ಸೆ.14  ರಾಷ್ಟ್ರೀಯ ಲೋಕ್ ಅದಾಲತ್

(ಸಂಜೆವಾಣಿ ವಾರ್ತೆ)
ಬಳ್ಳಾರಿ,ಆ.25 : ರಾಷ್ಟ್ರೀಯ ಮತ್ತು ರಾಜ್ಯ ಕ ಕಾನೂನು ಸೇವೆಗಳ ಪ್ರಾಧಿಕಾರದಿಂದ ಬರುವ  ಸೆ.14 ರಂದು  “ರಾಷ್ಟ್ರೀಯ ಲೋಕ್ ಅದಾಲತ್” ಹಮ್ಮಿಕೊಂಡಿದ್ದು ನ್ಯಾಯಾಲಯದಲ್ಲಿ ಬಾಕಿ ಇರುವ ವ್ಯಾಜ್ಯಗಳನ್ನುರಾಜಿ ಸಂಧಾನದ ಮೂಲಕ ಬಗೆ ಹರಿಸಿಕೊಂಡು ಸಾಮರಸ್ಯ ಜೀವನ ನಡೆಸಬೇಕು  ಎಂದು ಬಳ್ಳಾರಿಯ  ಪ್ರಧಾನ ಜಿಲ್ಲಾ ನ್ಯಾಯಧೀಶೆ ಕೆ.ಜಿ ಶಾಂತಿ ಹೇಳಿದ್ದಾರೆ.
ನಗರದಲ್ಲಿ ನಿನ್ನೆ ಸುದ್ದಿಗೋಷ್ಟಿ ನಡೆಸಿದ ಅವರು. ಸಾರ್ವಜನಿಕರು ತಮ್ಮ ವ್ಯಾಜ್ಯಪೂರ್ವ ಅಪರಾಧಿಕ, ಚೆಕ್ ಬೌನ್ಸ್ , ಬ್ಯಾಂಕ್, ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣ, ವೈವಾಹಿಕ, ಕೌಟುಂಬಿಕ, ಸಿವಿಲ್ ಸೇರಿದಂತೆ ಇನ್ನಿತರೆ ರಾಜಿಯಾಗಬಹುದಾದ ಪ್ರಕರಣಗಳನ್ನು ಮೆಗಾ-ಲೋಕ್ ಅದಾಲತ್‌ನಲ್ಲಿ ಬಗೆಹರಿಸಲಿದೆ.
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿನ 31 ನ್ಯಾಯಾಲಯಗಳಲ್ಲಿ 59,434 ಪ್ರಕರಣಗಳು ಬಾಕಿಯಿದ್ದು, ಅವುಗಳಲ್ಲಿ 3204 ಪ್ರಕರಣಗಳು ರಾಜಿ ಸಂಧಾನ ಮೂಲಕ ಬಗೆಹರಿಸಬಹುದು ಎಂದು ಗುರುತಿಸಲಾಗಿದೆಂದು ತಿಳಿಸಿದರು. ಕಳೆದ “ರಾಷ್ಟ್ರೀಯ ಲೋಕ್ ಅದಾಲತ್”ನಲ್ಲಿ 1,25,442 ಪ್ರಕರಣಗಳಲ್ಲಿ 74,00,54,519 ರೂ. ಪರಿಹಾರ ಒದಗಿಸಲಾಗಿದ್ದು, ಮುಂಬರುವ “ರಾಷ್ಟಿçÃಯ ಲೊಕ್ ಅದಾಲತ್”ನಲ್ಲಿ ಹೆಚ್ಚಿನ ಗುರಿ ಸಾಧಿಸುವ ಛಲ ಹೊಂದಲಾಗಿದೆ ಎಂದೂ ಅವರು ತಿಳಿಸಿದರು.
ಈ ವೇಳೆ  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆದ ರಾಜೇಶ್ ಎನ್.ಹೊಸಮನೆ ಅವರು ಉಪಸ್ಥಿತರಿದ್ದರು.