ಎಡಿಜಿಪಿ ಎಂ ಚಂದ್ರಶೇಖರ ಹೇಳಿಕೆ ಖಂಡಿಸಿ ಬಿಜೆಪಿ ಜೆಡಿಎಸ್ ಮೈತ್ರಿಕೂಟದಿಂದ ಪ್ರತಿಭಟನೆ
ಅಥಣಿ : ಅ.2:ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿ ಎಡಿಜಿಪಿ ಎಂ ಚಂದ್ರಶೇಖರ ಅವರು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಬಗ್ಗೆ ಅವಹೇಳನಕಾರಿ ಹಾಗೂ ಅಸಂವಿಧಾನಿಕ ಪದಗಳನ್ನು ಬಳಸಿ ಪತ್ರ ಬರೆದಿರುವುದು ಮತ್ತು ಆ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದು ಭಾರತೀಯ ಆಡಳಿತ ಸೇವೆಯ ನಿಯಮಕ್ಕೆ ವಿರುದ್ಧವಾದದ್ದು ತಕ್ಷಣವೇ ಅವರನ್ನು ಅಮಾನತ್ತುಗೊಳಿಸಿ ಶಿಸ್ತು ಕ್ರಮ ಜರುಗಿಸಬೇಕು ಎಂದು ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಶಹಜಹಾನ ಡೊಂಗರಗಾoವ ಸರ್ಕಾರವನ್ನು
ಒತ್ತಾಯಿಸಿದರು.
ಅವರು ಮಂಗಳವಾರ ಅಥಣಿ ತಹಶೀಲ್ದಾರ ಕಚೇರಿಯ ಮಿನಿ ವಿಧಾನಸೌಧ ಆವರಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಪ್ರತಿಭಟಿಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ನಂತರ ತಹಶೀಲ್ದಾರ್ ಸಿದರಾಯ ಭೋಸಗೆ ಅವರ ಮೂಲಕ ರಾಷ್ಟ್ರಪತಿ/ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರನ್ನು ತೇಜೊವಧೆ ಮಾಡುವ ಉದ್ದೇಶದಿಂದ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವ ಎಂ ಚಂದ್ರಶೇಖರ ಐಪಿಎಸ್ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಐಪಿಎಸ್ ಅಧಿಕಾರಿಯಾಗಿರುವ ಎಡಿಜಿಪಿ ಎಂ ಚಂದ್ರಶೇಖರ ಅವಹೇಳನಕಾರಿ ಶಬ್ದಗಳನ್ನು ಬಳಕೆ ಮಾಡುವ ಮೂಲಕ ಜನ ಪ್ರತಿನಿಧಿಗಳನ್ನೇ ಅವಮಾನಿಸಿದ್ದಾರೆ. ಕರ್ತವ್ಯದಲ್ಲಿರುವ ಅಧಿಕಾರಿ ಸಂವಿಧಾನ ಮತ್ತು ಕಾನೂನುಬಾಹಿರುವಾಗಿ ನಡೆದುಕೊಂಡಿದ್ದಾರೆ. ಕರ್ತವ್ಯ ಲೋಪ ಮತ್ತು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವ ಈ ಅಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಿ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಬಿಜೆಪಿ ಮುಖಂಡರಾದ ಸಿದ್ದಪ್ಪ ಮುದಕಣ್ಣವರ. ಸಂಪತ್ತಕುಮಾರ ಶೆಟ್ಟಿ, ಪ್ರಭಾಕರ ಚವ್ವಾಣ ಮಾತನಾಡಿ ಅವಹೇಳನಕಾರಿ ಪದ ಬಳಕೆ ಹಾಗೂ ಕರ್ತವ್ಯ ಲೋಪ ಎಸಗಿರುವ ಅಧಿಕಾರಿಯನ್ನು ಕೂಡಲೇ ಅಮಾನತ್ತುಗೊಳಿಸಬೇಕೆಂದು ಒಕ್ಕೊರಲಿನಿಂದ ಒತ್ತಾಯಿಸಿದರು.
ಈ ವೇಳೆ ಶಿವಪ್ರಸನ್ನ (ಪುಟ್ಟು) ಹಿರೇಮಠ, ಮಹಾಂತೇಶ ಅವಟಿ. ಇಮ್ತಿಯಾಜ್ ಹಿಪ್ಪರಗಿ. ರಾಜು ಡವರಿ. ಶಿವಾನಂದ ಐಗಳಿ. ವಿಧ್ಯಾಧರ ನಾಡಗೌಡ. ಚಿಕ್ಕಪ್ಪ ಧರಿಗೌಡ. ಅಸ್ಕರಲಿ ಡೊಂಗರಗಾಂವ. ಬಾಬುಲಾಲ ಸುತಗುಂಡಿ. ಗೀತಾ ತೋರಿ. ಸರಸ್ವತಿ ನೇಮಗೌಡ. ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು