ವಿಜ್ಞಾನ-ಅಧ್ಯಾತ್ಮ ಒಂದಕ್ಕೊಂದು ಪೂರಕ
ಭಾಲ್ಕಿ:ಆ.24: ವಿಜ್ಞಾನ ಮತ್ತು ಅಧ್ಯಾತ್ಮ ಒಂದಕ್ಕೊಂದು ಪೂರಕವಾಗಿವೆ. ವಿಜ್ಞಾನದಿಂದ ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾದರೇ ಅಧ್ಯಾತ್ಮ ಮನುಷ್ಯನಲ್ಲಿ ಆಂತರಿಕ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‍ನ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ನ್ಯಾಷನಲ್ ಸ್ಪೇಸ್ ಡೇ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ದೇಶದ ಪ್ರಗತಿಯಲ್ಲಿ ವಿಜ್ಞಾನದ ಕೊಡುಗೆ ದೊಡ್ಡದಿದೆ. ಅದರಂತೆ ಮನುಷ್ಯನ ಸವಾರ್ಂಗೀಣ ವಿಕಾಸಕ್ಕೆ ಅಧ್ಯಾತ್ಮವೂ ಅಷ್ಟೇ ಅವಶ್ಯವಾಗಿದೆ ಎನ್ನುವುದನ್ನು ಎಲ್ಲರೂ ಅರಿಯಬೇಕು. ಈ ಎರಡು ಮನುಷ್ಯನ ಭಾಗವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಇಸ್ರೋ ಸಂಸ್ಥೆಯ ನಿವೃತ್ತ ವಿಜ್ಞಾನಿ ಶಶಿಶೇಖರ್ ಆರ್.ಮಾತನಾಡಿ, ಆಗಸ್ಟ್ 23, 2023 ರಂದು
ಚಂದ್ರಯಾನ-3 ಮಿಷನ್ ಚಂದ್ರನ ಮೇಲ್ಮೈಯಲ್ಲಿ ವಿಕ್ರಮ್ ಲ್ಯಾಂಡರ್‍ನ ಸುರಕ್ಷಿತ ಮತ್ತು ಮೃದುವಾದ-ಲ್ಯಾಂಡಿಂಗ್ ಸಾಧಿಸಿತು.
ಈ ಐತಿಹಾಸಿಕ ಸಾಧನೆಯೊಂದಿಗೆ ನಮ್ಮ ರಾಷ್ಟ್ರ ಚಂದ್ರನ ಮೇಲೆ ಇಳಿದ ನಾಲ್ಕನೇ ದೇಶವಾಯಿತು ಮತ್ತು ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಬಳಿ ಇಳಿದ ಮೊದಲ ದೇಶವಾಯಿತು.
ಪ್ರಗ್ಯಾನ್ ರೋವರ್ ಅನ್ನು ಯಶಸ್ವಿಯಾಗಿ ನಿಯೋಜಿಸುವುದರ ಮೂಲಕ ಸಾಫ್ಟ್-ಲ್ಯಾಂಡಿಂಗ್ ಅನ್ನು ಅನುಸರಿಸಲಾಯಿತು.
ಲ್ಯಾಂಡಿಂಗ್ ಸೈಟ್ ಅನ್ನು ಶಿವ ಶಕ್ತಿ ಪಾಯಿಂಟ್ (ಸ್ಟ್ಯಾಟಿಯೋ ಶಿವ ಶಕ್ತಿ) ಎಂದು ಹೆಸರಿಸಲಾಯಿತು ಎಂದು ತಿಳಿಸಿದರು.
ಈ ಮಹತ್ವದ ಸಾಧನೆಯನ್ನು ಗೌರವಿಸಲು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಿಸಿದರು. ಹಾಗಾಗಿ, ನಮ್ಮ ದೇಶ ಇಂದು ಮೊದಲನೇ ರಾಷ್ಟ್ರೀಯ ಬಾಹ್ಯಾಕಾಶ ದಿನದ ಸಂಭ್ರಮಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪೆÇ್ರಜೆಕ್ಟರ್ ಮೂಲಕ ಇಸ್ರೋ ಸಂಸ್ಥೆಯ ಪ್ರಮುಖ ಕಾರ್ಯ, ಸಾಧನೆಗಳು ಹಾಗೂ ರಾಕೆಟ್ ಬಳಕೆಯ ಇತಿಹಾಸ, ಬದಲಾವಣೆ, ಸರ್ ಐಸಾಕ್ ನ್ಯೂಟನ್ ನ ಮೂರನೇ ನಿಯಮ ಕುರಿತು ವಿದ್ಯಾರ್ಥಿಗಳಿಗೆ ಮನ ಮುಟ್ಟುವ ಹಾಗೆ ತಿಳಿಸಿದರು.
ಶಿಕ್ಷಕ ಗಿರೀಶ್ ಅವರು ನಿವೃತ್ತ ವಿಜ್ಞಾನಿ ಡಾ.ಶಶಿಶೇಖರ ಅವರ ಪರಿಚಯ ಮಾಡಿಕೊಟ್ಟರು. ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಸಮೀಕ್ಷಾ ಗುತ್ತೇದಾರ ವಚನ ಗಾಯನ ನಡೆಸಿಕೊಟ್ಟರು.
ಆಡಳಿತಾಧಿಕಾರಿ ಮೋಹನ ರೆಡ್ಡಿ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭದಲ್ಲಿ ಡಾ.ರಾಜಶೇಖರ ಮಠಪತಿ, ಮಹೇಶ ರೆಡ್ಡಿ, ನಾಗೇಶ ಬಿರಾದಾರ್ ಸೇರಿದಂತೆ ಹಲವರು ಇದ್ದರು.
ವಿದ್ಯಾರ್ಥಿನಿ ಭೂಮಿಕಾ ಬಿ ಎ ನಿರೂಪಿಸಿದರು. ಉಪ ಪ್ರಚಾರ್ಯ ಸಿದ್ರಾಮ ಗೊಗ್ಗಾ ವಂದಿಸಿದರು.
ಭಾರತ ವಿಜ್ಞಾನ-ತಂತ್ರಜ್ಞಾನ ಸಹಾಯದಿಂದ ಬಲಿಷ್ಠವಾಗಿ ಬೆಳೆಯುತ್ತಿದೆ. ಇದರಲ್ಲಿ ವಿಜ್ಞಾನಿಗಳ ಕೊಡುಗೆ ದೊಡ್ಡಿದೆ. ಇಸ್ರೋದ ನಿವೃತ್ತ ವಿಜ್ಞಾನಿ ಡಾ.ಶಶಿಶೇಖರ ಆರ್ ಅವರ ಜೀವನ ಸರಳ ಮತ್ತು ಸಹಜತೆಯಿಂದ ಕೂಡಿದೆ. ಮಕ್ಕಳಲ್ಲಿ ವಿಜ್ಞಾನ-ತಂತ್ರಜ್ಞಾನದ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ.