ಸಿವ್ಹಿಲ್ ಪ್ರಕರಣ ಕ್ರಿಮಿನಲ್ ಸ್ವರೂಪವಾಗಿ ಪರಿಗಣಿಸುವಂತಿಲ್ಲ: ಹೈಕೋರ್ಟ
ವಿಜಯಪುರ/ಕಲಬುರಗಿ,ಆ.24: ಮನೆಯೊಂದು ಬಾಡಿಗೆ ಪಡೆದು ಬಿಡದಿದ್ದಾಗ ಜಬರದಸ್ತಾಗಿ ಮನೆಯ ಹೊರಗೆ ಹಾಕಿ ಜಾತಿ ನಿಂದನೆ ಮಾಡಿ, ತನಗೆ ಹಲ್ಲೆ ಇತ್ಯಾದಿ ಕೃತ್ಯ ಮಾಡಿದ್ದಾರೆಂಬ ಆರೋಪದ ಮೇಲೆ ಎಸ್ .ಸಿ ಎಸ್ಟಿ ಮತ್ತು ಜನರಲ್ ಸಮುದಾಯದ ಜನರ ಮೇಲೂ ತಿಕೋಟಾ ಪೆÇೀಲಿಸರು ಪ್ರಕರಣ ದಾಖಲಿಸಿ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಮತ್ತು ಇತರ ಕಾಯ್ದೆಯ ಆರೋಪಗಳ ಅಡಿ ಸಲ್ಲಿಸಿದ್ದ ದೋಷಾರೋಪಣ ಪಟ್ಟಿ ಸಲ್ಲಿಸಿದ ನಂತರ ಆರೋಪಿಗಳು ದೋಷಮುಕ್ತ ಮಾಡಲು (ಡಿಸ್ ಚಾರ್ಜಗೆ) ಸಲ್ಲಿಸಿದಾಗ ಅದನ್ನು ವಿಜಯಪುರದ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪುರಸ್ಕರಿಸಿ ಆರೋಪಿಗಳನ್ನು ಡಿಸ್ಚಾರ್ಜ್ ಮಾಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ ಪೀಠವು ಎತ್ತಿ ಹಿಡಿದಿದೆ.
ವಿಜಯಪುರ ಜಿಲ್ಲಾ ನ್ಯಾಯಾಲಯದ ಈ ಡಿಸ್ ಚಾರ್ಜ್ ಆದೇಶ ಮಾಡಿದ್ದು ಇದನ್ನು ರದ್ದುಪಡಿಸಲು ಯಾವುದೇ ಸೂಕ್ತ ಕಾರಣಗಳಿಲ್ಲ,ವಿಚಾರಣಾ ನ್ಯಾಯಾಲಯದ ಈ ಆದೇಶ ಸರಿಯಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಆ. 23 ರಂದುಹೈಕೋರ್ಟ್ ಕಲ್ಬುರಗಿಯಲ್ಲಿ ಈ ತೀರ್ಪು ಬಂದಿದೆ.
ಹೈಕೋರ್ಟಲ್ಲಿ ಫೀರ್ಯಾದಿದಾರಳು ಕ್ರಿಮಿನಲ್ ಅಪೀಲು ಸಲ್ಲಿಸಿದ್ದರು , ಈ ಕುರಿತು ಫಿರ್ಯಾದಿಗೆ ಮತ್ತು ಆರೋಪಿತರಿಗೆ ಉಭಯರ ಪರ ವಾದ ವಿವಾದ ಆಲಿಸಿದ ಹೈ ಕೋರ್ಟ ನ್ಯಾಯಮೂರ್ತಿ ಹುದ್ದಾರ ಅವರು ಪ್ರಕರಣವನ್ನು ತೀರ್ಪಿಗಾಗಿ ಕಾಯ್ದಿರಿಸಿದ್ದರು.ಶುಕ್ರವಾರ ತೀರ್ಪು ಪ್ರಕಟಿಸಿದ ನ್ಯಾಮೂರ್ತಿಗಳು, ವಿಜಯಪುರ ಜಿಲ್ಲಾ ನ್ಯಾಯಾಲಯವು ಆರೋಪಿಗಳನ್ನು ದೋಷಮುಕ್ತಗೊಳಿಸಿ ಮಾಡಿದ್ದ ಆದೇಶವನ್ನು ಎತ್ತಿ ಹಿಡಿದು ಫಿರ್ಯಾದಿ ಸಲ್ಲಿಸಿದ ಕ್ರಿಮಿನಲ್ ಅಪೀಲನ್ನು ಡಿಸ್ಮಿಸ್ ಮಾಡಿದ್ದಾರೆ.
ಆರೋಪಿತರ ಪರ ಹಿರಿಯ ಖ್ಯಾತ ನ್ಯಾಯವಾದಿ ವಿಜಯಪುರದ ಮತ್ತು ಹೈಕೋರ್ಟ ಎರಡೂ ಕೋರ್ಟಲ್ಲಿ ವಾದ ಮಂಡಿಸಿತಮ್ಮ ಪಕ್ಷಗಾರರಿಗೆ ನ್ಯಾಯ ಕೊಡಿಸಿದ್ದಾರೆ.
ಎಸ್ ಸಿ ಎಸ್ಟಿ ಜನರ ವಿರುದ್ದ ಎಸಿ ಎಸ್ಟಿ ಕಾಯ್ದೆ ಅನ್ವಯಿಸಲ್ಲ ಮತ್ತು ಸಿವ್ಹಿಲ್ ಪ್ರಕರಣವನ್ನು ಕ್ರಿಮಿನಲ್ ಪ್ರಕರಣವಾಗಿ ಪರಿವರ್ತಿಸುವುದು ಕಾನೂನು ಪ್ರಕಾರ ಸಮ್ಮತಿಸಲು ಅನುಮತಿ ಇರದು,ಅಷ್ಟಕ್ಕೂ ಮನೆ ಮಾಲೀಕರ ಮೇಲೆ ಮತ್ತು ಬುದ್ದಿ ಹೇಳಿದ ಜನರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಕಾನೂನಿನ ಮೂಲಕ ಮಾಡುವ ದೌರ್ಜನ್ಯವಾಗಿದೆ ಎಂದು ಭೃಂಗಿಮಠ ಆರೋಪಿಗಳ ಪರ ವಾದ ಮಂಡಿಸಿದ್ದರು ನಂತರಪ್ರಕರಣವನ್ನು ಕಳೆದ ವಾರ ತೀರ್ಪಿಗಾಗಿ ಕಾಯ್ದಿರಿಸಿದ್ದ ಹೈಕೋರ್ಟ್ ಶುಕ್ರವಾರ ತೆರೆದ ನ್ಯಾಯಾಲಯದಲ್ಲಿ ಘೋಷಿಸಿತು.