ಕಮಠಾಣ ಪ.ಪೂ ಕಾಲೇಜನಲ್ಲಿ ಶಿಕ್ಷಕರ ದಿನಾಚರಣೆ
ಬೀದರ್:ಅ.2: ತಾಲೂಕಿನ ಕಮಠಾಣ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಲಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಇತ್ತಿಚೀಗೆ ಶಿಕ್ಷಕರ ದಿನಾಚರಣೆ ಜರುಗಿತು.
ಬೀದರ್ ನಗರ ಸಭೆ ಸದಸ್ಯೆ ಉಲ್ಲಾಸಿನಿ ಮುದಾಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮನ್ನು ಇತರರಿಗೆ ಹೋಲಿಕೆ ಮಾಡಿಕೊಳ್ಳಕೂಡದು ತಮ್ಮ ನಿರ್ದಿಷ್ಟ ಗುರಿಯನ್ನು ಯಶಸ್ವಿಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಆಂಗ್ಲ ಉಪನ್ಯಾಸಕ ಸುನಿಲಕುಮಾರ ಮಾತನಾಡಿ, ಗುರುಕುಲ ಪದ್ಧತಿಯ ಮೂಲಕ ವಿದ್ಯಾರ್ಥಿಗಳ ಶಿಕ್ಷಣ ನೀಡಬೇಕು, ಗುರಿ ಇದ್ದಲ್ಲಿ ಮಾತ್ರ ನಮ್ಮ ಅಭಿವೃದ್ಧಿ ಸಾಧ್ಯ ಎಂದು ತಿಳಿಸುತ್ತಾ ಗುರುವಿನ ಗುಣಗಾನ ಮಾಡಿದರು
ಇತಿಹಾಸ ತಜ್ಞ ಗೋಪಾಲ್ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರತಿಭಾ ಡಿ ಮಾತನಾಡಿ, ಗುರುವಿನ ಮಹತ್ವ ತಿಳಿಸಿ, ಇಂಪಾದ ಗಾಯನದ ಮೂಲಕ ಗುರುವಿನ ಮಹಿಮೆ ಕೊಂಡಾಡಿದರು.
ಮಂಗಲಾ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಕು. ಮಂಗಲಾ ಮರಕಾಲೆ ಅಧ್ಯಕ್ಷತೆ ವಹಿಸಿದ್ದರು.
ಶಶಿಕಲಾ ಸ್ವಾಗತಿಸಿದರು. ಪ್ರಕಾಶ ವಂದಿಸಿದರು ಕಾಲೇಜಿನ ಉಪನ್ಯಾಸಕಿ ವಿದ್ಯಾವತಿ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.