ಉಪ್ಪಾರ ಸಮಾಜದ ಪದಾಧಿಕಾರಿಗಳ ಆಯ್ಕೆ
ಬ್ಯಾಡಗಿ,ಆ.24: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶ್ರೀಭಗೀರಥ ಉಪ್ಪಾರ ಸಮಾಜ ಸಂಘ ತಾಲೂಕು ಘಟಕದ ವತಿಯಿಂದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಗುರುವಾರ ನಡೆದಿದ್ದು, ನೂತನ ಅದ್ಯಕ್ಷರಾಗಿ ಮಂಜುನಾಥ ಉಪ್ಪಾರ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಮಾಲತೇಶ ಉಪ್ಪಾರ ಮಾತನಾಡಿ, ನಮ್ಮ ಹಿಂದುಳಿದ ಸಮಾಜಕ್ಕೆ ಸಂಘಟನೆ ಮುಖಂಡತ್ವದ ಕೊರತೆಯಿಂದ ನಮ್ಮ ಸಮಾಜವು ಗುರುತಿಸಿಕೊಳ್ಳುವಲ್ಲಿ ವಿಫಲವಾಗಿದೆ. ನಮ್ಮ ಸಮಾಜದ ಮಂಜುನಾಥ ಉಪ್ಪಾರ ಅವರು ಯುವ ಮುಖಂಡರಾಗಿದ್ದು, ಸಮಾಜದಲ್ಲಿ ಹಲವಾರು ಸಮಾಜಮುಖಿ ಸೇವೆಗಳನ್ನು ನಿಸ್ವಾರ್ಥ ಮನೋಭಾವನೆಯಿಂದ ಸಲ್ಲಿಸುತ್ತಿದ್ದು, ಅವರ ನಾಯಕತ್ವ ಗುಣವನ್ನು ಗುರುತಿಸಿ ಇಂದು ಅವರನ್ನು ಬ್ಯಾಡಗಿ ತಾಲೂಕಿನ ನಮ್ಮ ಸಂಘದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದೇವೆ. ಇನ್ನು ಮುಂದೆ ಅವರಿಂದ ನಮ್ಮ ಸಮಾಜ ಮುಖ್ಯವಾಹಿನಿಗೆ ಬರಲಿ ಉಳಿದ ಎಲ್ಲಾ ಸಮಾಜದವರಂತೆ ನಮ್ಮ ಸಮಾಜಕ್ಕೂ ಸಿಗುವ ಗೌರವ ಸರಕಾರಿ ಸೌಲಭ್ಯಗಳು ಸಿಗಲಿ ಎಂದು ತಿಳಿಸಿ ಮಾಲಾರ್ಪಣೆ ಮಾಡಿ ಅಭಿನಂದಿಸಿದರು.
ಇನ್ನುಳಿದಂತೆ ತಾಲೂಕು ಘಟಕಕ್ಕೆ ಉಪಾಧ್ಯಕ್ಷರನ್ನಾಗಿ ಶಿವಮೂರ್ತಿ ಗೊಡಚಿಹಳ್ಳಿ ಮತ್ತು ಮಾಲತೇಶ ಉಪ್ಪಾರ, ಕಾರ್ಯದರ್ಶಿಯಾಗಿ ಲಿಂಗರಾಜ ಹರ್ಲಾಪುರ, ಸಹ ಕಾರ್ಯದರ್ಶಿಯಾಗಿ ಶಂಕರ ಉಪ್ಪಾರ, ಖಜಾಂಚಿಯಾಗಿ ಚಂದ್ರಶೇಖರ ಆಟದವರ, ಸಂಘಟನಾ ಕಾರ್ಯದರ್ಶಿಗಳಾಗಿ ಶಿವಬಸಪ್ಪ ಉಪ್ಪಾರ, ವೆಂಕಟೇಶ ಉಪ್ಪಾರ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕೃಷ್ಣಪ್ಪ ಉಪ್ಪಾರ, ಬಸವರಾಜ ಬಡಗಡ್ಡಿ, ಜಗದೀಶ ಹರ್ಲಾಪುರ, ಅಶೋಕ ಹುಬ್ಬಳ್ಳಿ, ರವಿ ಉಪ್ಪಾರ, ಮಂಜುನಾಥ ಮುಂಡರಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಸಮಾಜದ ವಿಜಯ ಉಪ್ಪಾರ, ಕೇಶವಮೂರ್ತಿ ಉಪ್ಪಾರ, ನಾಗರಾಜ ಉಪ್ಪಾರ, ಮಹೇಶ ಉಪ್ಪಾರ, ಶಿವಣ್ಣ ಗೊಡಚಿಹಳ್ಳಿ, ಮಾದೇವಪ್ಪ ಉಪ್ಪಾರ, ಚಂದ್ರು ಉಪ್ಪಾರ, ಜಗದೀಶ ಉಪ್ಪಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು