ದಲ್ಲಾಳಿಗಳಿಂದ ದೂರವಿಟ್ಟು, ಕಂಪನಿ ಹಾಗೂ ರೈತರ ಮಧ್ಯೆ ಸಂಪರ್ಕ ಇರಲಿ
ಚಿತ್ತಾಪುರ:ಆ.23:ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ಕಂಪನಿಯವರು ದಿಗ್ಗಾಂವದಲ್ಲಿ ಸುಣ್ಣದ ಗಣಿಗಾರಕೆ ಸ್ಥಾಪಿಸಲು ರೈತರಿಂದ ಸುಣ್ಣದ ಕಲ್ಲು ಗಣಿಗಾರಿಕೆ ಮಾಡಲು 786.32 ಹೆಕ್ಟೇರು ಪ್ರದೇಶದ ಜಮೀನು ಖರೀದಿ ಮಾಡುವಾಗ ದಲ್ಲಾಳಿಗಳಿಂದ ದೂರವಿಟ್ಟು ಕಂಪನಿಯವರು ನೇರವಾಗಿ ರೈತರ ಮಧ್ಯ ಸಂಪರ್ಕ ಮಾಡಬೇಕು ಎಂದು ದಿಗ್ಗಾಂವ ಜಿಪಂ ಮಾಜಿ ಸದಸ್ಯ ಶಿವರುದ್ರ ಭೀಣಿ ಹೇಳಿದರು
ತಾಲೂಕಿನ ದಿಗ್ಗಾಂವ ಗ್ರಾಮದ ಶಂಭುಲಿಂಗೇಶ್ವರ ದೇವಸ್ಥಾನದ ಹೊರವಲಯದಲ್ಲಿ ಕಲಬುರಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿವತಿಯಿಂದ ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್‍ಗಾಗಿ ಸುಣ್ಣದ ಕಲ್ಲು ಗಣಿಗಾರಿಕೆ ಆರಂಭಿಸಲು ಬುಧವಾರ ಹಮ್ಮಿಕೊಂಡ ಪರಿಸರ ಸಾರ್ವಜನಿಕ ಆಲಿಕೆ ಸಭೆಯಲ್ಲಿ ಮಾತನಾಡಿದ ಅವರು, ಕಂಪನಿಗಾಗಿ ದಿಗ್ಗಾಂವ ರೈತರು ಹಾಗೂ ಗ್ರಾಮಸ್ಥರು ಜಮೀನು ನೀಡಲು ಸಿದ್ದರಾಗಿದ್ದಾರೆ. ಆದರೆ ಭೂಮಿ ಖರೀದಿ ಮಾಡುವಾಗ ದಲ್ಲಾಳಿಗಳಿಗೆ ಅವಕಾಶ ನೀಡದೇ ನೇರವಾಗಿ ಗ್ರಾಮದ ರೈತರೊಂದಿಗೆ ಸಂಪರ್ಕ ಮಾಡಬೇಕೆಂದರು.
ಜಮೀನು ನೀಡಿದ ರೈತರಿಗೆ ಉತ್ತಮವಾದ ಬೆಲೆ ನೀಡಬೇಕು. ಪ್ರತಿ ಸರ್ವೇ ನಂಬರಗೆ ಉದ್ಯೋಗ ಕಲ್ಪಿಸಬೇಕು. ಗ್ರಾಮದ ಸಮಗ್ರ ಅಭಿವೃದ್ದಿಗೆ ಮೂಲಸೌಲಭ್ಯಗಳು ಕಲ್ಪಿಸಬೇಕೆಂದು ಹೇಳಿದರು.
ರೈತ ಮುಖಂಡ ಶಾಮರಾವ ಸಂಗಾವಿ ಮಾತನಾಡಿ, ಗ್ರಾಮದ ಸುತ್ತಲೂ ಹೆಚ್ಚು ಕಂಪನಿಗಳು ಸ್ಥಾಪನೆಯಾಗುತ್ತಿರುವುದರಿಂದ ಅಂತರಜಲಮಟ್ಟ ಕುಸಿದು ಗ್ರಾಮದಲ್ಲಿ ನೀರಿನ ಕೊರತೆಯಾಗುತ್ತಿದೆ. ಆದ್ದರಿಂದ ಕಂಪನಿಗಳು ಸ್ಥಾಪಿಸಲು ಅನುಕೂಲ ಮಾಡಿಕೊಡುತ್ತೇವೆ. ಆದರೆ ಗ್ರಾಮಕ್ಕೆ ಸಮರ್ಪಕ ನೀರು ಕಲ್ಪಿಸಬೇಕು. ಸತ್ತವರಿಗೆ ಹೂಳಲು ಜಮೀನು ಮೀಸಲಿಡಬೇಕೆಂದರು ಹೇಳಿದರು.
