ಲಾರಿ ಪಲ್ಟಿ ನಾಲ್ವರಿಗೆ ಗಂಭೀರ ಗಾಯ
ಚಿಂಚೋಳಿ:ಆ.24: ಪರಸಿಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಉರುಳಿ ಬಿದ್ದಿರುವ ಘಟನೆ ತಾಲೂಕಿನ ಮೀರಿಯಾಣ ಪೆÇಲೀಸ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೃಷ್ಣಾಪುರ ಗ್ರಾಮದಿಂದ ತೆಲಂಗಾಣಕ್ಕೆ ಕಲ್ಲು ಪರಸಿಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಯಲ್ಲಿ ಸುಮಾರು 11 ರಿಂದ 15 ಜನ ಕೂಲಿ ಕಾರ್ಮಿಕರು ಪರಸಿಯೊಂದಿಗೆ ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಘಟನೆ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಮೀರಿಯಾಣ ಪೆÇಲೀಸ್ ಠಾಣಾಧಿಕಾರಿ ಮಡಿವಾಳಪ್ಪ ಬಾಗೋಡಿ ಮತ್ತು ಸಿಬ್ಬಂದಿಗಳು ತಕ್ಷಣ ದೂರವಾಣಿ ಕರೆ ಮಾಡುವ ಮೂಲಕ ಆಸ್ಪತ್ರೆಗೆ ಮಾಹಿತಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಿದ ವೈದ್ಯಾಧಿಕಾರಿ ಡಾ.ಸಂತೋಷ ಪಾಟೀಲ್ ಹಾಗೂ ಇನ್ನಿತರ ವೈದ್ಯರು ಸುಮಾರು ಮೂರು ಆಂಬುಲೆನ್ಸ್ ಗಳಲ್ಲಿ ಹೆಚ್ಚಿನ ಚಿಕೆತ್ಸೆಗಾಗಿ ಕಲಬುರಗಿಯ ಸರ್ಕಾರಿ ಆಸ್ಪತ್ರೆಯ ಟ್ರಾಮ ಸೆಂಟರ್ ಗೆ ಕಳುಹಿಸಿ ಕೊಡಲಾಗಿದೆ. ಸಿಪಿಐ ಎಲ್ ಎಚ್ ಗೌನ್ಡಿ ಅವರ ಸೂಚನೆಯಂತೆ ಪಿ ಎಸ್ ಐ ಮಡಿವಾಳಪ್ಪ ಬಾಗೋಡಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.