ಭಕ್ತಿ ಸಡಗರದ ಶ್ರೀ ಗುರುರಾಯರ ಆರಾಧನೆ
ಇಂಡಿ:ಆ.23:ಶ್ರೀ ರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವ ಪಟ್ಟಣದ ರಾಘವೇಂದ್ರ ಮಠದಲ್ಲಿ ನಡೆಯುತ್ತಿದೆ.
ಮೂರು ದಿನ ಕಾರ್ಯಕ್ರಮದಲ್ಲಿ ಪ್ರತಿದಿನ ಅಷ್ಟೋತ್ತರ, ಪವಮಾನ ಸೂಕ್ತ ಪಠಣ, ಪಂಚಾಮೃತ ಅಭಿಷೇಕ,ಪುಷ್ಪಾಲಂಕಾರ ಹಾಗೂ ತುಳಸಿ ಅರ್ಚನೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.ಮಧ್ಯಾರಾಧನೆ ದಿನ ಭಕ್ತರ ದಂಡೇ ಆಗಮಿಸಿ ಸ್ವಾಮಿಗಳ ದರ್ಶನ ಪಡೆದರಲ್ಲದೆ ಮಧ್ಯಾನ್ಹ ಸಹಸ್ರಾರು ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿಸಲಾಯಿತು.
ಆರಾಧನಾ ಮಹೋತ್ಸವದ ಅಂಗವಾಗಿ ಮಠದೊಳಗೆ ಹೂವಿನ ಅಲಂಕಾರ ಮಾಡಲಾಗಿದ್ದು ಆಕರ್ಷಿಸುತ್ತಿದೆ. ಮೊದಲ ದಿನದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮಹಿಳಾ ಮಂಡಳ,ತಾಲೂಕಾ ದೈವಜ್ಞ ಮಂಡಳಿ,ಮಾತೃಮಂಡಳಿ,ಭಜನಾ ಮಂಡಳಿ ಇವರಿಂದ ಭಜನೆ ಸಾದರಪಡಿಸಿದರು.
22 ರಂದು ಗುರು ಸಾರ್ವಭೌಮ ಭಜನಾ ಮಂಡಳಿಯಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು. ಜಗನ್ನಾಥ ಜಹಾಗೀರದಾರ, ಕೃಷ್ಣಾ ಚಟ್ಟರಕಿ, ಗಿಂಡಿ ಆಚಾರ್ಯರರು ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಶ್ರೀ ರಾಘವೇಂದ್ರ ಸೇವಾ ಸಮಿತಿಯ ಅಧ್ಯಕ್ಷ ಜಿ.ಎಸ್.ಕುಲಕರ್ಣಿ ವಕೀಲರು,ಕಾರ್ಯದರ್ಶಿ ಆರ್.ವಿ.ದೇಶಪಾಂಡೆ ವಕೀಲರು, ಮುಖ್ಯ ಗುರುಗಳಾದ ರಾಘವೇಂದ್ರ ಕುಲಕರ್ಣಿ, ರಮೇಶ ಕುಲಕರ್ಣಿ, ರಾಘವೇಂದ್ರ ಸುಧಾಕರ ಕುಲಕರ್ಣಿ ವಕೀಲರು,ಜಿ.ಎಸ್.ಜೋಶಿ,ಎಸ್.ಜಿ.ದೇಶಪಾಂಡೆ, ಎಸ್.ಬಿ.ಕುಲಕರ್ಣಿ,ಅನೀಲ ಜೋಶಿ, ಸುನೀಲ ಜೋಶಿ, ಆನಂದ ಕುಲಕರ್ಣಿ,ಡಿ.ಎಸ್.ಜೋಶಿ,ಸಚೀನ ಕಾಳಗಿ ಮತ್ತಿತರಿದ್ದರು.