ಶಾಲೆಯಂಗಳದಲ್ಲಿ ನಿಂತ ಮಳೆ ನೀರಿಗೆ ದೋಣಿ ಬಿಟ್ಟು ಆಟವಾಡಿದ ವಿದ್ಯಾರ್ಥಿಗಳು
ಚಿಂಚೋಳಿ:ಆ.24: ಸರ್ಕಾರಗಳು ಸರ್ಕಾರಿ ಶಾಲೆಗಳ ಅಭಿವೃದ್ದಿಗಾಗಿ ಹಾಗೂ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಹಲವಾರು ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ಪಠ್ಯ ಪುಸ್ತಕ ಬಿಸಿಯೂಟ ಕ್ಷೀರ ಭಾಗ್ಯ ಹೀಗೆ ಹಲವಾರು ಯೋಜನೆಗಳಿಂದ ಮಕ್ಕಳಿಗೆ ಶೈಕ್ಷಣಿಕವಾಗಿ ಮತ್ತು ಶಾರೀರಿಕವಾಗಿಯೂ ಬಲಾಢ್ಯರಾಗಬೇಕೆಂದು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಆದರೇ, ಇಲ್ಲೊಂದು ಶಾಲೆಯಿದೆ. ಅದು ಮಳೆ ಬಂದರೆ ಸಾಕು ಅದರ ಅಂಗಳ ಸಣ್ಣ ಕೆರೆಯಂತಾಗುತ್ತದೆ. ಯಾವುದಪ್ಪ ಈ ಶಾಲೆ ಅಂತೀರಾ. ಅದುವೇ, ಚಿಂಚೋಳಿ ತಾಲೂಕಿನ ಚಂದಾಪುರ ಪಟ್ಟಣದಲ್ಲಿರುವ ಕರ್ನಾಟಕ ಪಬಲಿಕ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ.
ಹೌದು ಮಳೆ ಬಂದರೇ ಸಾಕು ಈ ಶಾಲೆಯ ಮೈದಾನ ಹಾಗೂ ಅಂಗಳದಲ್ಲಿ ಮಳೆ ನೀರು ನಿಂತುಕೊಂಡು ಶಿಕ್ಷಕರಿಗೆ ತಿರುಗಾಡಲು ಬಾರದಂತೆ ಆದರೇ, ಮಕ್ಕಳಿಗೆ ಆಟವಾಡಲು ಆಗದಂತೆ ಆಗಿದೆ.
ಇನ್ನು ಹೀಗೆ ನಿಂತ ನೀರಲ್ಲಿ ಸೊಳ್ಳೆಗಳು ಹುಟ್ಟಿಕೊಳ್ಳುವುದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇನ್ನು ಮಧ್ಯಾಹ್ನದ ಬಿಸಿಯೂಟ ಸೇವಿಸಬೇಕಾದರೂ ಕೂಡ ಮಕ್ಕಳು ಊಟದ ಜೊತೆಗೆ ಈ ನಿಂತ ನೀರಿನ ವಾಸನೆಯನ್ನು ತೆಗೆದುಕೊಳ್ಳಬೇಕಾದಂತಹ ಪರಿಸ್ಥಿತಿ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಇದರ ಕುರಿತು ಇನ್ನು ಮುಂದಾದರು ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿ ಎಂಬುದರ ಆಶಯವೇ ಈ ವರದಿಯ ಉದ್ದೇಶ.