ಕಾರ್ಮಿಕರ ಸುರಕ್ಷತಾ ದೃಷ್ಟಿಯಿಂದ ಪರವನಿಗೆ ಕಡ್ಡಾಯ: ಗೋವಿಂದರಾಜು
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಆ.24:- ಕಾರ್ಮಿಕರ ಸುರಕ್ಷತಾ ದೃಷ್ಟಿಯಿಂದ ಪ್ರತಿಯೊಂದು ಅಂಗಡಿ, ಹೊಟೇಲ್ ಸೇರಿದಂತೆ ಮತ್ರೀತರೆ ವ್ಯಾಪಾರ ಮಾಡುವ ಮಾಲೀಕರು ಕಾರ್ಮಿಕ ಇಲಾಖೆಯಿಂದ ಲೈಸೆನ್ಸ್ ಪಡೆಯುವಂತೆ ಎಂದು ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕ ಗೋವಿಂದರಾಜು ಪಟ್ಟಣದ ಮೆಡಿಕಲ್ ಸ್ಟೋರ್, ಹೊಟೇಲ್, ಬೇಕರಿ ಸೇರಿದಂತೆ ವ್ಯಾಪಾರ ವಹಿವಾಟು ನಡೆಸುವ ಅಂಗಡಿ ಮುಗ್ಗಟ್ಟುಗಳಿಗೆ ವಿವಿದ ಇಲಾಖಾ ಅಧಿಕಾರಿಗಳ ತಂಡದೊಂದಿಗೆ ಬೇಟಿ ನೀಡಿ ಎಚ್ಚರಿಕೆ ನೀಡಿದರು.
ಸರ್ಕಾರದ ಸುತ್ತೋಲೆ ಪ್ರಕಾರ ಎಲ್ಲಾ ವಹಿವಾಟು ನಡೆಸುವ ಉದ್ಯಮಗಳಲ್ಲಿ ಕಡ್ಡಾಯವಾಗಿ ಕಾರ್ಮಿಕ ಇಲಾಖೆಯಿಂದ ನೊಂದಣಿ ಮಾಡಿಸಿ ಕೊಂಡು ಕೆಲಸಗಾರರ ದಿನ ನಿತ್ಯದ ಸಹಚರಿ ಬರೆಯ ಬೇಕು, ಕಡ್ಡಾಯವಾಗಿ ಲೈಸೆನ್ಸ್ ಪಡೆಯ ಬೇಕು ಎಂದು ತಿಳಿಸಿದರು.
ಕೆಲವೊಂದು ಕಡೆಗಳಲ್ಲಿ ಅಗ್ನಿ ಅವಘಡ ಸಂಭವಿಸಿ ಅಥವಾ ಬೇರೆಂದು ಕಾರಣದಿಂದ ಕೆಲಸಗಾರರು ಮೃತಪಟ್ಟ ಘಟನೆಗಳು ಹೆಚ್ಚಾಗಿ ನಡೆಯುತ್ತಿದ್ದು, ಮುನ್ನೆಚ್ಚರಿಕ ಕ್ರಮಗಳನ್ನು ಅನುಸರಿಸಲು ಕಡ್ಡಾಯವಾಗಿ ಎಲ್ಲಾ ಮಾಲೀಕರು ಕಾರ್ಮಿಕ ಇಲಾಖೆಗೆ ಬೇಟಿ ನೀಡಿ ಮಾಹಿತಿ ಪಡೆದು ಕೊಂಡು ಲೈಸೆನ್ಸ್ ಪಡೆಯುವಂತೆ ಮನವರಿಕೆ ಮಾಡಿದರು.
ಕಾರ್ಮಿಕ ಇಲಾಖೆಯಿಂದ ಪಡೆಯುವ ಲೈಸೆನ್ಸ್ ನಿಮ್ಮಗಳ ಸುಭದ್ರತೆಗಾಗಿ, ಪ್ರತಿಯೊಂದು ಹೊಟೇಲದ, ಅಂಗಡಿ ಮಾಲೀಕರು ಇನ್ನಾದರೂ ಜಾಗೃತರಾಗಿ ಎಂದು ವಿವಿದ ಇಲಾಖೆಯ ಅಧಿಕಾರಿಗಳೊಂದಿಗೆ ಬೇಟಿ ಕೊಟ್ಟು ಎಚ್ಚರಿಕೆ ನೀಡಲಾಯಿತು.
ಪಟ್ಟಣದ ಪೆÇಲೀಸ್ ಸಬ್ ಇನ್ಸ್ ಪೆಕ್ಟರ್ ಸ್ವಾಮೀಗೌಡ, ಜಿಲ್ಲಾ ಬಾಲಕಾರ್ಮೀಕರ ಯೋಜನಾ ನಿರ್ಧೇಶಕ ಮಲ್ಲಿಕಾರ್ಜುನ, ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಲೋಕೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಮೇಲ್ವಿಚಾರಕಿ ಕೆ.ಎಂ.ಗಾಯಿತ್ರಿ, ಕಾರ್ಮಿಕ ಇಲಾಖೆ ಗಣಕಯಂತ್ರಗಾರ ಚಂದ್ರಕಾಂತ್ ಇದ್ದರು.