ಹಬೋಹಳ್ಳಿ: ನಾಳೆ  ದಿ.ಅಕ್ಕಿ ಕೊಟ್ರಪ್ಪರ  ನುಡಿ ನಮನ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಆ.24 ತಾಲೂಕಿನ ತಂಬ್ರಹಳ್ಳಿ ಗ್ರಾಮದ ಶೈಕ್ಷಣಿಕ ಮತ್ತು ಧಾರ್ಮಿಕ ಕೊಡಗೈ ದಾನಿ ದಿ. ಅಕ್ಕಿ ಕೊಟ್ರಪ್ಪನವರ ನುಡಿ ನಮನ ಕಾರ್ಯಕ್ರಮ ವನ್ನು ನಾಳೆ  ಭಾನುವಾರ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ವತಿಯಿಂದ ಹಮ್ಮಿಕೊಳ್ಳಲಾಗಿದೆ.
 ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ  ನುಡಿನಮನದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆ ಸಭೆಯಲ್ಲಿ  .ನಂದಿಪುರ ಡಾ.ಮಹೇಶ್ವರ ಸ್ವಾಮೀಜಿ ಮಾತನಾಡಿ, ಅಕ್ಕಿ ಕೊಟ್ರಪ್ಪ ಅವರ ವ್ಯಕ್ತಿತ್ವ, ದಾನಧರ್ಮ ಇತರರಿಗೂ ಮಾದರಿಯಾಗಿದೆ. ಆಗಸ್ಟ್.25 ರಂದು ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯುವ ನುಡಿನಮನ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಮಠದ ಭಕ್ತರಾಗಿ ಅತ್ಯಂತ ಶಿಸ್ತುಬದ್ಧ ಜೀವನ ನಡೆಸಿದ ಅಕ್ಕಿ ಕೊಟ್ರಪ್ಪ ಅವರು ಈ ನಾಡಿನ ಅನನ್ಯ ಚೇತನ ಶಕ್ತಿಯಾಗಿದ್ದಾರೆ. ಅವರು ಮಾಡಿದ ದಾನದ ಫಲ ಅವರ ಆತ್ಮಕ್ಕೆ ಶಾಂತಿ ನೀಡುತ್ತದೆ ಎಂದರು.
ವೀರಶೈವ ಮಹಾಸಭಾದ ಸಂಘಟನಾ ಕಾರ್ಯದರ್ಶಿ ಗುರುಬಸವರಾಜ ಸೊನ್ನದ ಮಾತನಾಡಿ, ಅಕ್ಕಿ ಕೊಟ್ರಪ್ಪರವರು ಜಾತಿ, ಧರ್ಮವನ್ನು ಮೀರಿದ ಮಹಾದಾನಿಯಾಗಿದ್ದಾರೆ. ಶೈಕ್ಷಣಿಕ, ಧಾರ್ಮಿಕ ಕೊಡುಗೆ ಅನನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಗೌರವ ನಮನ ಸಲ್ಲಿಸಲು ನುಡಿನಮನ ಹಮ್ಮಿಕೊಳ್ಳಲಾಗಿದೆ ಎಂದರು.
ಇದೇವೇಳೆ ಅಕ್ಕಿ ಕೊಟ್ರಪ್ಪ ಅವರ ಮೇಲಿನ ಜನರ ಅಭಿಮಾನ ಕಂಡು ಅವರ ಪುತ್ರ ಅಕ್ಕಿ ಶಿವಕುಮಾರ್ ಕಣ್ಣೀರಿಟ್ಟರು.
 ಈ ಸಂದರ್ಭದಲ್ಲಿ ವೀರಶೈವ ಸಮಾಜದ ಪ್ರಮುಖರಾದ ಬಸವರಾಜ ರಡ್ಡಿ, ಅಕ್ಕಿ ತೋಟೇಶ್,  ವೈ.ಎಂ.ರೇವಣಸಿದ್ದೇಶ್ವರ, ಚಿನ್ಮಲ್ಲಿ ಸುರೇಶ್, ಕೊಟ್ರೇಶ್ ಸಕ್ರಹಳ್ಳಿ, ಬನ್ನಿಗೋಳ ವೆಂಕಣ್ಣ, ಯು.ಕೆ.ಸುರೇಶ್, ಹುಡೇದ್ ಗುರುಬಸವರಾಜ, ದೇವಿಪ್ರಸಾದ್, ಮೇದಾರ ಯಮುನಪ್ಪ, ಸಿದ್ದಯ್ಯ ಮಠದ್, ಡಿ.ಎಂ.ತೋಟಯ್ಯ, ಪಿ.ಕೊಟ್ರೇಶ್, ತ್ಯಾವಣಿಗಿ ಕೊಟ್ರೇಶ್, ಸೊಬಟಿ ಹರೀಶ್, ನಾಗಭೂಷಣ್ ಹಿರೇಮಠ್, ಸೋಗಿ ಕೊಟ್ರೇಶ್, ಗೌರಜ್ಜನವರ ಮಲ್ಲಿಕಾರ್ಜುನ, ವಿಶ್ವನಾಥ, ಎಚ್.ಬಿ.ಮಂಜುನಾಥ, ವೀರೇಶ್ ಪೋಟೋ, ಸತೀಶ್ ಪಾಟೀಲ್, ರಾಚಪ್ಪ, ಎಂ.ಗುರುಬಸವರಾಜ ಇತರರಿದ್ದರು.