ಜಮೀನು ಅತಿಕ್ರಮಣ ತಡೆಗೆ ಮೇಯರ್ ಭರವಸೆ
ಕಲಬುರಗಿ,ಆ 24: ನಗರದ ವಾರ್ಡ ಸಂಖ್ಯೆ 55 ರಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಅತಿಕ್ರಮಣ ವಿಷಯಕ್ಕೆ ಸಂಬಂಧಿಸಿದ ನಾಗರಿಕ ಮನವಿಗೆ ಸ್ಪಂದಿಸಿದ ಮಹಾಪೌರ ಯಲ್ಲಪ್ಪ ನೈಕೋಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನಗರದ ವಾರ್ಡ್ ನಂಬರ್ 55ರ ರಾಮ ಮಂದಿರ ಪ್ರದೇಶದ ಎದುರುಗಡೆ ಬರುವ,ದೇವ ನಗರ, ಮಹಾರಾಜ ಬಡಾವಣೆಯ ಹನುಮಾನ್ ಮಂದಿರದ ಹಿಂದುಗಡೆ ಇರುವ ಸಾರ್ವಜನಿಕ ಸ್ಥಳದಲ್ಲಿ ಬಡಾವಣೆಯ ಕೆಲವು ಅತಿಕ್ರಮಣಕಾರರು ಮಂದಿರಕ್ಕೆ ಸೇರಿದ ಸಾರ್ವಜನಿಕ ಸ್ಥಳದಲ್ಲಿ ಸ್ವಂತ ಕಟ್ಟಡ ಕಟ್ಟುವ ನಿಟ್ಟಿನಲ್ಲಿ, ಲೇಔಟ್ ನ ಹಳೆಯ ಕಾಗದ ಪತ್ರಗಳನ್ನು ತಿದ್ದುಪಡಿ ಮಾಡಿಕೊಂಡು ಅನಧಿಕೃತ ವಾಗಿ,ಅತಿಕ್ರಮಣ ಮಾಡಲು, ಹೊರಟಿದ್ದರು. ಇದಕ್ಕೆ ಸ್ಪಂದಿಸಿದ ನಗರದ ಮಹಾಪೌರರು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಸಾರ್ವಜನಿಕ ಅಭಿಪ್ರಾಯ ಪಡೆದು ಅದರ ಮೂಲದ ದಾಖಲಾತಿಗಳನ್ನು ಪರಿಶೀಲಿಸಿ, ತಕ್ಷಣವೇ ಅದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೊಳ್ಳುವುದಾಗಿ ಭರವಸೆ ಕೊಟ್ಟು, ಬರುವ ದಿನಗಳಲ್ಲಿ ಇಂಥ ಯಾವುದೇ ಅತಿಕ್ರಮಣವನ್ನು ನಗರದಲ್ಲಿ ಸಾರ್ವಜನಿಕರು ಸಹಿಸಬಾರದು. ಯಾರಿಗೂ ಹೆದರ ಬಾರದು ಎಂಬ ಕಟ್ಟುನಿಟ್ಟಿನ ಆದೇಶವನ್ನು ನೀಡಿದರು.
ಈ ಸಂದರ್ಭದಲ್ಲಿ ಬಡಾವಣೆ ಮುಖಂಡರಾದ ಬಸವರಾಜ್ ಬೂದಿಹಾಳ ಶಂಕರ್ ರಾಥೋಡ್, ಶ್ರೀನಿವಾಸ್ ಕಪ್ನೂರ,ಆಕಾಶ್ ಸಂಗಾಬಿ, ರಾಮಮೋಹನ್ ಆಚಾರ್ಯ, ಮೋಹನ್ ಕುಲ್ಕರ್ಣಿ,ರಾಜು ಪವಾರ್, ಮಲ್ಲಿನಾಥ ಪಾಟೀಲ್, ಬಸವರಾಜ ಕೋಬಾಲ್, ಸಿದ್ದು ಪಾಟೀಲ್, ನರಸಿಂಹ ಜಡಿ, ಧರ್ಮಣ್ಣ ಪಟ್ಟಣ್ಣ ಸೇರಿದಂತೆ ಅನೇಕರು ಇದ್ದರು