ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನ

ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ: ಈ ಬಾರಿ ಯಾವುದೇ ಗೊಂದಲಗಳಿಲ್ಲದೆ ಅರ್ಥಪೂರ್ಣವಾಗಿ ಶಿಕ್ಷಕರ ದಿನಾಚರಣೆ ಆಚರಿಸಲಾಗುವುದು ಎಂದು ಶಾಸಕ ಕೆ ನೇಮಿರಾಜ್ ನಾಯ್ಕ್ ಹೇಳಿದರು
ಪಟ್ಟಣದ ತಾಪಂನ ಮಹಾತ್ಮಗಾಂಧಿ ಸಭಾಂಗಣದಲ್ಲಿ ತಾಲೂಕಾಡಳಿತದಿಂದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ   ಕಳೆದ ವರ್ಷ ಮಾಡಿದ ಕೆಲವು ತಪ್ಪುಗಳನ್ನು ಮಾಡದಂತೆ ಯಾವುದೇ ಗೊಂದಲ ನಿರ್ಮಾಣವಾಗದೆ ಕಾರ್ಯಕ್ರಮ ನಡೆಯಬೇಕು.l , ಮೊದಲು ಅಹ್ವಾನ ಪತ್ರಿಕೆಯಲ್ಲಿನ ಎಡವಟ್ಟುಗಳನ್ನು ಸರಿಪಡಿಸಿಕೊಂಡು ಕಾರ್ಯಕ್ರಮದ ರೂಪರೇಷೆಗಳನ್ನು ರೂಪಿಸಿ. ನಿರೂಪಣೆ, ಸ್ವಾಗತ, ವಂದನಾರ್ಪಣೆ ಸಹ ಇಂತಹವರನ್ನೇ ಮಾಡಿ ಎಂದು ಸೂಚಿಸಿದರು…
ಸಾನ್ನಿಧ್ಯ ವಹಿಸಿ ನಂದಿಪುರ ಶ್ರೀ ಮಹೇಶ್ವರ ಸ್ವಾಮೀಜಿ ಮಾತನಾಡಿ . ಶಿಷ್ಟಚಾರದಂತೆ ವೇದಿಕೆಯಲ್ಲಿ ಶಿಸ್ತುಬದ್ಧವಾಗಿ, ಸಮಯ ಪರಿಪಾಲನೆಗೆ ಮೊದಲ ಆದ್ಯತೆ ನೀಡಿ ಹಿತಮಿತ ಮಾತುಗಳಿಗೆ ಅವಕಾಶ ನೀಡುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಗಮನ ಹರಿಸಿ. ವೇದಿಕೆ ಕಾರ್ಯಕ್ರಮಗಳೆಂದರೇ ಅಸಹ್ಯ ಹುಟ್ಟಿಸುವಂತೆ ಆಯೋಜಿಸುವುದು ಸಾಮಾನ್ಯವಾಗಿದೆ. ಆದರೆ ಶಿಕ್ಷಣದ ಜ್ಞಾನ ನೀಡುವ ಶಿಕ್ಷಕರು ಸಮಾಜಕ್ಕೆ ಮಾದರಿಯ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು
ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್  ಮಾತನಾಡಿ, ಹಿಂದಿನ ವರ್ಷಕ್ಕಿಂತ ಈ  ವರ್ಷ ಕೆಲವು ಬದಲಾವಣೆಗಳನ್ನು ತರಲು ನಿರ್ಣಯಿಸಿದ್ದೇವೆ. ಪ್ರತಿ ವರ್ಷ ಗುರುಭವನದ ಮುಂಭಾಗದ ರಸ್ತೆಯಲ್ಲಿ ಹಾಕುತ್ತಿದ್ದ ವೇದಿಕೆಯನ್ನು ಹರ ಕಲ್ಯಾಣ ಮಂಟಪಕ್ಕೆ ಸ್ಥಳಾಂತರಿಸಲಾಗಿದೆ.  ಬೆಳಗ್ಗೆ ನಡೆಯಬೇಕಾಗಿದ್ದ ಕಾರ್ಯಕ್ರಮ ಮಧ್ಯಾಹ್ನ ಊಟದ ನಂತರ ಕಾರ್ಯಕ್ರಮ ಪ್ರಾರಂಭವಾಗಲಿದೆ ಜಯಂತಿ ದಿನದಂದು ಬೆಳಿಗ್ಗೆ ಶಿಕ್ಷಕರು ಯಥಾರೀತಿ ಶಾಲೆಗಳಿಗೆ ಹಾಜರಾಗಿ ಮಕ್ಕಳಿಗೆ ಬಿಸಿಯೂಟ ನೀಡಿದ ಬಳಿಕ ಮಧ್ಯಾಹ್ನ 12 ಗಂಟೆಗೆ ಭಾಗವಹಿಸಬೇಕು.ಶಿಕ್ಷಕರೆಲ್ಲರೂ ಬೈಕ್ ರ‍್ಯಾಲಿ  ಮೂಲಕ ಹರ ದೇಗುಲಕ್ಕೆ ತೆರಳಿ  ವೇದಿಕೆ ಕಾರ್ಯಕ್ರಮ ಶಿಷ್ಟಚಾರ, ಶಿಸ್ತುಬದ್ಧವಾಗಿ ಆಯೋಜಿಸಲು ಕ್ರಮವಹಿಸಲಾಗುವುದು ಎಂದರು
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಉಮಾಪತಿ ಶೆಟ್ಟರ್ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಶಿಕ್ಷಕರಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಕಾನಿಪ ಸಂಘಟನೆಯಿಂದ ಸೆ.2 ಮತ್ತು 3 ರಂದು, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಆಯೋಜಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಭಾಗವಹಿಸುವಂತೆ ಸಭೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಇಒ ಡಾ.ಜಿ.ಪರಮೇಶ್ವರ, ಉಪತಹಸೀಲ್ದಾರ ಜಿ.ಶಿವಕುಮಾರ್ ಗೌಡ ವೇದಿಕೆಯಲ್ಲಿದ್ದರು. ಬಿಆರ್ ಸಿ ಅಧಿಕಾರಿ ಎಂ.ಎಸ್.ಪ್ರಭಾಕರ್, ಅಕ್ಷರ ದಾಸೋಹ ಅಧಿಕಾರಿ ರವಿನಾಯ್ಕ, ಶಿಕ್ಷಣ ಸಂಯೋಜಕ ಶಿವಲಿಂಗಸ್ವಾಮಿ, ಪ್ರಮುಖರಾದ ಹ್ಯಾಟಿ ಲೋಕಪ್ಪ, ರವಿಚಂದ್ರನಾಯ್ಕ, ಎಂ.ಪಿ.ಎಂ.ಮಂಜುನಾಥ, ಕೆ.ಬಿ.ದೀಪಿಕಾ, ಚಂದ್ರಪ್ಪ, ಎಚ್.ಕೊಟ್ರಪ್ಪ, ಎಸ್.ಟಿ.ಸೋಮಶೇಖರ್, ಯಂಕಾರೆಡ್ಡಿ, ಆಂಜನೇಯ, ವೀರನಗೌಡ, ಜಜ್ಜೂರಿ ಉಮೇಶ್, ಸೋಮನಗೌಡ್ರು, ಶಂಭುಲಿಂಗಪ್ಪ, ಇಟಿಗಿ ಪ್ರಭಾಕರ್, ಇಟಿಗಿ ಮಂಜುನಾಥ ಸೇರಿದಂತೆ ವಿವಿಧ ಸಂಘಟನೆ ಪದಾಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು