ಮಹಾತ್ಮರ ತತ್ವ ಜ್ಞಾನ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಹಲಬರ್ಗಾ ಶ್ರೀ
ಬೀದರ್ ಃಅ.2: ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರವರು ವಿದೇಶಗಳ ಪ್ರವಾಸ ಮುಗಿಸಿ ಮರಳಿ ಭಾರತಕ್ಕೆ ಬಂದಾಗ ನೆಲದ ಪವಿತ್ರ ಭೂಮಿಗೆ ಬಂದು ಮಣ್ಣನ್ನು ತಮ್ಮ ಹಣೆಗೆ ಹಚ್ಚಿಕೊಂಡಾಗ ಜೊತೆಗಿದ್ದವರು ಕೇಳಿದರಂತೆ ವಿದೇಶಗಳಿಗೆ ಹೋದಾಗ ಅಲ್ಲಿಯ ಮಣ್ಣು ತಲೆಗೆ ಹಚ್ಚಿಕೊಳ್ಳದೇ ಭಾರತಕ್ಕೆ ಬಂದಾಗ ಮಾತ್ರ ಏಕೆ ಹಚ್ಚಿಕೊಂಡಿರಿ ಎಂದು ಕೇಳಿದರಂತೆ ಅದಕ್ಕೆ ಉತ್ತರಿಸಿದ ವೀರ ಸನ್ಯಾಸಿ ಭಾರತ ಸಂತರ, ಮಹಾತ್ಮರ, ಶರಣರ, ತತ್ವ ಜ್ಞಾನಿಗಳ ನೆಲೆವೀಡು ಅದಕ್ಕಾಗಿ ಮಣ್ಣನ್ನು ತಲೆಗೆ ಹಚ್ಚಿಕೊಂಡೆ ಎಂದರಂತೆ ಹೀಗೆ ಈ ಪುಣ್ಯ ಭೂಮಿಯಲ್ಲಿ ಜನಿಸಿದ ನಾವೇಲ್ಲರೂ ಪುಣ್ಯವಂತರು ಎಂದು ಹಲಬರ್ಗಾದ ರಾಚೋಟೆಶ್ವರ ವಿರಕ್ತ ಮಠದ ಪರಮ ಪೂಜ್ಯ ಶ್ರೀ ಹಾವಗಿಲಿಂಗೇಶ್ವರ ಶಿವಾಚಾರ್ಯರು ನುಡಿದರು.
ಅವರು ರವಿವಾರ ಮರಕಲ್ ಗ್ರಾಮದಲ್ಲಿ ಸ್ನೇಹಾ ಕಲ್ಚರಲ್ ಐಂಡ್ ಸೋಶಿಯಲ್ ಫೌಂಡೇಶನ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ 2023-24ನೇ ಸಾಲಿನ ಸಾಮಾನ್ಯ ಧನ ಸಹಾಯ ಯೋಜನೆಯಡಿ ಜಿಲ್ಲಾ ಮಟ್ಟದ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಪುಣ್ಯವಂತರಾದ ಪ್ರತಿಯೋಬ್ಬರು ಸಂಸ್ಕಾರಯುತರಾಗಿ ಅರಿವೂ ಮೂಡಿಸಿಕೊಳ್ಳೂವ ಮೂಲಕ ಮಹಾತ್ಮರ ತತ್ವ ಜ್ಞಾನ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಲಾಡಗೇರಿ ಹಿರೇಮಠ ಸಂಸ್ಥಾನದ ಪರಮ ಪೂಜ್ಯ ಶ್ರೀ ಷ.ಬ್ರ. ಗಂಗಾಧರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಸಿದ್ದರು.
ಹಂಸಕವಿ ಹಣಮಂತಪ್ಪಾ ವಲ್ಲೇಪುರೆ ಅವರು ಮಾತನಾಡುತ್ತಾ, ಮಮ್ಮಿ ಡ್ಯಾಡಿ ಎನ್ನದೇ ಅಮ್ಮ ಅಪ್ಪ ಎಂದು ಕರೆಯುವ ಮೂಲಕ ಭವ್ಯ ಭಾರತದ ನಮ್ಮ ಸಂಸ್ಕøತಿ ಜಾನಪದ ತತ್ವ ಪರಿಪಾಲನೆ ಮಾಡಬೇಕೆಂದ ಅವರು ಬೀದರ್ ಪೊಲೀಸ್ ಗ್ರಂಥಾಲಯದಲ್ಲಿ ಅಭ್ಯಾಸ ಮಾಡಿರುವ ಸುಮಾರು 225 ಜನ ಯುವಕರು ಸರ್ಕಾರಿ ನೌಕರಿ ಪಡೆದಿದ್ದಾರೆ. ನೀವುಗಳೂ ಸಹ ಇಲ್ಲಿಗೆ ಭೇಟಿ ಕೊಡಿರೆಂದು ಕರೆ ನೀಡಿದರು.
