ಸಹಾಯ ಮಾಡಿದವರು ಸದಾ ಸ್ಮರಣೀಯರು
(ಸಂಜೆವಾಣಿ ವಾರ್ತೆ)
 ಬಳ್ಳಾರಿ:ಅ,23- ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಸಹಾಯ ಮಾಡಿದವರು ಸದಾ ಸ್ಮರಣೀಯರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ತಟ್ಟೆ,ಗ್ಲಾಸ್ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಬೆಂಗಳೂರು ವಿಧಾನಸೌಧದಲ್ಲಿ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಅನಿಲ್ ಕುಮಾರ್ ಎಂ  ಗೋನಾಳು ಅವರು ಶಾಲೆಯ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಸೇವನೆಗೆ ಅನುಕೂಲವಾಗಲಿ ಎಂದು ಐವತ್ತು ತಟ್ಟೆ , ಐವತ್ತು ಗ್ಲಾಸ್ ಜೊತೆಗೆ ಆಗಸ್ಟ್ ಹದಿನೈದರಂದು ಪಿರಮಿಡ್ ರಚಿಸಿ ವಿಜೇತರಾದ ಹದಿನೈದು ಮಕ್ಕಳಿಗೆ ಬಹುಮಾನ ವಿತರಣೆ ಮಾಡುತ್ತಿರುವುದನ್ನು ನೆನೆದು ಸ್ಲಾಗಿಸಿದರು.
ತಾನು ಗಳಿಸಿದರಲ್ಲೇ ಸ್ವಲ್ಪ ದಾನ ಮಾಡುತ್ತಿರುವುದು ಸಾಮಾಜದಲ್ಲಿ ಮಾದರಿ ಕೆಲಸವಾಗಿದೆ. ಎಲ್ಲರೂ ಸೇರಿ ಬುದ್ಧ, ಬಸವ,ಅಂಬೇಡ್ಕರ್ ಅವರ ಆಶಾಯಗಳನ್ನು ಈಡೇರಿಸಬೇಕಾಗಿದೆ.
ಆದ್ದರಿಂದ ವಿದ್ಯಾರ್ಥಿಗಳು ಕಷ್ಟ ಪಟ್ಟು ಓದಿ ಮೇಲಕ್ಕೆ ಬರಬೇಕೆಂದು ಹೇಳಿದರು.
ಅನಿಲ್ ಕುಮಾರ್ ಎಂ ಗೋನಾಳು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪ ನಮನಸಲ್ಲಿಸಿ ವಿದ್ಯಾರ್ಥಿಗಳು ಉತ್ತಮವಾಗಿ ಓದಿ ಉದ್ಯೋಗ ಪಡಿಯಬೇಕೆಂಬ ಆಶಯ ನುಡಿಗಳನ್ನಾಡಿದರು.
ಶಿಕ್ಷಕರಾದ ದಿಲ್ಷಾದ್ ಬೇಗಂ, ಸುಮತಿ, ಶ್ವೇತಾ, ಶಶಮ್ಮ, ರಾಮಾಂಜನೇಯ, ಗುರುಪ್ರಸಾದ್, ವಿಜಯ ಮುಂಡ್ರಿಗಿ, ಅರುಣ್ ಕುಮಾರ್,ವಿದ್ಯಾರ್ಥಿ ಪ್ರತಿನಿಧಿ ಕೆ.ಎಸ್. ಅನುಷ,ನಿತ್ಯ, ಲಾವಣ್ಯ, ಪ್ರೇಮ ಮುಂತಾದವರು ಉಪಸ್ಥಿತರಿದ್ದರು.