್ ಗಾಂಗಜಿ, ಆಡಳಿತ ಅಧಿಕಾರಿ ಭೀಮರಾವ್ ಪಾಟೀಲ್ ಕಲಾ ವಿಭಾಗದ ಸಂಯೋಜಕರಾದ ಶ್ರೀ ಕಾಶಿನಾಥ್ ಆರ್ ಪಾಟೀಲ್ ಹಾಗೂ ದೈಹಿಕ ಉಪನ್ಯಾಸಕರಾದ ಶ್ರೀ ರೇವಣಸಿದ್ದಪ್ಪ ಇವಣಿ ಹಾಗೂ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.