ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ:  ಪ್ರತಿಭಟನೆ ಹೊಸಪೇಟೆಯಲ್ಲಿ ಹಿಂದೂ ಸಂಘಟನೆಗಳಿಂದ ಕಾಲ್ನಡಿಗೆ ಜಾಥಾ
ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಆ24: ನೆರೆಯ ರಾಷ್ಟ್ರ ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಹಿಂದೂಪರ ಸಂಘಟನೆಗಳ ಕಾರ್ಯಾಕರ್ತ  ಪಟ್ಟಿ ಧರಸಿ ಹೊಸಪೇಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು
ಶನಿವಾರ ಹೊಸಪೇಟೆಯ ವಡಕರಾಯಸ್ವಾಮಿ ದೇವಸ್ಥಾನದಿಂದ ಆರಂಭವಾದ ಪ್ರತಿಭಟನೆಯಲ್ಲಿ ಹಿಂದೂ ಜಾಗೃತಿ ಸಮಿತಿ ಪ್ರಮೋದ್ ಜೈನ್ , ಶ್ರೀಕಾಂತ ಪೂಜಾರ ಮಾತನಾಡಿ ನಮ್ಮ ಎಲ್ಲಾ ಹಂತದ ಅಗತ್ಯ ನೆರವು ಪಡೆದು ನಮ್ಮ ಮೇಲೆಯೇ ನಿರ್ದಾಕ್ಷಿಣ್ಯವಾಗಿ ದೌರ್ಜನ್ಯ ವೆಸಗಲಾಗುತ್ತಿದ್ದೆ ಎಂದರು. ಇದನ್ನು ನಾವು ಖಂಡಿಸಲೇ ಬೇಕಾಗುತ್ತದೆ ನಮ್ಮ ಸಹನೆ ನಮ ದೌರ್ಬಲ್ಯವಲ್ಲಾ ಕಪ್ಪು ಪಟ್ಟಿ ಧರಿಸಿ ಇಂದು ಮೌನವಾಗಿ ಪ್ರತಿಭಟಿಸಲಾಗುತ್ತಿದೆ ಎಂದರು.
ಬಾಂಗ್ಲಾದೇಶ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ದೇಶದ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಖಂಡಿಸಿ ಹೊಸಪೇಟೆಯಲ್ಲಿ ಜನಾಕ್ರೋಶ ಕಾಲ್ನಡಿಗೆ ಜಾಥವನ್ನು ಹಮ್ಮಿಕೊಳ್ಳಲಾಗಿದೆ, ವಿವಿಧ ಸಮಾಜಗಳ ಮುಖಂಡರು ಯುವ ಜನಾಂಗ ಆಗಮಿಸುವ ಮೂಲಕ ತಮ್ಮ ಅಂಗಡಿ ಮುಂಗಟ್ಟುಗಳನ್ಮು ಬಂದ್ ಮಾಡಿ ಪಾಲ್ಗೊಂಡಿರುವುದು ನಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಹೊಸಪೇಟೆಯ ಬೃಹತ್ ಸಂಖ್ಯೆಯ ಸಾರ್ವಜನಿಕರು, ಸಮಾಜದ ಮುಖಂಡರು, ಸಂಘ ಸಂಸ್ಥೆಗಳು ,ತಾಯಂದಿರು ಮತ್ತು ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹಿಂದೂ ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ಸಾರಿದರು.
ಜಗದೀಶ್ ಕುಮಟಗಿ, ವೀರಣ್ಣ, ಪ್ರವೀಣ್, ಕಿಚಡಿ ಕೊಟ್ರೇಶ, , ಸೂರಿ ಬಂಗಾರ, ರೇವಣಸಿದ್ಧಪ್ಪ, ಕಿರಣ್, ರಮೇಶ ಗುಪ್ತಾ, ಮದುರಚೆನ್ನಶಾಸ್ತ್ರಿ ಪ್ರಮೋದ ಜೈನ್, ಭೂಪಾಳ  ಶ್ರೀ ಪಾದ, ಶ್ರೀಕಾಂತ, ನರಸಿಂಹಮೂರ್ತಿ, ಕೇಶವ್, ಪಾಂಡು,ಪತಂಜಲಿ ಯೋಗ ಸಮಿತಿಯ  ಕಿರಣ್ ಕುಮಾರ, ಮಾಜಿ ಹುಡಾ ಅಧ್ಯಕ್ಚ ಅಶೋಕ ಜೀರೆ, ವೆಂಕಪ್ಪ, ಅಪ್ಪಾರಾವ್,  ಮಹಿಳಾ ಘಟಕದ ಅನೇಕರು ಪಾಲ್ಗೊಂಡಿದ್ದರು.
ರಸ್ತೆಯೂದಕ್ಕೂ ಯಾವುದೆ ಘೋಷಣೆ ಕೂಗದೆ ಮೌನವಾಗಿ ಸಾಗಿದ್ದು ವಿಶೇಷವಾಗಿತು.