ನವರಾತ್ರಿ ಉತ್ಸವ
ಬಾದಾಮಿ,ಅ.2: ಇಲ್ಲಿನ ಪ್ರಾಚೀನ ಕಾಲದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಅ.3 ರಿಂದ 12 ರವರೆಗೆ ನವರಾತ್ರಿ ಉತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಅ.3 ರಂದು U್ಪರುಡ ಪಟಾರೋಹಣದೊಂದಿಗೆ ಘಟಸ್ಥಾಪನೆ, 5 ರಂದು ಸಪ್ತ ರಾತ್ರೋತ್ಸವ, 7 ರಂದು ಗರುಡ ಪಂಚಮಿ ಪಂಚ ರಾತ್ರೋತ್ಸವ, 10 ರಂದು ತ್ರಿ ರಾತ್ರೋತ್ಸವ ಸರಸ್ವತಿ ಪೂಜೆ, 11 ರಂದು ಏಕ ರಾತ್ರೋತ್ಸವ ದುರ್ಗಾಷ್ಟಮಿ, ಮಹಾನವಮಿ, ಆಯುಧ ಪೂಜೆ, 12 ರಂದು ವಿಜಯ ದಶಮಿ ಜರುಗಲಿದೆ.
ಅಂದು ಬೆಳಿಗ್ಗೆ 8 ಗಂಟೆಗೆ ಶ್ರೀ ವೆಂಕಟೇಶ್ವರ ಪುರಾಣ ಮಂಗಲ, 9 ಕ್ಕೆ ರಥಾಂಗ ಹೋಮ, ಮಧ್ಯಾಹ್ನ 12 ಗಂಟೆಗೆ ರಥೋತ್ಸವ, ಸಂಜೆ 6.30 ಕ್ಕೆ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಶಮಿ ಪೂಜೆ ಬನ್ನಿ ಮುಡಿಯುವುದು ನಡೆಯಲಿದೆ.
ನಿತ್ಯ ಸಂಜೆ 7 ಗಂಟೆಗೆ ಪಲ್ಲಕ್ಕಿ ಉತ್ಸವ ಹಾಗೂ 7.30 ಕ್ಕೆ ವಾಹನೋತ್ಸವದ ನಗರ ಪ್ರದಕ್ಷೀಣೆ ನಡೆಯಲಿದೆ. ದಿ.13 ರಂದು ಅವಭೃತ ಸ್ನಾನ (ಚಕ್ರಸ್ನಾನ) ಹಾಗೂ 16 ರಂದು ಕಳಸ ಇಳಿಯುವುದು ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಡಾ.ವ್ಹಿ.ವೈ. ಭಾಗವತ, ಕಾರ್ಯದರ್ಶಿ ಎಸ್.ಜಿ. ಕುಲಕರ್ಣಿ ಜಂಟಿಯಾಗಿ ತಿಳಿಸಿದ್ದಾರೆ.