ಕರ್ನಾಟಕ ಜಾನಪದ ಅಕಾಡೇಮಿ ಸದಸ್ಯರಾದ ವಿಜಯಕುಮಾರ ಸೋನಾರೆ ಅವರು ಮಾತನಾಡಿ, ವಿದ್ಯಾಥಿಗಳು ತಮ್ಮ ಅಜ್ಜಿ ಮತ್ತು ಅವ್ವಂದಿರರಿಂದ ಸಾಂಪ್ರದಾಯಿಕ ಪರಂಪರೆಯ ಜಾನಪದ ಹಾಡುಗಳನ್ನು ಸಂಗ್ರಹಿಸಿ ಹಾಡಬೇಕು. ನುಡಿ ಕನ್ನಡ ನಡೆ ಕನ್ನಡ ಗಾಳಿ ಕನ್ನಡ ಜಲ ಕನ್ನಡ ಉಸಿರು ಕನ್ನಡ ಹಸಿರು ಕನ್ನಡ ಎಲ್ಲೇಲ್ಲೂ ಕನ್ನಡಮಯ ಎಂದರಿಯಬೇಕು. ಮಾತ್ರ ಭಾಷೆಯ ರಕ್ಷಣೆ ಸದಾ ಮಾಡಬೇಕೆಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ ಅವರು ಮಾತನಾಡಿ, ಕಲಾವಿದರು ಇನ್ನು ಹೆಚ್ಚಿನ ಕಲಾ ಪ್ರದರ್ಶನಗಳು ಮಾಡುವ ಮೂಲಕ ತಮ್ಮ ಕಲೆಗಳನ್ನು ಹೊರಹಾಕಬೇಕೆಂದರು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಡಾ.ಶ್ರೀಮಂತ ಸಪಾಟೆ ಮಾತನಾಡಿ, ಕಳೆದ 10 ವರ್ಷಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದೆ ಎಂದು ಹೇಳಿದರು. ಮರಕಲ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಈಶ್ವರಮ್ಮಾ ಬಸವರಾಜ್ ಓಂಕಾರೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪತ್ರಕರ್ತ ನಾಗಶೆಟ್ಟಿ ಧರಮಪೂರ್ ಜಾನಪದಗೀತೆಗಳನ್ನು ಹಾಡಿ ಜನ ಮನ ರಂಜಿಸಿದರು. ಶಿಕ್ಷಕ ತುಕಾರಾಮ್ ಭೋಲಾ ಜಾದು ಪ್ರದರ್ಶನ ಮಾಡಿದರು. ವೇದಿಕೆಯ ಮೇಲೆ ರಾಜ್ಯ ಯುವ ಪ್ರಶಸ್ತಿ ಪುರಸ್ಕøತರಾದ ಸುನೀಲ ಭಾವಿಕಟ್ಟಿ, ಪರಮೇಶ್ವರ ಬಿರಾದಾರ್, ಅಂಬ್ರಿಷ ಮಲ್ಲೇಶಿ, ಎಂ.ಎಸ್. ಶಿರೋಮಣಿ, ಸುನೀಲಕುಮಾರ ಸಿಂಗಾರೆ, ಉಪಸ್ಥಿತರಿದ್ದರು.
ರಂಗಮ್ಮ ಕಲಾತಂಡ, ನಾಗಮ್ಮ ಕಲಾತಂಡ, ಝರಾಬಾಯಿ ಕಲಾತಂಡ, ವಿಜಯಲಕ್ಷಿ ಕಲಾತಂಡ, ದೇವಿದಾಸ್ ಚಿಮಕೋಡ್ ಕಲಾತಂಡಗಳಿಂದ ಜಾನಪದ ಗಾಯನ ಸಾದರ ಪಡಿಸಿದರು.
ಪ್ರಾರಂಭದಲ್ಲಿ ಶಿವಕುಮಾರ ಪಾಂಚಾಳ ಭಾವಗೀತೆ ತತ್ವಪದಗಳು ಹಾಡಿದರು. ಸ್ಪಂದನಾ ಮತ್ತು ಕವನ ಸ್ವಾಗತ ಗೀತೆ ಹಾಡಿದರು. ಡಾ.ಶ್ರೀಮಂತ ಸಪಾಟೆ ಸ್ವಾಗತಿಸಿದರು. ಸುನೀತಾ ಮರಕಲ್ ಕಾರ್ಯಕ್ರಮ ನೀರೂಪಿಸಿ, ವಂದಿಸಿದರು.