ಮೆಣಸಿನಕಾಯಿ ಬೆಳೆ: ಗಾಯದ ಮೇಲೆ ಬರೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಅ,23-  ಜಿಲ್ಲೆಯ ಕುರುಗೋಡು ಮತ್ತು ಬಳ್ಳಾರಿ ತಾಲೂಕಿನ ಮೆಣಸಿನಕಾಯಿ ಸಸಿ ನಾಟಿ ಮಾಡಿದ ರೈತರಿಗೆ ಹಲವು ದಿನಗಳಿಂದ ಬಿದ್ದ ಮಳೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಬೆಲೆ ಕುಸಿತದಿಂದ ಕಳೆಷ ಎರೆಡು ವರ್ಷಗಳಿಂದಮೆಣಸಿನಕಾಯಿ ಬೆಳೆದ ಬಹುತೇಖ ರೈತರು ತಮ್ಮ‌ಮಾಲನ್ನು ಕೋಲ್ಡ್ ಸ್ಟೋರೇಜ್ ಗಳಲ್ಲಿ ಇಟ್ಟುಕೊಂಡು ಬೆಲೆ ಏರಿಕೆಗಾಗಿ ಕಾಯುತ್ತಿದ್ದಾರೆ.
ಹೆಚ್ಚು ಬೆಲೆ ಕೊಡುತ್ತಾರೆಂದು ಮಾರಾಟ ಮಾಡಿದವರು ಖರೀದಿ ನಂತರ ಕೈ ಎತ್ತುತ್ತಿದ್ದಾರೆ.
ಬೆಲೆ ಕುಸಿತ, ಖರೀದಿದಾರರಿಂದ ವಂಚನೆ ನಡುವೆ ಈ ವರ್ಷ ನಾಟಿ ಮಾಡಿದ ಸಸಿ ಮಳೆಯಿಂದಾಗಿ ಹಾಳಾಗಿದೆ. ಇದರಿಂದ ರೈತ ಮತ್ತೆ ಸಸಿತಂದು ನಾಟಿ ಮಾಡಬೇಕಾದ ಪರಿಸ್ಥಿತಿ ಬಂದಿದೆ.