ಸರ್ಕಾರದಿಂದ ಆಗದ ಕಾರ್ಯ ಆರ್ ಎಸ್ ಎಸ್ ಮಾಡಿದೆ :ಸುಲೇಗಾಂವ್
ಚಿತ್ತಾಪುರ:ಆ.24: ಸರ್ಕಾರದಿಂದ ಆಗದ ಕೆಲಸ ಆರ್ ಎಸ್ ಎಸ್ ಸಂಘಟನೆ ಮಾಡಿದೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಂಬ್ರಿಶ್ ಸುಲೆಗಾಂವ ಹೇಳಿದರು.
ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ವಿಶ್ವ ಹಿಂದು ಪರಿಷತ್ ವತಿಯಿಂದ ವಿಶ್ವ ಹಿಂದೂ ಪರಿಷತ್ತಿನ ಷಷ್ಠಿಪೂರ್ತಿ ಮಹೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಅಂಗವಾಗಿ ಸ್ವಾಗತ ಸಮಿತಿ ಘೋಷಣೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವನ್ನು ದ್ದೇಶಿಸಿ ಮಾತನಾಡಿದ ಅವರು ಪ್ರದೇಶದಲ್ಲಿ ಸಿಲುಕಿ ಕಷ್ಟ ಅನುಭವಿಸಿದ ಹಿಂದುಗಳನ್ನು ಸರ್ಕಾರ ರಕ್ಷಣೆ ಮಾಡಲು ವಿಫಲವಾದಾಗ ಆರ್ ಎಸ್ ಎಸ್ ಸಂಘಟನೆ ಹಿಂದುಗಳನ್ನು ರಕ್ಷಣೆ ಮಾಡಿದ್ದು ಈ ಸಂಘಟನೆಗೆ ಈಗ ಷಷ್ಠಿ ಪೂರ್ತಿ ಮಹೋತ್ಸವ ಆಚರಣೆ ಸಿದ್ದವಾಗಿದೆ ಆದ್ದರಿಂದ ವಿಶ್ವ ಹಿಂದೂ ಪರಿಷತ್ ಚಿತ್ತಾಪುರ ಪ್ರಖಂಡ ವತಿಯಿಂದ ಇದೆ ತಿಂಗಳು ಅಗಸ್ಟ್ 27ನೇ ತಾರಿಕಿನಂದು ಷಷ್ಠಿ ಪೂರ್ತಿ ಮಹೋತ್ಸವ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಸ್ವಾಗತ ಸಮಿತಿ ರಚನೆ ಮಾಡಿದರು.
ಸ್ವಾಗತ ಸಮಿತಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಹಾಗೂ ಷಷ್ಠಿ ಪೂರ್ತಿ ಮಹೋತ್ಸವ ಅಧ್ಯಕ್ಷರನ್ನಾಗಿ ನಿವೃತ್ತ ಎ.ಎಸ್.ಐ ಬಲವಂತರಡ್ಡಿ,ಉಪಾಧ್ಯಕ್ಷೆ ಸುಲೋಚನಾ ವಿಷ್ಣು ಸೂರ್ಯವಂಶಿ,ಪ್ರಧಾನ ಕಾರ್ಯದರ್ಶಿ ಲಿಂಗಣ್ಣ ಮಲ್ಸನ್, ಯಲ್ಲಾಲಿಂಗ ಸುಲ್ತಾನಪೂರ, ಜಗದೀಶ ಚವ್ಹಾಣ , ಸಾಬಣ್ಣ ಬುಗ್ಗಣ್ಣ ಪೂಜಾರಿ, ಉಮಾ ದೇಶಪಾಂಡೆ ಸದಸ್ಯರು, ರೇಖಾ ತಳವಾರ,ರವಿಂದ್ರರಡ್ಡಿ ಅನಪೂರ ಭಂಕಲಗಾ,ವೀರುಪಾಕ್ಷಯ್ಯ ಸ್ವಾಮಿ ವಾಡಿ,ಅಂಬಾದಾಸ ಬುರಬುರೆ ಸದಸ್ಯರು, ಅಶ್ವಿನ್‍ಕುಮಾರ ಉಮಿಯ್ಯಾಜಿ ಸದಸ್ಯರು,ಮೋಹನ ಸುರೇ ರಾವೂರ,ರಾಜಶೇಖರ ಗೋಗಿ ಅಳ್ಳೋಳ್ಳಿ, ಶಂಕರಗೌಡ ರಾವೂರಕರ್ (ಲೀಡರ್), ಸಾಬಣ್ಣ ಮಡಿವಾಳ ಮುಡಬೂಳ,ಅಶೋಕ ಹಡಪದ, ಭಾಗಣ್ಣ ದೋರೆ ವಾಡಿ, ಬಸವರಾಜ ಶರಣಪ್ಪ ಪಲ್ಲೇದ ದಿಗ್ಗಾಂವ್, ಮೌನಯ್ಯ ಪಂಚಾಳ ನಿವೃತ್ತ ಶಿಕ್ಷಕರು, ಮಲ್ಲಿಕಾರ್ಜುನ ಭಜಂತ್ರಿ ಹಲಕರ್ಟಿ, ಕಾಶಿನಾಥ ಈರಪ್ಪ ಭೋವಿ,ಹಣಮಂತ ಕಟ್ಟಿಮನಿ (ಚೌದ್ರಿ), ನಾಗರಾಜ ಹೂಗಾರ ಮೋಗಲಾ, ಈಶ್ವರ ಎಮ್ ದೋಡ್ಡಮನಿ ರಾವೂರ ಇವರುಗಳನ್ನು ಆಯ್ಕೆ ಮಾಡಲಾಯಿತು.
