ಜೈವಿಕ ಇಂಧನ ಪ್ರಾತ್ಯಕ್ಷಿತೆಗೆ ಚಾಲನೆ
ಬೆಂಗಳೂರು.ಅ.೨- ಮಹತ್ಮ ಗಾಂಧೀಜಿ ಅವರ ಅವಿರತ ಸತ್ಯಾಗ್ರಹ, ಸತ್ಯ-ಅಹಿಂಸೆ ಇಂದಿಗೂ ಪ್ರಚಲಿತವಾಗಿದೆ ಎಂದು ಕರ್ನಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಇ. ಸುಧೀಂದ್ರ ತಿಳಿಸಿದರು.
ನಗರದ ಜಿಕೆವಿಕೆಯಲ್ಲಿ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಹಾಗು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸಹಯೋಗದಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಡಿಸೇಲ್ ವಾಹನಗಳಲ್ಲಿ ಹಾಗೂ ಡಿಜಿ ಸೆಟ್‌ಗಳಲ್ಲಿ ಜೈವಿಕ ಇಂಧನ ಬಳಸುವುದಕ್ಕೆ ಜೈವಿಕ ಇಂಧನ (ಬಯೋಡೀಸೆಲ್) ಚಾಲನಾ ಪ್ರಾತ್ಯಕ್ಷಿತೆಗೆ ಚಾಲನೆ ನೀಡಿದರು.
ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಮಹತ್ಮ ಗಾಂಧೀಜಿ ಅವರ ಅವಿರತ ಸತ್ಯಾಗ್ರಹ, ಸತ್ಯ-ಅಹಿಂಸೆ ಇಂದಿಗೂ ಪ್ರಚಲಿತವಾಗಿದ್ದು ಇದು ನಮಗೆ ಹೆಮ್ಮೆಯ ವಿಚಾರವಾಗಿದೆ ಎಂದರು.