ಕಟ್ಟ, ಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯವನ್ನು ಮನೆ ಬಾಗಿಲಿಗೆ ತಲುಪಿಸುವುದು ನನ್ನ ಕರ್ತವ್ಯ; ಎಂ.ವೈ.ಪಾಟೀಲ
ಕಲಬುರಗಿ ;ಅ.2: ನನ್ನ ಮತಕ್ಷೇತ್ರದ ಪ್ರತಿಯೊಬ್ಬರಿಗೂ ಸರಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವುದು ನನ್ನ ಆದ್ಯ ಕರ್ತವ್ಯ ವಾಗಿದೆ ಎಂದು ಅಫಜಲಪುರ ತಾಲ್ಲೂಕಿನ ಶಾಸಕರಾದ ಎಂ.ವೈ.ಪಾಟೀಲ ಹೇಳಿದರು.
ಅಫಜಲಪೂರ ಮತಕ್ಷೇತ್ರದ 2019-20 ಮತ್ತು 2020 – 21ನೇ ಸಾಲಿನ ಡಾ.ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಪಂಪಸೆಟ್ , ಮೋಟರ್ ಹಾಗೂ ಸಲಕರಣೆಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, ಸರಕಾರದಿಂದ ಬರುವ ಪ್ರತಿಯೊಂದು ಸೌಲಭ್ಯಗಳನ್ನು ಕಡು ಬಡವರಿಗೆ ಗುರುತಿಸಿ ಎಲ್ಲರ ಹಾಗೆ ಸ್ವಾವಲಂಬಿ ಜೀವನ ನಡೆಸಲು ಅರ್ಹ ಫಲಾನುಭವಿಗಳಿಗೆ ಆಯ್ಕೆ ಮಾಡಲಾಗುತ್ತದೆ ಎಂದು ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಮರಲಿಂಗ್ ಹೊನಗುಂಟಿಕರ್, ಮಾಜಿ ಜಿ.ಪಂ.ಸದಸ್ಯರಾದ ಪ್ರಕಾಶ್ ಜಮಾದಾರ್, ಮಾಜಿ ತಾ.ಪಂ.ಸದಸ್ಯರಾದ ಶಿವಾನಂದ ಗಾಡಿ ಸಾಹುಕಾರ, ಶರಣು ಕುಂಬಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಪೂಜಾರಿ, ಕಾಂಗ್ರೆಸ್ ಮುಖಂಡರಾದ ಸಿದ್ದಾರ್ಥ್ ಡಾಲಿ, ಭಾಗಣ್ಣ ಘತ್ತರಗಿ, ತಾಲೂಕು ಅಭಿವೃದ್ಧಿ ಅಧಿಕಾರಿ ಸತೀಶ್ ಬಳಮಕರ, ವಿಷಯ ನಿರ್ವಾಹಕರು
ಚನ್ನಬಸವ ಹಾಗೂ ಪಂಚಮುಖಿ ಬೋರ್ ವೇಲ್ಸ್ ಹಾಜರಿದ್ದರು.