ಕಸ ವಿಲೇವಾರಿ, ಶಾಸಕಿ ರೂಪಕಲಾ ಮೌನ
ಕೆಜಿಎಫ್:ಆ:೨೪:ರಾಜ್ಯ ಸರ್ಕಾರದ ಮುಡಾ ವಾಲ್ಮೀಕಿ ನಿಗಮ ದಲಿತರ ಅನುದಾನ ದುರ್‍ಬಳಕೆ ಪ್ರಕರಣಕ್ಕೆ ಇಧೀಗ ೪ ನೇ ಹಗರಣ ಸೇಪರ್ಡೆಯಾಗಿದ್ದು ಬೆಂಗಳೂರು ಮಹಾನಗರ ಪಾಲಿಕೆ ಪ್ರತಿ ನಿತ್ಯ ಸಂಗ್ರಹಿಸುವ ಕಸವನ್ನು ಕೆಜಿಎಫ್ ತಾಲ್ಲೂಕಿನ ಸರ್ವೇ ೩೬ ರಲ್ಲಿ ಲಭ್ಯವಿರುವ ೩೧೮ ಎಕರೆ ಸರ್ಕಾರಿ ಜಮೀನಿನಲ್ಲಿ ಸುರಿಯುವ ಪ್ರಯತ್ನಕ್ಕೆ ಮುಂದಾಗಿದ್ದು ಕ್ಷೇತ್ರದ ಶಾಸಕಿ ರೂಪಕಲಾಶಶಿಧರ್ ಮಾತ್ರ ಜಾಣ ಮೌನವನ್ನು ತೊರಿಸುತ್ತಿರುವುದನ್ನು ಕಂಡರೆ ಅವರು ಸಹ ಶಾಮೀಲು ಆಗಿದ್ದಾರಾ ಎಂಬ ಅನುಮನ ಕಾಡುತ್ತಿದೆ ಎಂದು ಮಾಜಿ ಶಾಸಕ ವೈ.ಸಂಪಂಗಿ ರಾಜ್ಯ ಸರ್ಕಾರ ಹಾಗೂ ಶಾಸಕಿ ರೂಪಶಶಿಧರ್ ವಿರುದ್ಧ ಗುಡುಗಿದರು.
ಕಳೆದ ಒಂದು ವಾರದಿಂದ ಕೆಜಿಎಫ್ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಲು ಜಮೀನು ಪರಿಶೀಲನೆ ನಡೆಸುವಂತೆ ಆದೇಶ ನೀಡಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಿದ್ದು ಬಹಿರಂಗಗೊಂಡ ಹಿನ್ನಲೆಯಲ್ಲಿ ಮಾಜಿ ಶಾಸಕ ವೈ.ಸಂಪಂಗಿ ಐಸಂದ್ರಮಿಟ್ಟೂರು ಗ್ರಾಮಸ್ಥರು ಸೇರಿದಂತೆ ನೂರಾರು ಗ್ರಾಮಸ್ಥರೊಂದಿಗೆ ಅರಣ್ಯ ಪ್ರದೇಶಕ್ಕೆ ಕಾಲ್‌ನಡಿಗೆಯಲ್ಲಿ ತೆರಳಿ ಮಾಧ್ಯಮದೊಂದಿಗೆ ಮಾತನಾಡಿ ಕ್ಷೇತ್ರದಲ್ಲಿ ಆತಂಕದ ಸನ್ನಿವೇಶ ನಿರ್ಮಾಣವಾಗಿದ್ದರು ಏಕೆ ಶಾಸಕರು ಮಾತ್ರ ತುಟಿ ಬಿಚ್ಚುತ್ತಿಲ್ಲ ಅವರು ಸಹ ರಾಜ್ಯ ಸರ್ಕಾರ ರೂಪಿಸಿರುವ ಸಂಚಿನಲ್ಲಿ ಭಾಗಿಯಾಗಿದ್ದಾರಾ ಎಂಬ ಅನುಮಾನ ನಮನ್ನು ಕಾಡುತ್ತಿದೆ ಎಂದು ಆರೋಪಿಸಿದರು.
ಕೆಜಿಎಫ್ ವಿಧಾನಸಭೆ ಕ್ಷೇತ್ರದಲ್ಲಿ ಕೈಗಾರಿಕೆ ಕ್ರಾಂತಿ ಮಾಡುವ ನಿಟ್ಟಿನಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ರಾಜ್ಯದ ಹಿಂದಿನ ಮುಖ್ಯಮಂತ್ರಿ ಬೋಮಯ್ಯಿ ಸರ್ಕಾರ ಪ್ರಮುಖ ಕಾರಣ ಆದರೆ ಶಾಸಕಿ ರೂಪಶಶಿಧರ್ ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಒಂದು ಲಕ್ಷ ಕಲ್ಪಿಸುವ ಮೂಲಕ ಉದ್ಯೋಗ ಕ್ರಾಂತಿ ಉಂಟು ಮಾಡಲಿದ್ದೇನೆ ಎಂದು ಸುಳ್ಳು ಭರವಸೆ ನೀಡಿ ಆಯ್ಕೆಯಾಗಿ ೧೫ ತಿಂಗಳು ಕಳೆದಿದೆ ಇದುವರೆಗೂ ಕೈಗಾರಿಕೆ ತರುವಲ್ಲಿ ಯಾವುದೇ ಪ್ರಯತ್ನಗಳು ಆಗಿಲ್ಲ ಕನಿಷ್ಠ ಪಕ್ಷ ಕಾಪೌಂಡ್ ಗೋಡೆ ನಿರ್ಮಾಣ ಕೆಲಸ ಸಹ ಆಗಿಲ್ಲ ಆದ್ದರಿಂದ ನಮಗೆ ಕೈಗಾರಿಕೆ ಬರುವುದರ ಬಗ್ಗೆ ಅನುಮಾನ ಮೂಡುತ್ತಿದೆ ಎಂದು ಹೇಳಿದರು.
ಹೋರಾಟಕ್ಕೆ ದಲಿತ ಅಲ್ಪಸಂಖ್ಯಾತ ಗ್ರಾಮಸ್ಥರು ಸಹಕಾರ ನೀಡಬೇಕುಕಸ ಹಾಕುವುದನ್ನು ತಡೆಯುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಹೋರಾಟವನ್ನು ಹಂತ ಹಂತವಾಗಿ ವಿವಿಧ ರೀತಿಯಲ್ಲಿ ಮಾಡಲಾಗುವುದು ಮತ್ತು ಕಸವನ್ನು ಈ ಭಾಗದಲ್ಲಿ ಹಾಕಲು ಬಿಡುವುದಿಲ್ಲ ಎಂದು ಹೇಳಿದರು.