ಕಲ್ಬುರ್ಗಿಯಲ್ಲಿ ಸಿಎನ್‍ಜಿ ಮದರ್ ಸ್ಟೇಷನ್ ಉದ್ಘಾಟನೆ
ಕಲಬುರಗಿ,ಆ.24 : ಭಾರತದಲ್ಲಿ ಮುಂಚೂಣಿ ನಗರಗಳಲ್ಲಿ ಅನಿಲ ವಿತರಣಾ ಸಂಸ್ಥೆಯಾದ ಎಜಿ ಅಂಡ್ ಪಿ ಪ್ರಥಮ್ ತನ್ನ ಮೊದಲ ಕೊಕೊ ಅಂದರೆ ಕಂಪನಿ ಮಾಲೀಕತ್ವದ, ಕಂಪನಿ ಕಾರ್ಯಾಚರಣೆ ನಡೆಸುವಂತಹ(ಸಿಒಸಿಒ) ಸಿಎನ್‍ಜಿ ಮದರ್ ಸ್ಟೇಷನ್ ಕಲಬುರ್ಗಿಯ ಕಮಲಾಪುರದಲ್ಲಿ ಉದ್ಘಾಟಿಸಿದೆ.
ಹೆಚ್ಚು ಸ್ವಚ್ಛವಾದ ಸಂಚಾರ ಪರಿಹಾರಗಳು, ವಿದ್ಯುತ್ ದಕ್ಷತೆಯ ಕೈಗಾರಿಕಾ ಮತ್ತು ವಾಣಿಜ್ಯ ಮೂಲಸೌಕರ್ಯ ಮತ್ತು ಸುರಕ್ಷಿತ ಅನಿಲ ಪೂರೈಕೆಯನ್ನು ಮನೆಗಳಿಗೆ ತಲುಪಿಸಲು ಈ ಅತ್ಯಾಧುನಿಕ ಸೌಲಭ್ಯ ವಿನ್ಯಾಸಗೊಳಿಸಲಾಗಿದೆ. ಕಮಲಾಪುರ, ಕಲಬುರಗಿಯ ಕಪನೂರ ಮತ್ತು ವಿಜಯಪುರ ಜಿಲ್ಲೆಗಳಲ್ಲಿನ ಪ್ರದೇಶಗಳು ಹೆಚ್ಚು ಕ್ಷಿಪ್ರ ಮತ್ತು ನಂಬಿಕಾರ್ಹ ನೈಸರ್ಗಿಕ ಅನಿಲ ಪೂರೈಕೆಯಿಂದ ಲಾಭ ಪಡೆಯಲಿವೆ.
ಉದ್ಘಾಟನೆ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಕಲಬುರ್ಗಿಯ ಪೆÇಲೀಸ್ ಸೂಪರಿಂಟೆಂಡೆಂಟ್ ಅಡ್ಡೂರು ಶ್ರೀನಿವಾಸುಲು, ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ಎನ್‍ಎಚ್‍ಎಐ) ಕಲಬುರ್ಗಿಯ ಪಿಐಯು ಯೋಜನಾ ನಿರ್ದೇಶಕ ಮಹೇಶ್ ಪಾಟೀಲ್, ಕಲಬುರ್ಗಿ ಮತ್ತು ವಿಜಯಪುರದ ಪ್ರಾದೇಶಿಕ ಮುಖ್ಯಸ್ಥರಾದ ಎಜಿ ಅಂಡ್ ಪಿ ರಂಗನಾಜನ್ ಶೇಷಾದ್ರಿ ಹಾಜರಿದ್ದರು.
