ವಿಶ್ವ ಹಿರಿಯ ನಾಗರಿಕರ ದಿನಾಚರಣೆ
ಕೊಲ್ಹಾರ:ಅ.2:ನಗರಿಕರಣಕ್ಕೆ ಹೆಚ್ಚಿನ ಆದ್ಯತೆ, ಸಂಕುಚಿತ ಮನೋಭಾವ, ಅವಿಭಕ್ತ ಕುಟುಂಬಗಳ ವಿಂಗಡಣೆಯಿಂದ ಹಿರಿಯ ನಾಗರಿಕರು ಮಕ್ಕಳಿಂದ ಪರಿತ್ಯಕ್ತರಾಗಿ ವೃದ್ಧಾಶ್ರಮ, ಅನಾಥಾಶ್ರಮದ ಆಸೆರೆಗೆ ಹೋಗುತ್ತಿರುವುದು ಖೇದಕರ ಸಂಗತಿ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಲಕ್ಮೀ ತೆಲ್ಲೂರ ಹೇಳಿದರು.
ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಪ್ರಯುಕ್ತ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹಿರಿಯ ನಾಗರಿಕರು ಮನೆಗೆ ಹಾಗೂ ಕುಟುಂಬಕ್ಕೆ ಆಲದಮರವಿದ್ದಂತೆ, ಅವರ ನೆರಳಿನಲ್ಲಿ ಬದುಕು ಸವೆಸುವ ನಾವುಗಳು ಪುಣ್ಯವಂತರು ಎಂದರು.
ಆಯುಷ್ ವೈದ್ಯಾಧಿಕಾರಿ ಡಾ.ಎಸ್.ಎಂ ಪಾಟೀಲ್ ಮಾತನಾಡಿ ಹಿರಿಯ ನಾಗರಿಕರನ್ನು ಕಡೆಗಣಿಸದೇ ಆದರದ ಭಾವದಿಂದ ಕಾಣಬೇಕು. ಮಕ್ಕಳಿಂದ ಪರಿತ್ಯಕ್ತರಾದ ತಂದೆ ತಾಯಿಯರು ವೃದ್ಧಾಶ್ರಮದ ಮೊರೆ ಹೋಗುತ್ತಿದ್ದಾರೆ. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿರುವುದು ದುರಂತ ಎಂದರು.
ಈ ಸಂದರ್ಭದಲ್ಲಿ ಪಟ್ಟಣದ ಪ್ರಮುಖರಾದ ಸದಾಶಿವ ಗಣಿ, ಫೈರೋಜ ಬಳಗಾರ, ದಸ್ತಗೀರ ಚೌಧರಿ, ಲಾಡಶಾಪೀರ ಮಕಾನದಾರ, ಮೌಲಾಲಿ ತಹಸೀಲ್ದಾರ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಆರ್.ಎಂ ಗೌಡರ, ಆರ್.ಕೆ ಯಾತನೂರ, ಎಲ್.ಎಲ್ ಕಟಗೇರಿ, ಅಶೋಕ ಕೊಲ್ಹಾರ ಹಾಗೂ ಇನ್ನಿತರರು ಇದ್ದರು.