ಉತ್ತಮ ಸಾಧನೆಗೆ ಶಿಸ್ತು ಅತಿ ಮುಖ್ಯ:ಬೆಳಗುಂದಿ
ಸೈದಾಪುರ:ಆ.24:ಉತ್ತಮ ಸಾಧನೆಗೆ ಶಿಸ್ತು ಅತಿ ಮುಖ್ಯವಾಗಿದೆ. ಇದನ್ನು ಪೋಷಕರು ಸೇರಿದಂತೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಪ್ರಯತ್ನ ಮಾಡಬೇಕು ಎಂದು ವಿದ್ಯಾ ವರ್ಧಕ ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಅಭಿಪ್ರಾಯಪಟ್ಟರು.
ಪಟ್ಟಣದ ಮಲ್ಹಾರ ಕಾರಡ್ಡಿ ಬಸವಂತರಾಯ ಮತ್ತು ಸಿದ್ದಪ್ಪ ಸ್ಮಾರಕ ವಿದ್ಯಾ ವರ್ಧಕ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಹಣಕ್ಕಿಂತ ವ್ಯಕ್ತಿತ್ವ ಮಹತ್ವದ್ದಾಗಿದೆ. ಮಾನವೀಯ ಮೌಲ್ಯಗಳನ್ನು ನಮ್ಮದಾಗಿಸಿಕೊಳ್ಳಬೇಕು. ಈ ಗುಣಗಳನ್ನು ನಾವು ಶಿಕ್ಷಕರು, ಉಪಾನ್ಯಾಸಕರಿಂದ ಪಡೆಯಲು ಸಾಧ್ಯ. ಗುರುವಿನ ಸ್ಥಾನ ಅಂತ್ಯಂತ ಶ್ರೇಷ್ಠವಾದದು ಅವರನ್ನು ಗೌರವದಿಂದ ಕಾಣುವರು ಉತ್ತಮ ಸಾಧಕರಾಗುತ್ತಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಬಾಲಾಕರ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿಂದಿ ಉಪನ್ಯಾಸಕ ಅಣ್ಣರಾವ ಉಗಾಡೆ ಮಾತನಾಡಿ, ಮನೆಯೇ ಗ್ರಂಥಾಲಯವಾಗಬೇಕು ಇದಕ್ಕಾಗಿ ನಮಗೆ ಬೇಕಾದ ಜ್ಞಾನವನ್ನು ಮೊಬೈಲದಲ್ಲಿ ದೊರೆಯುತ್ತದೆ ಇದನ್ನು ಶೈಕ್ಷಣಿಕವಾಗಿ ಉಪಯೋಗ ಮಾಡಿಕೊಳ್ಳಬೇಕು. ದುಡ್ಡು ಕೊಟ್ಟು ತರಬೇತಿ ಕೇಂದ್ರಗಳಿಗೆ ಹೋಗುವುದು ತಪ್ಪುತ್ತದೆ. ಶರೀರಕ್ಕೆ ಒಳ್ಳೆಯ ವ್ಯಾಯಾಮ ಬುದ್ಧಿಗೆ ಉತ್ತಮ ಓದು ಅವಶ್ಯಕವಾಗಿದೆ ಎಂದರು. ಭ್ರಮೆಯಲ್ಲಿ ಬೀಳುವ ವಯಸ್ಸು ಇದಾಗಿದ್ದೂ ಇದನ್ನು ಕಟ್ಟಿ ಆಕಬೇಕು. ಅಂದಾಗ ಮಾತ್ರ ಉತ್ತಮ ಸಾಧನೆ ನಮ್ಮದಾಗುತ್ತದೆ ಎಂದು ಕಿವಿ ಮಾತುಗಳನ್ನು ಹೇಳಿದರು.
ಪ್ರಾಂಶುಪಾಲ ಜಿ.ಎಂ.ಗುರುಪ್ರಸಾದ ಅಧ್ಯಕ್ಷತೆ ವಹಿಸಿದ್ದರು. ಕೋಶಧ್ಯಕ್ಷ ಮುಕುಂದಕುಮಾರ ಅಲಿಝಾರ, ಆಡಳಿತ ಮಂಡಳಿಯ ಸದಸ್ಯರಾದ ಬೂದೆಪ್ಪಗೌಡ ಪಾಟೀಲ, ಸೂರ್ಯಪ್ರಕಾಶ ಆನಂಪಲ್ಲಿ, ಮುಖ್ಯಗುರು ಲಿಂಗಾರಡ್ಡಿ ನಾಯಕ, ಪ್ರಾಂಶುಪಾಲ ಹಂಪಣ್ಣ ಸಜ್ಜನಶೆಟ್ಟಿ, ಕರಬಸಯ್ಯ ದಂಡಿಗಿಮಠ, ಉಪನ್ಯಾಸಕರು ಸೇರಿದಂತೆ ಇತರರಿದ್ದರು. ಬಸಲಿಂಗಪ್ಪ ಸ್ವಾಗತಿಸಿದರು. ತಾಯಮ್ಮ ಪ್ರಾರ್ಥಾನಾಗೀತೆ ಹಾಡಿದಳು. ಚಂದ್ರಶೇಖರ ಪ್ರಾಸ್ತಾವಿಕ ಮಾತನಾಡಿದರು. ರಾಧಿಕಾ ನಿರೂಪಿಸಿದರು. ತುಶಿಲಾ ವಂದಿಸಿದರು.