27ರಂದು ಸಾಯಂಕಾಲ ಐದು ಗಂಟೆಗೆ ಶ್ರೀ ಶರಣಬಸವೇಶ್ವರ ದೇವಾಲಯ ವರುಣ ನಗರದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ
ದಿವ್ಯ ಸಾನಿಧ್ಯ : ಷ. ಬ್ರ ಶ್ರೀ ಸೋಮಶೇಖರ ಶಿವಾಚಾರ್ಯರು ಶ್ರೀ ಕಂಬಳೆಶ್ವರ ಸಂಸ್ಥಾನ ಮಠ ಚಿತ್ತಾಪೂರ,ಮ.ನಿ.ಪ್ರ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮರ ರಾವೂರ,ಪ.ಪೂ ಶ್ರೀ ಅವಧೂತ ನಾಗಲಿಂಗ ಶರಣರು ಶ್ರೀ ಕಲಕಲ್ಲ ದೇವಿ ದೇವಾಸ್ಥಾನ ಇವಣಿ ಗೇಟ್,ಶ್ರೀ ದೋಡ್ಡೆಂದ್ರ ಮಹಾಸ್ವಾಮಿಗಳು ಶ್ರೀ ವಿಶ್ವಕರ್ಮ ಏಕದಂಡಗಿ ಮಠ ಸುಲೇಪೇಟ,ಉದ್ಘಾಟಕರಾಗಿ : ಶ್ರೀ ಸಾಜೀಕುಮಾರ ಸಹಾಯಕ ಉಪಾಧ್ಯಕ್ಷರು, ಓರಿಯೆಂಟ್ ಸಿಮೆಂಟ್ ಲಿ., ದಿಗ್ಗಾಂವ,ವಕ್ತಾರರಾಗಿ : ಶ್ರೀಯುತ ಕೃಷ್ಣ ಜೋಶಿ ಜೀ ಪ್ರಾಂತ ಸಂಪರ್ಕ ಪ್ರಮುಖ ರಾ.ಸ್ವ.ಸಂಘ ಕರ್ನಾಟಕ ಉತ್ತರ ಪ್ರಾಂತ,ಮುಖ್ಯ ಅಥಿತಿಗಳಾಗಿ ಶ್ರೀ ಶಿವಕುಮಾರ ಘಾವರಿಯ ಕಾರ್ಯದರ್ಶಿಗಳು, ಶ್ರೀಮತಿ ರಮಾಬಾಯಿ ಅಂಬೇಡ್ಕರ ಟ್ರಸ್ಟ,ಅಧ್ಯಕ್ಷತೆ : ಶ್ರೀ ಬಲವಂತರಡ್ಡಿ ನಿವೃತ್ತ ಎ.ಎಸ್.ಐ ಅಧ್ಯಕ್ಷರು, ಕೃಷ ಜನ್ಮಾಷ್ಠಾಮಿ ಹಾಗೂ ವಿಶ್ವ ಹಿಂದು ಪರಿಷತ್ ಷಷ್ಠಿ ಪೂರ್ತಿ ಮಹೋತ್ಸವ ಸ್ವಾಗತ ಸಮಿತಿ,ಉಪಸ್ಥಿತಿ : ಶ್ರೀ ಶ್ರೀನಿವಾಸ ನಾಗಪ್ಪ ಹಳ್ಳಿ ಅಧ್ಯಕ್ಷರು, ವಿಶ್ವ ಹಿಂದು ಪರಿಷತ್ ಚಿತ್ತಾಪೂರ ಪ್ರಖಂಡ, ಶ್ರೀಮತಿ ರೇಣುಕಾ ಬಿರಾದಾರ ಮಾತೃ ಶಕ್ತಿ ಪ್ರಮುಖ, ವಿಶ್ವ ಹಿಂದು ಪರಿಷತ್ ಚಿತ್ತಾಪೂರ ಪ್ರಖಂಡ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೇಣುಕಾ ಬಿರಾದಾರ್, ಸುಲೋಚನಾ ಸೂರ್ಯವಂಶಿ, ಮಹಾದೇವ ಅಂಗಡಿ, ಅಜಯ್ ಬಿದರಿ,ಸುವರ್ಣ ಶಿಲ್ಪಿ,ಸಾಬಣ್ಣ ಪೂಜಾರಿ, ಶೃತಿ ಥಾವರೆ,ಈರಣ್ಣ ಶಿಲ್ಪಿ,ಆನಂದ ಪಾಟೀಲ ನರಿಬೋಳ, ಮಲ್ಲಿಕಾರ್ಜುನ ಇಟಗಿ, ಯಲ್ಲಾಲಿಂಗ ಸುಲ್ತಾನಪೂರ್ ಇದ್ದರು.