ಜಾನಪದ ಕಲೆಯನ್ನು ಉಳಿಸಿ-ಬೆಳಸಿ:ಗುರುರಾಜ ಹೊಸಕೋಟೆ
ಸಂಜೆವಾಣಿ ವಾರ್ತೆ
ಹೊಸಪೇಟೆ:ಅ,24- ಪಾಶ್ಚಾತ್ಯ ಸಂಗೀತಕ್ಕೆ ಮಾರು ಹೋಗುತ್ತಿರುವ ಈ ಸಂದರ್ಭದಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಕಲೆಯನ್ನು ಮುಂದಿನ ಪೀಳಿಗೆಗೆ ಮೀಸಲಿಡಬೇಕಿದೆ ಎಂದು ಖ್ಯಾತ ಜಾನಪದ ಕಲಾವಿದ ಗುರುರಾಜ ಹೊಸಕೋಟೆ ಹೇಳಿದರು.
ಇತ್ತೀಚಿಗೆ ನಗರದಲ್ಲಿ ಶ್ರೀ ಕೀರ್ತಿ ಜಾನಪದ ಮತ್ತು ಸುಗಮ ಸಂಗೀತ ಕಲಾ ಟ್ರಸ್ಟ್‍ಗೆ ಚಾಲನೆ ನೀಡಿ ಮಾತನಾಡಿದ ಅವರು, ಸಾವಿರಾರು ವರ್ಷಗಳ ಹಳೆಯ ಜಾನಪದ ಇತಿಹಾಸವನ್ನು ಉಳಿಸಿ ಬೆಳೆಸುವಂತ ಕಾಯಕ ಪ್ರತಿಯೊಬ್ಬರ ಮೇಲಿದೆ ಎಂದರು.
ಪದ್ಮಶ್ರೀ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ, ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ್, ಪಿ.ಡಿ.ಗೌತಮ್, ಬಿ.ಎಂ.ಎಂ. ಇಸ್ಪಾತ್ ಕಂಪನಿಯ ವ್ಯವಸ್ಥಾಪಕ ಗಣೇಶ ಹೆಗಡೆ ಗುಜ್ಜಲ್ ಗಣೇಶ್, ಕಸಟ್ಟಿ ಉಮಾಪತಿ, ತಾರಿಹಳ್ಳಿ ಜಂಬುನಾಥ, ಬೋಡಾರಾಮಪ್ಪ, ಕಲಾವಿದ ಎಸ್.ಎಸ್.ಚಂದ್ರಶೇಖರ್, ಮದುರಚೆನ್ನಶಾಸ್ತ್ರಿ, ಪರಮೇಶ್ವರಗೌಡ, ಹೊನ್ನೂರ್‍ವಲಿ,
ಕಮಲಾ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ವಕೀಲ ಪಿ.ವೆಂಕಟೇಶ್ ಪ್ರಸ್ತಾವಿಕವಾಗಿ ಮಾತನಾಡಿದರು. ಹೆಚ್.ಪಿ.ಕಲ್ಲಂಭಟ್ ನಿರೂಪಿಸಿದರು.