ಬಳ್ಳಾರಿಯ 14 ಗ್ರಾಮ ಪಂಚಾಯ್ತಿಗಳ ಮೇಲೆ ಲೋಕಾಯುಕ್ತ ದಾಳಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಅ, 23- ತಾಲೂಕಿನ 14 ಗ್ರಾಮ ಪಂಚಾಯತಿಗಳ ಮೇಲೆ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸಿದ್ದಾರೆ.
ಬಳ್ಳಾರಿ ನಗರದ ಸುತ್ತಮುತ್ತಲಿರುವ ಶ್ರೀಧರಗಡ್ಡೆ, ಪಿಡಿ.ಹಳ್ಳಿ, ಅಮರಾಪುರ, ಸಂಗನಕಲ್ಲು, ಹಲಕುಂದಿ ಸೇರಿದಂತೆ 14 ಗ್ರಾಮ ಪಂಚಾಯ್ತಿಗಳಲ್ಲಿ 11 ಇ ಸ್ಕೆಚ್ ನೀಡಲು ವಿಳಂಬ ಮಾಡುತ್ತಿರುವ ಬಗ್ಗೆ ಹಾಗು 14 ನೇ ಹಣಕಾಸು ಯೋಜನೆಯ ಹಣ ಬಳಕೆಯಲ್ಲಿ‌ ನಿಯಮಗಳನ್ನು ಉಲ್ಲಂಘಿಸಿ ಕಾಮಗಾರಿ ಮಾಡಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಬಂದ  ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಿಗ್ಗೆಯಿಂದ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಯಾರು ಯಾರು, ಯಾವ ಯಾವ ಪಂಚಾಯ್ತಿಗಳ ಅಕ್ರಮ ಏನಾಗಿದೆಂಬುದನ್ನು ಸಂಜೆ ವೇಳೆಗೆ ಲೋಕಾಯುಕ್ತರು ವರದಿ ನೀಡಬಹುದು.