ಕರ್ಪೂರ ತಯಾರಿಸುವದು ಹೀಗೆ
ಕಲಬುರಗಿ,ಆ 23: ಕರ್ಪೂರ ಗೊತ್ತಿಲ್ಲದವರು ಯಾರಿದ್ದಾರೆ? ಆದರೆ ಕರ್ಪೂರ ಹೇಗೆ ತಯಾರಿಸುತ್ತಾರೆಂಬುದು ಬಹುತೇಕರಿಗೆ ತಿಳಿದಿಲ್ಲ.ಪ್ರಾಚೀನ ಕಾಲದಿಂದಲೂ ಕರ್ಪೂರ ತಯಾರಾಗುತ್ತಿದ್ದುದು ಲರೇಸಿಯಾ ಸಸ್ಯ ಕುಟುಂಬಕ್ಕೆ ಸೇರಿದ ‘ಸಿನಿಮೋಮ್- ಕ್ಯಾಂಪೆÇರ್’ ಎಂಬ ಮರದಿಂದ. 5-6 ವರ್ಷದ ಮರವನ್ನು ಕಡಿದು ಅದರ ತಿರುಳನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ, ಭಟ್ಟಿ ಇಳಿಸಿದ ನಂತರ ದೊರೆತ ದ್ರಾವಣವನ್ನ ಹಲವು ರೀತಿಯಲ್ಲಿ ಸಂಸ್ಕರಿಸಿ ಕರ್ಪೂರ ತಯಾರಿಸಲಾಗುತ್ತಿತ್ತು.
ಇಂತಹ ಶುದ್ಧ ಕರ್ಪೂರವನ್ನು ದೇವರ ಸೇವೆಯಲ್ಲಿ, ಅಡಿಗೆಯಲ್ಲಿ ಮತ್ತು ಔಷಧಿಯಾಗಿಯೂ ಬಳಕೆ ಮಾಡಲಾಗುತ್ತಿತ್ತು.
ಆದರೆ, ನಿಸರ್ಗದಿಂದ ದೊರೆಯುವ ಕರ್ಪೂರ ಸಾರ್ವಜನಿಕರ ಬೇಡಿಕೆ ಪೆÇರೈಸಲಾಗದ ಕಾರಣ ರಸಾಯನಿಕ ಸಂಯೋಜನೆಗಳಿಂದ, ಟಪೆರ್ಂಟೈನ್ ತೈಲದಿಂದಲೂ ಕರ್ಪೂರ ತಯಾರಿಸಲಾಗುತ್ತದೆ.