ಕಲ್ಲಿನಿಂದ ಜಜ್ಜಿ ವ್ಯಕ್ತಿ ಕೊಲೆ
ಹುಮನಾಬಾದ್ :ಅ.2: ಪಟ್ಟಣದ ವೀರಭದ್ರೇಶ್ವರ ತೇರು ಮೈದಾನದಲ್ಲಿ ಬುಧವಾರ ಬೆಳಗ್ಗೆ ವ್ಯಕ್ತಿಯ ಮೃತ ಶವ ಪತ್ತೆಯಾಗಿದೆ.
ತಾಲೂಕಿನ ಧುಮ್ಮನಸೂರ ಗ್ರಾಮದ ಅರ್ಜುನ್ (46) ಎಂದು ಗುತಿಸಲಾಗಿದೆ. ಮೃತ ವ್ಯಕ್ತಿಯ ತಲೆಯ ಮೇಲೆ ಗಂಭೀರ ಗಾಯಗಳು ಬಂದಿದ್ದು, ಇದನ್ನು ಕೊಲೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ವೀರಭದ್ರೇಶ್ವರ ತೇರು ಮೈದಾನದಲ್ಲಿ ಬೆಳಕಿಗೆ ಬಂದ ಮೃತ ದೇಹ ದೊರೆತ ಘಟನೆಗೆ ಸಂಬಂಧಿಸಿದಂತೆ ಪೆÇಲೀಸ್ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದೆ. ತನಿಖೆಯ ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ಪೆÇಲೀಸ್ ಮೂಲ ತಿಳಿಸಿದೆ.