ತುಂಗಾರತಿ ಮಂಟಪ ನಿರ್ಮಿಸಲು ಬಿಜೆಪಿ ಅವಧಿಯಲ್ಲಿ 30 ಕೋಟಿ ಅನುದಾನ: ಬಸವರಾಜ ಬೊಮ್ಮಾಯಿ
ಸಂಜೆವಾಣಿ ವಾರ್ತೆ
ಹರಿಹರ.ಆ.೨೪; ಪ್ರತಿಯೊಂದು ಜೀವಿಗೂ ಗಾಳಿಯ ನಂತರ ಅತ್ಯವಶ್ಯವಾಗಿ ಬೇಕಾಗಿರುವ ನೀರನ್ನು ಸಂರಕ್ಷಿಸಿ ಪೂಜಿಸುವ ಸಂಸ್ಕೃತಿ ನಮ್ಮದು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಅವರು ತುಂಗಭದ್ರಾ ತಟದಲ್ಲಿ ನಿರ್ಮಿಸಿರುವ ತುಂಗಾರತಿ ಮಂಟಪದಲ್ಲಿ ಹರಪೀಠ, ವೀರಶೈವ ಲಿಂಗಾಯತ ಪಂಚಮಸಾಲಿ ಮಹಿಳಾ ಘಟಕದಿಂದ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ವಚನಾನಂದ ಸ್ವಾಮೀಜಿ ಜೊತೆಗೆ ತುಂಗಭದ್ರಾ ನದಿಗೆ ಬಾಗಿನ ಅರ್ಪಿಸಿ ಮಾತನಾಡಿದರು. ಭಾರತೀಯರೆಂದರೆ ಸಂಸ್ಕೃತಿಯ ರಕ್ಷಕರು, ಕನ್ನಡ ನಾಡು, ನುಡಿ, ನೆಲ, ಜಲ, ಭಾಷೇಯ ಸಂರಕ್ಷಣೆ ಸರ್ವರ ಹಕ್ಕಾಗಿದೆ. ಅದರಂತೆ ಅಲ್ಲಿ ಗಂಗಾರತಿ, ಇಲ್ಲಿ ತುಂಗಾರತಿ ಎಂದು ನಂಬಿ ಮಧ್ಯ ಕರ್ನಾಟಕದ ನಮ್ಮೆಲ್ಲರ ಜೀವ ನದಿಯಾದ ತುಂಗಭದ್ರೆಗೆ ನಮಿಸುವುದಕ್ಕಾಗಿ ತುಂಗಾರತಿ ಮಂಟಪವನ್ನು ನಿರ್ಮಿಸಲು, ನಮ್ಮ ಸರಕಾರದ ಅವಧಿಯಲ್ಲಿ 30 ಕೋಟಿ ರೂ. ಅನುದಾನ ನೀಡಲಾಗಿದೆ’’ ಎಂದರು.