ಹಿರಿಯೂರು : ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆಗೆ ಚಾಲನೆ
ಸಂಜೆವಾಣಿ ವಾರ್ತೆ
ಹಿರಿಯೂರು.ಆ‌.೨೪ : ಇಲ್ಲಿನ ಹಿಂದೂ ಮಹಾಗಣಪತಿಯ ಪ್ರತಿಷ್ಠಾಪನೆಗೆ ಚಾಲನೆ ನೀಡಲಾಗಿದ್ದು    ಧ್ವಜ ಪೂಜೆ ಮತ್ತು ಗೋಪೂಜೆ  ನಡೆಸಲಾಯಿತು, ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರು ಸಂಘ ಪರಿವಾರ ಕಾರ್ಯಕರ್ತರು ಉತ್ಸವ ಸಮಿತಿಯ ಸದಸ್ಯರು ಹಾಗೂ ಹಿಂದೂ ಮಹಾಗಣಪತಿಯ ಎಲ್ಲಾ ಭಕ್ತಾದಿಗಳು ಆಗಮಿಸಿ ಈ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಭಕ್ತಿ ಪೂರ್ವಕವಾಗಿ ನೆರವೇರಿಸಿದರು. ಈ ಸಂದರ್ಭದಲ್ಲಿಆರ್ ಟಿ ಪ್ರಶಾಂತ್, ಅಮರ್ ನಾಥ್ ರಾಜೇಂದ್ರ ದೇಸಾಯಿ, ವೆಂಕಟೇಶ್ ಜಿ, ರಾಮಕೃಷ್ಣ ರಾಜೇಂದ್ರ ಸಿಂಗ್, ಪ್ರಶಾಂತ್ ನಿರ್ವಣಾ ಮಧು, ನಾಗದೀಪ್, ಶಾಮ್ ಚೇತನ್ ಆಲೂರು, ಮಂಜುನಾಥ್, ಟಿ ರವಿಕುಮಾರ್, ಗೋವಿಂದಾಚಾರ್, ಎನ್.ಎಸ್.ಜೋದಾ, ನವೀನ್ ಆರ್(ಭಜರಂಗಿ) ,ಆದರ್ಶಬೇಕರಿ ,ಗೋವರ್ಧನ,ಕೊಂಡಾಚಾರ್ ಮಹಾಂತೇಶ್ ಆಚಾರ್, ಇನ್ನುಮುಂತಾದವರು ಇದ್ದರು,