ಆರೋಗ್ಯ ಜೀವನಕ್ಕೆ ಸಂಸದ ಡಾ, ಮಂಜುನಾಥ್ ಸಲಹೆ
ಕೆಂಗೇರಿ,ಆ.೨೪ : ನಾವು ನೂರು ವರುಷ ಜೀವಿಸ ಬೇಕಾದರೆ ಆಹಾರ.ಆಟ.ಮನೋರಂಜನೆ ಎಂಬ ಈ ಮೂರು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸಂಸದ ಡಾ.ಮಂಜುನಾಥ್ ರವರು ತಿಳಿಸಿದರು.
ಅನ್ನಪೂರ್ಣೇಶ್ವರಿ ನಗರದ ಕುವೆಂಪು ಬಯಲು ರಂಗ ಮಂದಿರದಲ್ಲಿ ಗಜಾನನ ಸಂಸ್ಥಾಪಕರಾದ ಶಿಲ್ಪ ಕಿರಣ್, ರವರ ನೇತೃತ್ವದಲ್ಲಿ ಮುಂಗಾರು ಮೇಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು
ನಂತರ ಶಾಸಕ ಮುನಿರತ್ನ ಮಾತನಾಡಿ ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢವಾಗಿ ಬೆಳೆಯಲು ಮನರಂಜನೆ ಅಗತ್ಯ. ಸಮಾಜದಲ್ಲಿ ಮಹಿಳೆ ಎಲ್ಲ ರಂಗದಲ್ಲಿ ದಾಪುಗಾಲು ಹಾಕಿದ್ದಾಳೆ. ಸ್ವಾವಲಂಬಿ ಜೀವನ ನಡೆಸಲು ಮಹಿಳೆಗೆ ಹೇರಳವಾದ ಅವಕಾಶಗಳು ಇವೆ ಎಂದು ಹೇಳಿದರು.
ಗಜಾನನ ಸಂಸ್ಥಾಪಕರಾದ ಶಿಲ್ಪ ಕಿರಣ್ ಅವರು ಮಾತನಾಡಿ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು.ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಹೃದ್ರೋಗ ಹಾಗೂ ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗಿವೆ. ಇವು ಶ್ರೀಮಂತಖಾಯಿಲೆಗಳಾಗಿದ್ದು, ಬಮ್ಮಡಜನರು ಆರ್ಥಿಕವಾಗಿ ಭರಿಸಲು ಅಸಾಧ್ಯ ಎಂದು ತಿಳಿಸಿದರು
ಉಚಿತ ಆರೋಗ್ಯ ಶಿಬಿರ, ಚಿತ್ರಕಲೆಸ್ಪರ್ಧೆ ಮಕ್ಕಳಿಂದ ಮನರಂಜನೆ ಕಾರ್ಯಕ್ರಮ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಹಾಗೂ ವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದರು ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು
ಈ ಕಾರ್ಯಕ್ರಮಕ್ಕೆ ಡಾ. ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷ ವೀರಕಪುತ್ರ ಎಂ. ಶ್ರೀನಿವಾಸ್,ಬೆಂಗಳೂರು ಕೇಂದ್ರ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚ ಉಪಾಧ್ಯಕ್ಷ ಎಂ. ಮಂಜುನಾಥ್, ಜ್ಞಾನಭಾರತಿ ವಾರ್ಡ್ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷ ಜಯರಾಮಯ್ಯ,ಜ್ಞಾನಭಾರತಿ ವಾರ್ಡ್‌ಅಧ್ಯಕ್ಷ ಶಿವಶಂಕರ್, ಜ್ಞಾನಭಾರತಿ ಮಹಿಳಾ ವೇದಿಕೆಯ ಅಧ್ಯಕ್ಷೆ ರಾಜಕುಮಾರಿ, ಬಿಜೆಪಿ ಮುಖಂಡರಾದ ಸಿ.ಎಂ. ಮಂಜುನಾಥ್, ಮಾಜಿ ನಗರಸಭಾ ಸದಸ್ಯ ಪಾರ್ವತಮ್ಮ ಮತ್ತಿತರರು ಉಪಸ್ಥಿತರಿದ್ದರು