ಅದ್ದೂರಿ ಗಣೇಶ ಉತ್ಸವ ಆಚರಣೆಗೆ ಸರ್ವಾನುಮತದ ಸಮ್ಮತಿ
ಬೀದರ:ಆ.23: 2024ರ ಗಣೇಶ ಚತುರ್ಥಿ ಅದ್ದೂರಿಯಾಗಿ ಆಚರಿಸಲು ಐತಿಹಾಸಿಕ ರಾಮಮಂದಿರದಲ್ಲಿ ಆಯೋಜಿಸಿದ ಗಣೇಶ ಮಹಾ ಮಂಡಲ ಸಭೆಯಲ್ಲಿ ಸರ್ವಾನುಮತದಿಮದ ತೀರ್ಮಾನಿಸಲಾಯಿತು. ಈ ವರ್ಷದ ಗಣೇಶ ಚತುರ್ಥಿಯು ಸೆ. 7ರಂದು ಪ್ರತಿಷ್ಠಾಪನೆಗೊಂಡು ಸೆ. 11 ರಂದು ವಿಸರ್ಜನೆಗೊಳ್ಳಲಿವೆ. ಐದು ದಿನಗಳ ಸಂಭ್ರಮ ಹಬ್ಬದ ಆಚರಣೆ ನಡೆಯಲಿದೆ.
ಗಣೇಶ ಮಹಾ ಮಂಡಳಿಯ ಗೌರವಾಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆಯವರನ್ನು ಅಧ್ಯಕ್ಷರಾಗಿ ಚಂದ್ರಶೇಖರ ಪಾಟೀಲ ಗಾದಗಿ, ಪ್ರಧಾನ ಕಾರ್ಯದರ್ಶಿಯಾಗಿ ಬಾಬು ವಾಲಿಯವರನ್ನು ಆಯ್ಕೆ ಮಾಡಲಾಯಿತು.
ಗಣೇಶ ಮಹಾ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾದ ಬಾಬು ವಾಲಿ ಮಾತನಾಡಿ ಈ ವರ್ಷದ ವೇದಿಕೆಗೆ ಮಾಜಿ ಶಾಸಕರಾದ ರಮೇಶ ಕುಮಾರ ಪಾಂಡೆ ಅವರು ಹೆಸರು ಇಡಬೇಕೆಂಬ ಪ್ರಸ್ತಾಪಿಸಿದರು. ಇದಕ್ಕೆ ಎಲ್ಲಾ ಪದಾಧಿಕಾರಿಗಳು ಮತ್ತು ಸಾರ್ವಜನಿಕ ಗಣೇಶ ಮಂಡಳಿಯ ಅಧ್ಯಕ್ಷರು ಸದಸ್ಯರು ಸಮ್ಮತಿ ನೀಡಿದರು.
ಐದು ದಿನಗಳ ಗಣೇಶ ಪೂಜೆಯಲ್ಲಿ ಭಕ್ತಿ ಗೀತೆಗಳನ್ನು ಅಳವಡಿಸಿ, ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ನೀಡಬೇಕು ಹಾಗೂ ಮೆರವಣಿಗೆ ದಿನದಂದು ಯಾರು ಚಲನಚಿತ್ರದ ಹಾಡುಗಳನ್ನು ಅಳವಡಿಸದೇ ದೇಶ ಭಕ್ತಿ ಮತ್ತು ದೇವರ ಹಾಡುಗಳನ್ನು ಅಳವಡಿಸಬೇಕೆಂದು ತಿಳಿಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಶೇಖರ್ ಪಾಟೀಲ ಗಾದಗಿ ಮಾತನಾಡಿ ಈ ವರ್ಷ ಪ್ರತಿ ವರ್ಷಗಿಂತಲೂ ಅದ್ದೂರಿಯಾಗಿ ಆಚರಿಸೋಣ, ನನನ್ನು ಪುನರ್ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ಮೆರವಣಿಗೆ ದಿನದಂದು ಎಲ್ಲಾ ಗಣೇಶ ಮಂಡಳಿಗಳು ಸಮಯಕ್ಕೆ ಸರಿಯಾಗಿ ಗಣೇಶಗಳನ್ನು ತರಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ ನಂದಕೀಶೋರ ವರ್ಮಾ ಮಾತನಾಡಿ ಈ ವರ್ಷ ವಿಜೃಂಭಣೆಯಿಂದ ಗಣೇಶ ಉತ್ಸವ ಆಚರಿಸೋಣ ಎಲ್ಲಾ ಸರಕಾರದ ನಿಯಮಗಳನ್ನು ಸಾಧ್ಯವಾದಷ್ಟು ಪಾಲಿಸೋಣ, ಯುವಕರು ಐದು ದಿನ ಶ್ರಮಿಸಬೇಕು ಜಿಲ್ಲಾಡಳಿತದ ಸೂಚನೆ ಮತ್ತು ಸಮಯ ಪಾಲನೆ ಮಾಡಬೇಕೆಂದು ಕರೆ ನೀಡಿದರು.