ಕಲಬುರ್ಗಿಯ ಪೆÇಲೀಸ್ ಸೂಪರಿಂಟೆಂಡೆಂಟ್ ಅಡ್ಡೂರು ಶ್ರೀನಿವಾಸುಲು, ಐಪಿಎಸ್ ಅವರು ಕೊಕೊ ಸಿಎನ್‍ಜಿ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ಎಜಿ&ಪಿ ಪ್ರಥಮ್ ಸಂಸ್ಥೆಯನ್ನು ಶ್ಲಾಘಿಸಿದರು. ಈ ಯೋಜನೆ ಕಲಬುರ್ಗಿಯಲ್ಲಿ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್(ಸಿಎನ್‍ಜಿ)ನ ಸಂಪರ್ಕ ಹೆಚ್ಚು ಸುಲಭವಾಗಿ ಲಭಿಸುವಂತೆ ಮಾಡುವತ್ತ ಗಮನಾರ್ಹ ಹೆಜ್ಜೆಯಾಗಿದೆ. ಹೆಚ್ಚು ಹಸಿರಾದ ಭವಿಷ್ಯದ ಸರ್ಕಾರದ ದೃಷ್ಟಿಕೋನಕ್ಕೆ ತಕ್ಕಂತೆ ಈ ಉಪಕ್ರಮ ಇದ್ದು, ಸ್ಥಳೀಯ ಸಮುದಾಯ ಸಿಎನ್‍ಜಿಯಿಂದ ಲಾಭ ಪಡೆಯಲು ಅವಕಾಶ ಮಾಡಿಕೊಡಲಿದೆ. ಜೊತೆಗೆ ನೈಸರ್ಗಿಕ ಅನಿಲವನ್ನು ಇಂಧನ ಆಯ್ಕೆಯಾಗಿ ಅಳವಡಿಸಿಕೊಳ್ಳುವುದರೊಂದಿಗೆ ಹೆಚ್ಚು ಸ್ವಚ್ಛ ಮತ್ತು ಹಸಿರಾದ ಕಲಬುರ್ಗಿಗೆ ಕೊಡುಗೆ ಲಭಿಸಲಿದೆ. ನೈಸರ್ಗಿಕ ಅನಿಲವನ್ನು ವಿಸ್ತಾರವಾಗಿ ಬಳಸುವುದನ್ನು ಪೆÇ್ರೀತ್ಸಾಹಿಸಲು ಅಧಿಕಾರಿಗಳು ಆಸಕ್ತಿ ಹೊಂದಿದ್ದಾರೆ. ಕಲಬುರ್ಗಿಯಲ್ಲಿ ನೈಸರ್ಗಿಕ ಅನಿಲಕ್ಕೆ ಮೂಲಸೌಕರ್ಯವನ್ನು ಎಜಿ ಅಂಡ್ ಪಿ ಪ್ರಥಮ್ ಮುಂದುವರೆಸುವ ಖಾತ್ರಿಯನ್ನು ನಾನು ಮಾಡಿಕೊಳ್ಳುತ್ತೇನೆ'' ಎಂದರು. ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ (ಎನ್‍ಎಚ್‍ಎಐ) ಕಲಬುರ್ಗಿಯ ಪಿಐಯು ಯೋಜನಾ ನಿರ್ದೇಶಕ ಮಹೇಶ್ ಪಾಟೀಲ್ ಅವರು ಸುರಕ್ಷಿತ ಮತ್ತು ಕಡಿಮೆ ಖರ್ಚಿನ ಸಿಎನ್‍ಜಿ ಬಳಕೆ ಮಾಡಬೇಕೆಂದು ಪುನರುಚ್ಛರಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಇಂತಹ ಯೋಜನೆಯ ಪ್ರಾಮುಖ್ಯತೆ ಕುರಿತು ಮಾಹಿತಿ ನೀಡಿದರು. ಯೋಜನೆ ಬೆಂಬಲಿಸುವಲ್ಲಿ ಎನ್‍ಎಚ್‍ಎಐ ಪಾತ್ರ ಅಲ್ಲದೆ, ಸಿಎನ್‍ಜಿ ಸುರಕ್ಷತೆ ಮತ್ತು ಕಡಿಮೆ ಖರ್ಚಿನ ಇಂಧನವಾಗಿರುವ ಅನುಕೂಲಗಳ ಬಗ್ಗೆ ತಿಳಿಸಿದರಲ್ಲದೆ, ಇದರ ಲಾಭ ಮಾಡಿಕೊಳ್ಳಲು ಸಾರ್ವಜನಿಕರಿಗೆ ಕರೆ ನೀಡಿದರು. ಇದರಿಂದ ಕಲಬುರ್ಗಿಯಲ್ಲಿ ಮಾಲಿನ್ಯದ ಮಟ್ಟ ಕಡಿಮೆ ಮಾಡಲು ಸಹಾಯವಾಗಲಿದೆ ಎಂದು ತಿಳಿಸಿದರು. ಎಜಿ ಅಂಡ್ ಪಿ ಕಲಬುರ್ಗಿ ಮತ್ತು ವಿಜಯಪುರದ ಪ್ರಾದೇಶಿಕ ಮುಖ್ಯಸ್ಥ ರಂಗನಾಜನ್ ಶೇಷಾದ್ರಿ ಮಾತನಾಡಿ,ಕಲಬುರ್ಗಿ ಮತ್ತು ವಿಜಯಪುರದಲ್ಲಿ ವಾಹನಗಳಿಗೆ ಸೇವೆ ಸಲ್ಲಿಸುತ್ತಿರುವ 18 ಸಿಎನ್‍ಜಿ ಸ್ಟೇಷನ್‍ಗಳ ಕಾರ್ಯಾಚರಣೆಯನ್ನು ಎಜಿ ಅಂಡ್ ಪಿ ನಡೆಸುತ್ತಿದೆ. ಮುಂದಿನ ತಿಂಗಳಲ್ಲಿ ಕಲಬುರಗಿ ಹೊರವಲಯದ ಕಪನೂರ್ ಬಳಿ ಹೆಚ್ಚುವರಿ ಕೊಕೊ ಸಿಎನ್‍ಜಿ ಸ್ಟೇಷನ್ ಉದ್ಘಾಟನೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ನಿವ್ವಳ ಶೂನ್ಯ ಹೊಗೆಯುಗುಳುವಿಕೆ ಸಾಧಿಸುವ ಭಾರತದ ಗುರಿಗೆ ತಕ್ಕಂತೆ ಈ ವಿಸ್ತರಣೆ ಕೈಗೊಳ್ಳಲಾಗುತ್ತಿದೆ. 2030ರ ಹೊತ್ತಿಗೆ ಪ್ರಸಕ್ತ ಶೇ.5ರಿಂದ ಶೇ.15ಕ್ಕೆ ಶಕ್ತಿಯ ಮಿಶ್ರಣಕ್ಕೆ ನೈಸರ್ಗಿಕ ಅನಿಲದ ಕೊಡುಗೆ ಹೆಚ್ಚಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಈ ಅತ್ಯಾಧುನಿಕ ಸೌಲಭ್ಯದಲ್ಲಿ ನಾವು ರೂ. 500 ಕೋಟಿ ಹೂಡಿಕೆ ಮಾಡಿದ್ದು, ಆ ಮೂಲಕ ಕಲಬುರ್ಗಿಯ ಎಲ್ಲೆಡೆ ಸುರಕ್ಷಿತ ಹಾಗೂ ತಡೆರಹಿತ ಮತ್ತು ಕಡಿಮೆ ವೆಚ್ಚದ ಹಸಿರು ಇಂಧನದ ವಿತರಣೆಯ ಖಾತ್ರಿ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ಭವಿಷ್ಯದ ಇಂಧನವಾಗಿರುವ ನೈಸರ್ಗಿಕ ಅನಿಲದ ಅನುಕೂಲ ಪಡೆದುಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸಲಾಗುವುದು” ಎಂದರು.
ಸಿಎನ್‍ಜಿ ಮದರ್ ಸ್ಟೇಷನ್ ಸೌಲಭ್ಯವನ್ನು ಯಶಸ್ವಿಯಾಗಿ ಆರಂಭಿಸುವುದರೊಂದಿಗೆ ನೈಸರ್ಗಿಕ ಅನಿಲದ ಸಂಪರ್ಕವನ್ನು ಪೈಪ್‍ಲೈನ್ ಜಾಲದ ಮೂಲಕ ಹರಿಸಿ ಅವಕಾಶ ಮಾಡಿಕೊಡಲಾಗುತ್ತಿದೆ. ಈ ಜಾಲ ಪ್ರಸ್ತುತ 64 ಕಿಲೋಮೀಟರ್‍ಗಳಷ್ಟು ಸ್ಟೀಲ್ ಪೈಪ್‍ಲೈನ್‍ಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, 2024ರ ಅಂತ್ಯದ ಹೊತ್ತಿಗೆ ಒಟ್ಟು 25 ಕಿಲೋಮೀಟರ್ ಪೈಪ್‍ಲೈನ್ ಕಾರ್ಯಾಚರಣೆ ನಡೆಸುವ ನಿರೀಕ್ಷೆ ಇದೆ. ಇದು ಕಲಬುರ್ಗಿ ಮತ್ತು ವಿಜಯಪುರ ಜಿಲ್ಲೆಗಳ ಸಾರಿಗೆ ವಿಭಾಗ, ವಾಣಿಜ್ಯ ಮತ್ತು ಕೈಗಾರಿಕಾ ಸ್ಥಾಪನೆಗಳ ಇಂಧನ ಅಗತ್ಯಗಳನ್ನು ಪೂರೈಸಲಿದೆ.