ಕುಶಾಲನಗರ, ಮುಳ್ಳುಸೋಗೆ, ಕೂಡುಮಂಗಳೂರು, ಹೆಬ್ಬಾಲೆಭಾಗದಲ್ಲಿ ಭಾರೀ ಶಬ್ದ; ಭೂಕಂಪನದ ಸಂದೇಹ
ಕುಶಾಲನಗರದ ಜ್ಞಾನಭಾರತಿ ಶಾಲೆ ಹಿಂಭಾಗ, ಬಸವನತ್ತೂರು, ಹೆಬ್ಬಾಲೆಯ ಹಕ್ಕೆ, ಹುಲುಸೆ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿರುವ ಬಗ್ಗೆ ನಿವಾಸಿಗಳಿಂದ ಮಾಹಿತಿ ಲಭ್ಯವಾಗಿದೆ.
ಶುಕ್ರವಾರ ಬೆಳಗ್ಗೆ ೬.೩೫ ರ ಸಮಯದಲ್ಲಿ ಎರಡು ಸೆಕೆಂಡ್ ಕಾಲ ಭೂಮಿ ಕಂಪಿಸಿದ ಅನುಭವ ಉಂಟಾದ ಬಗ್ಗೆ ಕುಶಾಲನಗರದ ಮೋಹನ್ ಹಾಗೂ ಬಸವನತ್ತೂರಿನ ಮಂಜುನಾಥ್, ಹಕ್ಕೆಯ ಸುರೇಶ್ ಮಾಹಿತಿ ನೀಡಿದ್ದಾರೆ. ಬೆಚ್ಚಿ ಬೀಳಿಸುವಂತಹ ಶಬ್ಧ ಕೇಳಿಬಂದಿರುವ ಬಗ್ಗೆ ಮಾಹಿತಿ ಇದ್ದು ಬಹುತೇಕ ಮಂದಿ ನಿದ್ರೆಯಲ್ಲಿದ್ದ ಕಾರಣ ಕೆಲವರಿಗಷ್ಟೇ ಕಂಪನದ ಅನುಭವವಾಗಿದೆ. ಭೂಕಂಪನ ಉಂಟಾಗಿದೆಯೇ ಎಂಬ ಬಗ್ಗೆ ಅಧಿಕಾರಿಗಳು ಅಧಿಕೃತ ಮಾಹಿತಿ ಒದಗಿಸಬೇಕಿದೆ.