ರೈತ ಮುಖಂಡ ಶ್ರೀಶೈಲ ಪಾಟೀಲ್ ಮಾತನಾಡಿ, ಇಲ್ಲಿನ ಜಮೀನುಗಳು ಬಂಗಾರದತ್ತಿದ್ದು, ತೊಗರಿ ಕಣಜ ಎಂಬ ಖ್ಯಾತಿ ಚಿತ್ತಾಪುರ ಮರೆಯಾಗುತ್ತಿದೆ. ಉತ್ತಮ ಇಳುವರಿ ನೀಡುತ್ತವೆ. ಆದ್ದರಿಂದ ರೈತರಿಗೆ ಉತ್ತಮ ಬೆಲೆ ನೀಡಬೇಕೆಂದು ಹೇಳೀದರು.
ಕಂಪನಿಯ ಧೂಳು ಬಿದ್ದು ತೊಗರಿ ಬೆಳೆಗಳು ಹಾಳಾಗುತ್ತಿವೆ.
ಹಿರಿಯ ರೈತ ಮುಖಂಡ ಬಾಬುರಾವ ಪಾಟೀಲ್ ಮಾತನಾಡಿ, ಜಮೀನು ಕಳೆದುಕೊಂಡ ಪರಿಶಿಷ್ಟ ಕುಟುಂಬದವರಿಗೆ ಬೇರೆ ಕಡೆ 3 ಎಕರೆ ಜಮೀನು ನೀಡಬೇಕೆಂದರು.
ದಿಗ್ಗಾಂವ ಗ್ರಾಪಂ ಅಧ್ಯಕ್ಷ ಹರಳಯ್ಯ ಬಡಿಗೇರ ಮಾತನಾಡಿ, ದಿಗ್ಗಾಂವ ಗ್ರಾಮ ದತ್ತು ತೆಗೆದುಕೊಳ್ಳಬೇಕು. ಕಂಪನಿಯ ಶಾಲೆಗಳಲ್ಲಿ ರೈತರ ಮಕ್ಕಳಿಗೆ ಶಿಕ್ಷಣ ನೀಡಬೇಕು. ಸಿಎಸ್‍ಆರ್ ಅಡಿಯಲ್ಲಿ ಗ್ರಾಮ ಅಭಿವೃದ್ದಿ ಪಡಿಸಬೇಕೆಂದು ಹೇಳಿದರು.
ರೈತ ಮುಖಂಡ ಗುರುಲಿಂಗಪ್ಪ ಮಾತನಾಡಿ, ಶೇ. 80 ರಷ್ಟು ಪರಿಶಿಷ್ಟ ಜನರ ಜಮೀನುಗಳಾಗಿವೆ. ಪರಿಶಿಷ್ಟರಿಗೆ ಹೆಚ್ಚು ಯೋಜನೆಗಳು ಕಂಪನಿವತಿಯಿಂದ ಕಲ್ಪಿಸಬೇಕು. ಜತೆಗೆ ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ಸೌಲಭ್ಯಗಳು ಒದಗಿಸಬೇಕೆಂದು ಹೇಳಿದರು.
ಜಿಲ್ಲಾಧಿಕಾರಿ ಡಾ. ಫೌಜೀಯಾ ತರನ್ನೂಮ ಮಾತನಾಡಿ, ಸಭೆಯಲ್ಲಿ ರೈತರು ಹಾಗೂ ಗ್ರಾಮಸ್ಥರು ಪ್ರಸ್ತಾಪಿಸಿರುವ ಮಾಹಿತಿ, ಸಲಹೆಗಳನ್ನು ಆಲಿಸಲಾಗಿದೆ. ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.
