ಡೋಣಿ ಸೇತುವೆ ನಿರ್ಮಾಣಕ್ಕೆ 28 ಕೋಟಿ ಅನುಮೋದನೆ
ತಾಳಿಕೋಟೆ :ಆ.24: ಪಟ್ಟಣದಲ್ಲಿ ಹಾದು ಹೋಗಿರುವ ಮನಗೂಳಿ-ದೇವಾಪೂರ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಇರುವ ಹಳೆಯ ಸೇತುವೆ ಕುಸಿಯುವ ಹಂತ ತಲುಪಿದ್ದರಿಂದ ಆ ಸ್ಥಳದಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಗುರುವಾರರಂದು ನಡೆದ ಸಚೀವ ಸಂಪುಟದಲ್ಲಿ ಅನುಮೋದನೆ ಸಿಕ್ಕಿದೆ.
ಸದರಿ ಸ್ಥಳದಲ್ಲಿರುವ ಹಳೆಯ ಸೇತುವೆ ಸಂಪೂರ್ಣ ಶಿಥಿಲಾವಸ್ತೆ ತಲುಪಿದ್ದರಿಂದ ಕಳೆದ 2 ವರ್ಷಗಳಿಂದ ರಸ್ತೆ ಸಂಪರ್ಕ ಕಡಿತಗೊಳಿಸಿ ಕೆಳಮಟ್ಟದ ಸೇತುವೆ ಮೂಲಕ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿತ್ತು ಸದರಿ ಕೆಳಮಟ್ಟದ ಸೇತುವೆಯು ಡೋಣಿ ನಧಿಯಲ್ಲಿ ಪ್ರವಾಹ ಬಂದರೆ ಜಲಾವೃತವಾಗುತ್ತಾ ವಾಹನ ಸವಾರರಿಗೆ ತುಂಬಾ ತೊಂದರೆಯುಂಟಾಗುತ್ತಾ ಸಾಗಿತ್ತು.
ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಗೊಂಡ ನಂತರ ಕಳೆದ 1 ವರ್ಷಗಳಿಂದ ಹೊಸ ಸೇತುವೆ ನಿರ್ಮಾಣಕ್ಕೆ ಸರ್ಕಾರದ ಮುಂದೆ ಪ್ರಸ್ಥಾವನೆ ಸಲ್ಲಿಸಿ ಮುಖ್ಯಮಂತ್ರಿಗಳು ಮತ್ತು ಸಚೀವರ ಮೇಲೆ ಒತ್ತಡ ಹಾಕುತ್ತಾ ಸಾಗಿದ್ದರು ಗುರುವಾರರಂದು ನಡೆದ ಸಚೀವ ಸಂಪುಟ ಸಭೆಯಲ್ಲಿ ಸೇತುವೆಯ ಸರಪಳಿ 58.00 ಮತ್ತು 58.10 ಕೀ.ಮಿ.ನಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ರಸ್ತೆ ಅಭಿವೃದ್ದಿ ನಿಗಮ ನಿ,ದ ವತಿಯಿಂದ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದ್ದು ಪಟ್ಟಣದ ಜನರಲ್ಲಿ ಹರ್ಷವನ್ನುಂಟು ಮಾಡಿದೆ.