10 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ
ಬೀದರ್ : ಅ.2:ಸುಗಮ ಸಾರಿಗೆ ಸಂಪರ್ಕ ಕಲ್ಪಿಸಲು ಗ್ರಾಮೀಣ ಭಾಗದ ರಸ್ತೆ ನಿರ್ಮಾಣ ಹಾಗೂ ಕುಡಿಯುವ ನೀರಿನ ಕಾಮಗಾರಿಗೆ ಪ್ರಥಮ ಆದ್ಯತೆ ನೀಡಲಾಗಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ ಶೈಲೇಂದ್ರ ಬೆಲ್ದಾಳೆ ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ರಾಜಗೀರಾ
ಗ್ರಾಮದಲ್ಲಿ ರಾಜಗೀರಾ ದಿಂದ ಹೊಕ್ರಾಣಾ ಗ್ರಾಮದ ವರೆಗೆ ಎಸ್ ಎಚ್ ಡಿಪಿ ಯೋಜನೆಯಡಿ 10 ಕೋಟಿ ರೂ. ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಚಾಲನೆ ನೀಡಿ ಅವರು ಮಾತನಾಡಿದರು.
ಕ್ಷೇತ್ರದ ಜನತೆಯ ಬೇಡಿಕೆಗೆ ಅನುಗುಣವಾಗಿ ರಸ್ತೆಗಳ ನಿರ್ಮಾಣ ಕಾರ್ಯ ಕೈಗೊಂಡಿದ್ದು, ಉತ್ತಮ ಗುಣ ಮಟ್ಟದ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಹಾಗೆಯೇ ಸಂಪರ್ಕ ರಸ್ತೆಗಳು ಹಾಗೂ ಸೇತುವೆಗಳ ನಿರ್ಮಾಣ ಕಾರ್ಯಕ್ಕೆ ಆದ್ಯತೆ ನೀಡಲಾಗಿದೆ. ಕ್ಷೇತ್ರದಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ನಿರ್ಮಾಣಗೊಂಡಿರುವ ರಸ್ತೆಗಳಿಂದ ಉತ್ತಮ ಗುಣಮಟ್ಟದ ರಸ್ತೆ ಸೌಲಭ್ಯ ದೊರೆಯಲಿದೆ’ ಎಂದರು.
ರಸ್ತೆ ನಿರ್ಮಾಣದಿಂದ ಗ್ರಾಮದ ಸಾರಿಗೆ ಸಂಪರ್ಕ ಸುಧಾರಿಸಲಿದೆ. ಗ್ರಾಮದ ವರ್ಚಸ್ಸು ಕೂಡ ಹೆಚ್ಚಲಿದೆ ಎಂದರು.
ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಗೆ ತಳಪಾಯವಾದ ಶಿಕ್ಷಣ, ಆರೋಗ್ಯ ಮತ್ತು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಲಾಗುವುದು.
ಕಾಮಗಾರಿ ಚಾಲನೆ ಮುಂಚೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಿಧ್ಯಾರ್ಥಿಗಳ ಕುಂದು ಕೊರತೆ ಕುರಿತು ಅಹವಾಲು ಸ್ವೀಕರಿಸಿ ಸಮಸ್ಯೆಗಳನ್ನು ಬಗೆಹರಿಸಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅತ್ಯುತ್ತಮ ಗುಣಮಟ್ಟದ ಶಾಲೆಗಳನ್ನು ಅಭಿವೃದ್ಧಿಪಡಿಸಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಿ, ಅವರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವ್ಯವಸ್ಥೆ ರೂಪಿಸಲು ಶ್ರಮಿಸಲಾಗುವುದು. ಗ್ರಾಮದಲ್ಲಿ ಎಲ್ಲರೂ ಒಂದಾಗಿ ಒಗ್ಗಟ್ಟಿನಿಂದ ಇದ್ದು ಉತ್ತಮ ಜೀವನ ಸಾಗಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ
ಪ್ರಭುದೇವರು, ದಿವ್ಯ ಸಾನಿಧ್ಯ ವಹಿಸಿದ್ದರು,ಸಿಂದೋಲ್ ಗ್ರಾಪಂ ಅಧ್ಯಕ್ಷೆ ಸುಭದ್ರಾಬಾಯಿ ರಾಮುರಾಠೋಡ, ಹೊಕ್ರಾಣ ಗ್ರಾಪಂ ಅಧ್ಯಕ್ಷರಾದ ಗೀರಿಶ್ ಕುಲಕರ್ಣಿ, ಸಿಂಧೋಲ್ ಗ್ರಾಪಂ ಉಪಾಧ್ಯಕ್ಷರಾದ ಸುಧಾಕರ ರಾಜಗೀರಾ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಗೀತಾರೆಡ್ಡಿ, ಪಿಕೆಪಿಎಸ್ ಅಧ್ಯಕ್ಷ ಜಗನ್ನಾಥ ತೋಟಪ್ಪನೋರ, ಉಪಾಧ್ಯಕ್ಷ ಬಸವರಾಜ ವಗ್ಗೆ, ಗ್ರಾಪಂ ಸದಸ್ಯರು ಶಂಕರಪ್ಪ ಬಾಪುರೆ, ಶ್ರಿ?ನಿವಾಸ ರೆಡ್ಡಿ, ಬಿಜೆಪಿ ಮಂಡಲ ಅಧ್ಯಕ್ಷರಾದ ಗುರುನಾಥ ಎಂ ರಾಜಗೀರಾ, ಪ್ರಧಾನ ಕಾರ್ಯದರ್ಶಿ ಸಂಜುಕುಮಾರ ಕೋಳಿ, ಮುಖಂಡರಾದ ಅನೀಲ ಪನ್ನಾಳೆ,ಬಾಬುರಾವ ಕಾರಬಾರಿ, ಚೆನ್ನಬಸವಣ್ಣ ಬಳತೆ, ಗೋಪಾಲ ರೆಡ್ಡಿ, ಘಾಳೇಪ್ಪ ಚಟ್ಟನಳ್ಳಿ, ಚಂದು ಮಡ್ಕಿ, ಗುರುನಾಥ ಅಡ್ಡೆ, ದಯಾದಂದ ಸ್ವಾಮಿ, ಮಲ್ಲಿಕಾರ್ಜುನ ಮೂಲಗಿ, ರವಿಕುಮಾರ ರಾಜಗೀರಾ, ಮೋದೀನ್ ರಾಜಗೀರಾ, ಪರಮೇಶ್ವರ ಪಾಟೀಲ,ಜಗನಾಥ ಉಪಾರ, ಆಕಾಶ ಅಡ್ಡೆ,ಲೋಕೋಪಯೋಗಿ ಅಧಿಕಾರಿಗಳು ಭಗವಾನ್ ಸಿಂಗ್, ಶಾಕಿರಾಜ, ಮನ್ನಳ್ಳಿ ಪಿ ಎಸ್ ಐ ನಂದಿನಿ ಪೆÇೀಲಿಸ್ ಅಧಿಕಾರಿಗಳು, ಮುಖಂಡರು ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.