ಕಂಪನಿ ಮುಖ್ಯಸ್ಥ ಡಾ. ಕೆಬಿ ರೆಡ್ಡಿ ಮಾತನಾಡಿ, ಇಲ್ಲಿನ ಗಣಿಗಾರಿಕೆಯಲ್ಲಿ ಹೆಚ್ಚು ಉದ್ಯೋಗದ ಹುದ್ದೆಗಳು ಇರಲ್ಲ. ಗಣಿಗಾರಿಕೆಯಿಂದ ಪರಿಸರ ಹಾನಿಯಾಗದಂತೆ ತಡೆಯಲಾಗುವುದು. ಗ್ರಾಮದ ಅಭಿವೃದ್ದಿಗೆ ಗ್ರಾಮಸ್ಥರ ಸಲಹೆಗಳನ್ನು ಪಡೆದು ರೂಪ ರೇಷೆಗಳು ರೂಪಿಸಲಾಗುವದು ಎಂದು ಹೇಳಿದರು.
ರೈತ ಮುಖಂಡರಾದ ಸಿದ್ದಣ್ಣಗೌಡ ಪೆÇೀಲಿಸ್ ಪಾಟೀಲ್, ಜಗದೀಶ ಚವ್ಹಾಣ, ಮಲ್ಲಿನಾಥ ಬಾಗೋಡಿ, ವೆಂಕಟೇಶ ಕಟ್ಟೀಮನಿ, ಚನ್ನವೀರ ಕಣಗಿ, ಶ್ರೀಮಂತ ಗುತ್ತೇದಾರ, ಶ್ರೀಶೈಲ್ ಪಾಟೀಲ್ ಇಲ್ಲಿ, ಭೀಮರಾಯ ದೇವರ, ರಮೇಶ ಸಾಬಣ್ಣ, ಶಿವರಾಜ್ ವಿಶ್ವಕರ್ಮ, ನಾಗರಾಜ, ದೊಡ್ಡಪ್ಪ, ಇಮ್ಯಾನುಯಲ್ ಮಾತನಾಡಿದರು.
ಪರಿಸರ ಇಲಾಖೆ ಅಧಿಕಾರಿ ರೇಖಾ, ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ, ಕಾನೂನು ವಿಭಾಗದ ಮುಖ್ಯಸ್ಥ ರವಿಕುಮಾರ ಮಾಹಿತಿ ನೀಡಿದರು.
ತಹಸೀಲ್ದಾರ್ ಅಮರೇಶ ಬಿರಾದಾರ, ಕಂಪೆನಿ ಅಧ್ಯಕ್ಷ, ಉದಯ ಪವಾರ, ಉಪಾಧ್ಯಕ್ಷ ಕೆವಿವಿವೈಎಸ್ ನಾರಾಯಣ, ರೈತ ಮುಖಂಡರಾದ ಅಣ್ಣಾರಾವ ಪಾಟೀಲ್ ಮುಡಬೂಳ, ಗೋಪಾಲ ರಾಠೋಡ, ಶರಣಪ್ಪ ಪಲ್ಲೇದ ಸೇರಿದಂತೆ ಕಂಪನಿ ಅಧಿಕಾರಿಗಳು ಇದ್ದರು.
ಪರಿಸರ ಇಲಾಖೆ ಅಧಿಕಾರಿ ಸೋಮಶೇಖರ ಪ್ರಾಸ್ತಾವಿಕ ಮಾತನಾಡಿದರು.
ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐಗಳಾದ ಚಂದ್ರಶೇಖರ ತಿಗಡಿ, ಜಗದೇವಪ್ಪ ಪಾಳಾ, ನಟರಾಜ ಲಾಡೆ, ಪಿಎಸ್‍ಐಗಳಾದ ಶ್ರೀಶೈಲ್ ಅಂಬಾಟಿ, ಚೇತನ್ ಪೂಜಾರಿ, ತಿರುಮಲೇಶ, ಚಂದ್ರಾಮಪ್ಪ ಸೂಕ್ತ ಪೆÇೀಲಿಸ್ ಬಂದೋಬಸ್ತ ವ್ಯವಸ್ಥೆ ಮಾಡಿದ್ದರು.