ಪ್ರಾಣ ಬಿಟ್ಟೇವು ಕಸ ಹಾಕಲು ಬಿಡುವುದಿಲ್ಲ
ಕೆಜಿಎಫ್. ೨೪- ಆ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನ ಕಸವನ್ನು ವಿಲೇವಾರಿ ಮಾಡಲು ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಂದಾದರೆ ನಾವು ಪ್ರಾಣ ಬಿಡುತ್ತೇವೆ ಆದರೆ ಕಸವನ್ನು ಈ ಭಾಗದಲ್ಲಿ ಸುರಿಯಲು ಬಿಡುವುದಿಲ್ಲ ಎಂದು ಟಿ. ಗೊಲ್ಲ ಹಳ್ಳಿ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಸಕಾ೯ರ ಕ್ಕೆ ಎಚ್ಚರಿಕೆ ನೀಡಿದರು.
ಪಂಚಾಯಿತಿ ಕಚೇರಿ ಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಬೆಂಗಳೂರು ನಗರದ ಕಸವನ್ನು ಇಲ್ಲಿ ತಂದು ಸುರಿಯಲು ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದ್ದು ನಮ್ಮ ಭಾಗದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರು ವಾಸಿಸುತ್ತಿದ್ದು ಕಸದ ವಾಸನೆ ಯಿಂದ ಸಾಂಕ್ರಾಮಿಕ ರೋಗಗಳು ಹರಡಲಿದೆ ರೋಗಗಳನ್ನು ಗುಣಪಡಿಸುವ ಶಕ್ತಿ ನಮ್ಮ ಜನರಲ್ಲಿ ಇಲ್ಲ ಎಂದು ಹೇಳಿದರು.
ಹಿಂದೆ ೨೦೧೬-೧೭ ರಲ್ಲಿ ಸಹ ಕೆಜಿಎಫ್ ನಗರ ಪ್ರದೇಶಗಳಲ್ಲಿ ಕಸ ಹಾಕಲು ಬಿಬಿಎಂಪಿ ಮುಂದಾಗಿತ್ತು ಆದರೆ ಅಂದು ಪಕ್ಷಾತೀತವಾಗಿ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಯಿತು ಆದರೆ ಮರಳಿ ಕಸ ಹಾಕುವ ಯತ್ನನಡೆಯುತ್ತಿದ್ಜು ಯಾವುದೇ ಕಾರಣಕ್ಕೂ ನಮ್ಮ ವ್ಯಾಪ್ತಿಯಲ್ಲಿ ಕಸ ಹಾಕಲು ಬಿಡುವುದಿಲ್ಲ ಕಸದ ಬಗ್ಗೆ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಈ ವೇಳೆ ಪಂಚಾಯಿತಿ ಸದಸ್ಯ ರಾದ ಗೊಪಿ ಹಾಗೂ ಇತರರು ಹಾಜರಿದ್ದರು.