ಸದಸ್ಯತ್ವ ಅಭಿಯಾನ
ಚನ್ನಮ್ಮನ ಕಿತ್ತೂರು,ಅ.2: ಪ್ರಧಾನಿ ನರೇಂದ್ರ ಮೋದಿಜೀಯವರು ಪಕ್ಷ ಬಲಪಡಿಸುವ ಕೆಲಸ ಮಾಡಿದ್ದಾರೆ. ಅದರಂತೆ ನಾವು-ನೀವೆಲ್ಲರೂ ಜೊತೆಗೂಡಿ ಸದಸ್ಯತ್ವ ಅಭಿಯಾನ ಮಾಡುವುದರ ಮೂಲಕ ಪಕ್ಷದ ಬುನಾದಿ ಗಟ್ಟಿಗೊಳಿಸಬೇಕು ಅಂದಾಗ ಪ್ರಧಾನಿಯವರು ಕೆಲಸ ಮಾಡಲು ಗಟ್ಟಿಯಾಗಿ ನಿಲ್ಲುತ್ತಾರೆಂದು ಕೆನರಾ ಸಂಸದ ವಿಶ್ವೇಶ್ವರ ಕಾಗೇರಿ ಹೇಳಿದರು.
ಕ್ಷೇತ್ರಾಧ್ಯಂತ ಎಂ.ಕೆ.ಹುಬ್ಬಳ್ಳಿ, ಬೈಲೂರು, ಅಂಬಡಗಟ್ಟಿ, ತಿಗಡೋಳ್ಳಿ ಸೇರಿದಂತೆ ಇನ್ನೂ ಹಲವು ಗ್ರಾಮಗಳಿಗೆ ಭೇಟಿನೀಡಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಕಿತ್ತೂರಿನ ಬಿಜೆಪಿ ಕಚೇರಿಯಲ್ಲಿ ಚಾಲನೆ ನೀಡುವ ಮೂಲಕ ಉದ್ಘಾಟಿಸಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಪಕ್ಷವಾದ ಬಿಜೆಪಿಯನ್ನು ಇನ್ನಷ್ಟು ಬಲಿಷ್ಠವಾಗಿ ಬೆಳೆಸಲು ಪಕ್ಷದ ಸರ್ವ ಕಾರ್ಯಕರ್ತರು ಶ್ರಮವಹಿಸಬೇಕು.
ಇದರ ಜೊತೆಯಲ್ಲಿ ಅಭಿಯಾನ ಸದಸ್ಯತ್ವದಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿ ಇದು ನನ್ನ ಸ್ವಂತ ಕೆಲಸವೆಂದು ಗ್ರಾಮಗಳಲ್ಲಿ ಕಾರ್ಯಕರ್ತರು ಸೇರಿ ಮನೆ-ಮನೆಗೆ ತೆರಳಿ ಮೊಬೈಲ್ ಮೂಲಕ ಸದಸ್ಯತ್ವ ನೊಂದಣಿ ಮಾಡಬೇಕೆಂದು ಮನವಿ ಮಾಡಿದರು. ಕಿತ್ತೂರು ಅಭಿವೃದ್ಧಿಗೆ ನಮ್ಮ ಪಕ್ಷ ಸದಾ ಬದ್ಧವಿದೆ ಅಭಿವೃದ್ದಿಯಾಗಬೇಕಾದರೆ ಪಕ್ಷಕ್ಕೆ ನಿಮ್ಮೇಲ್ಲರ ಶಕ್ತಿ ಮುಖ್ಯವಾಗಿದೆ. ಬರುವ ದಸರಾ ಹಬ್ಬ ಹಾಗೂ 200ನೇ ವರ್ಷದ ಚನ್ನಮ್ಮನ ಉತ್ಸವ ಅದ್ಧೂರಿಯಿಂದ ಎಲ್ಲರೂ ಜೊತೆಗೂಡಿ ಆಚರಿಸೋಣವೆಂದರು.
ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ ಪಕ್ಷ ಗಟ್ಟಿಗೊಳ್ಳಬೇಕಾದರೆ ಕಾರ್ಯಕರ್ತರ ಪಾತ್ರ ಹಿರಿಯದ್ದಾಗಿದೆ. ಈಗಾಗಲೇ ರಾಜ್ಯಗಳಿಂದ ಪ್ರತಿದಿನ ಅಂಕಿಅಂಶಗಳು ಬರುತ್ತಿವೆ. ದೇಶದಲ್ಲಿಯೇ ಅತಿ ಹೆಚ್ಚು ಸದಸ್ಯತ್ವ ಅಭಿಯಾನ ಮಾಡಿರುವುದು ಯಲಹಂಕಾ ವಿಧಾನಸಭಾ ಕ್ರೇತ್ರ ಇದು ಹೆಮ್ಮೆ ವಿಷಯ ಆ ನಿಟ್ಟಿನಲ್ಲಿ ವಿವಿಧ ಕ್ಷೇತ್ರದಲ್ಲಿ ಹೆಚ್ಚಿನ ನೊಂದಣಿಯಾಗಿವೆ ಅದಕ್ಕಾಗಿ ನಾವು-ನೀವೆಲ್ಲರೂ ಸೇರಿ ಈ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸೋಣವೆಂದರು.
ಉದ್ಯಮಿ ಹಾಗೂ ಬಿಜೆಪಿ ಮುಖಂಡೆ ಶ್ರೀಮತಿ ಲಕ್ಷ್ಮೀ ಇನಾಮದಾರ ಅಭಿಯಾನನ ಕುರಿತು ಮಾತನಾಡಿದರು,
ಇದೇ ಸಂದರ್ಭದಲ್ಲಿ ಕ್ಷೇತ್ರದ ದೇಮಟ್ಟಿ ಗ್ರಾಮದ ಗ್ರಾಪಂ ಸದಸ್ಯ ನಿಂಗಪ್ಪಾ ಅಂಬಡಗಟ್ಟಿ ಹಾಗೂ ಗ್ರಾಮದ 15 ಜನ ಯುವಕರು ಕಾಂಗ್ರೇಸ್ ಪಕ್ಷ ತೊರೆದು ಸಂಸದರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂರು.
ಈ ವೇಳೆ ಮಂಡಳ ಅಧ್ಯಕ್ಷ ಶ್ರೀಕರ ಕುಲಕರ್ಣಿ ಮುಖಂಡರುಗಳಾದ ಸಂದೀಪ ದೇಶಪಾಂಡೆ, ಮಾಜಿಮಂಡಳಅಧ್ರಕ್ಷ ಡಾ.ಬಸವರಾಜ ಪರವನ್ನರ, ಚನ್ನಬಸಪ್ಪ ಮೊಕಾಶಿ, ಶಿವಾನಂದ ಹನಮಸಾಗರ, ಹೇಮಾವತಿ ಬಿಕ್ಕಣ್ಣವರ, ಬಸನನಗೌಡ ಸಿದ್ರಾಮನಿ, ಉಳವಪ್ಪ ಉಳ್ಳಾಗಡ್ಡಿ, ಬಸವರಾಜ ಗಡ್ಡೆನ್ನವರ, ಸರಸ್ವತಿ ಹೈಬತ್ತಿ, ರಮೇಶ ಉಗರಖೋಡ, ಬಸವರಾಜ ಮಾತನವರ, ಕ್ಷೇತ್ರದ ವಿವಿಧ ಗ್ರಾಮಗಳ ಕಾರ್ಯಕರ್ತರು ಪಪಂ ಸದಸ್ಯರು, ಉಪಸ್ಥಿತರಿದ್ದರು.