ಪ್ರತಿ ವರ್ಷದಂತೆ ಈ ವರ್ಷವೂ ಎಲ್ಲಾ ಸಾರ್ವಜನಿಕ ಗಣೇಶ ಮಂಡಳಿಗಳಿಗೆ ಬೇಕಾದ ಅಗತ್ಯ ಪರವಾನಿಗೆಗಳನ್ನು ಗಣೇಶ ಮಹಾ ಮಂಡಳಿಯು ಪಡೆಯಲ್ಲಿದೆ ಎಂದು ನುಡಿದರು.
ಗಣೇಶ ಮಹಾ ಮಂಡಳಿಯ ಉಪಾಧ್ಯಕ್ಷರಾಗಿ ಈಶ್ವರ ಸಿಂಗ್ ಠಾಕೂರ್, ದೀಪಕ್ ವಾಲಿ, ಮಹೇಶ ಪಾಲಂ. ಸತೀಶ ಮೊಟ್ಟಿ, ಭೂಷಣ ಪಾಠಕ್, ರಾಜಕುಮಾರ ಚಿದ್ರಿ, ಸಚಿನ ನವಲಕಲೆ, ಮನೋಹರ್ ದಂಡೆ, ನರೇಶ ಗೌಳಿ, ಪ್ರಕಾಶ ನಂದಗೌಳಿ, ಕೃಪಾ ಸಿಂಗ್ ಪಾಟೀಲ, ವೀರಶೆಟ್ಟಿ ಪಾಟೀಲ ನೌಬಾದೆ, ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಖಜಾಂಚಿಯಾಗಿ ರಜನೀಶ ವಾಲಿ, ಕಾರ್ಯದರ್ಶಿಗಳಾಗಿ ಭರತ ಶೆಟಕಾರ, ಸುಭಾಷ ಮಡಿವಾಳ, ಅರುಣ ಬಸವನಗರ, ಮಹೇಶ್ವರ ಸ್ವಾಮಿ, ನಿಲೇಶ ರಕ್ಷಾಳ, ವಿರೇಶ ಸ್ವಾಮಿ, ಸುನೀಲ ದಳವೆ, ಶ್ರೀಮಂತ ಸಪಾಟೆ, ನವಿನ್ ರೋಷನ್ ವರ್ಮಾ, ಗಣೇಶ ಬೋಸ್ಲೆ, ಮುನ್ನ ಆರ್ಯ, ರಾಹುಲ್ ಅಟಲ್, ರಾಜಾರಾಮ ಚಿಟ್ಟಾ, ದೇವೇಂದ್ರ ಎಮ್ಮೆಕರ್, ಸನ್ನಿ ಪಾಟೀಲ ಅವರನ್ನು ಸರ್ವಾನುಮತಿದಂದ ಆಯ್ಕೆ ಮಾಡಲಾಯಿತು.
ಸ್ವಾಗತ ಸಮಿತಿಯ ಆಧ್ಯಕ್ಷರಾಗಿ ಇಂದಿನ ಸಭೆಯ ಅಧ್ಯಕ್ಷರಾದ ನಂದಕೀಶೋರ್ ವರ್ಮಾ ಅವರನ್ನು ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಸುಭಾಷ ಚೋಳಕರ, ಚಂದ್ರಶೇಖರ ಗಾದಾ ಅವರನ್ನು ಆಯ್ಕೆ ಮಾಡಲಾಯಿತು.
ನಗರ ಅಲಂಕಾರ ಸಮಿತಿ ಗೌರವಧ್ಯಕ್ಷರಾಗಿ ಹಣಮಂತ ಬುಳ್ಳಾ, ಅಧ್ಯಕ್ಷರಾಗಿ ನಿಖಿಲ್ ಕೋಸಂ, ಉಪಾದ್ಯಕ್ಷರಾಗಿ ಯೋಗೇಶ ಠಾಕೂರ ಅವರನ್ನು ಆಯ್ಕೆ ಮಾಡಲಾಯಿತು.
ಮೆರವಣಿಗೆ ಸಮಿತಿ ಗೌರವಧ್ಯಕ್ಷರಾಗಿ ಸೂರ್ಯಕಾಂತ ಶೆಟ್ಟಕಾರ, ಅಧ್ಯಕ್ಷರಾಗಿ ಸೋಮಶೇಖರ ಪಾಟೀಲ ಗಾದಗಿ, ಪ್ರಧಾನ ಕಾರ್ಯದರ್ಶಿಯಾಗಿ ಶಶಿ ಹೊಸಳ್ಳಿ, ಕಾರ್ಯದರ್ಶಿಯಾಗಿ ನವೀನ ಚಿಟ್ಟಾ, ಆನಂದ ಘಂಟೆ, ಕೈಲಾಶ ಖಾಜಿ, ಸಂಜು ಜೀರ್ಗೆ, ನಾಗರಾಜ ಜೋಗಿ, ಕಲ್ಯಾಣರಾವ ಬಿರಾದರ ಅವರನ್ನು ಸರ್ವಾನುಮದಿಂದ ಆಯ್ಕೆ ಮಾಡಲಾಯಿತು.
ಸಭೆಯ ಸ್ವಾಗತ ಪ್ರಾಸ್ತಾವಿಕವನ್ನು ಗಣೇಶ ಮಹಾ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾದ ಬಾಬು ವಾಲಿ, ವಂದನಾರ್ಪಣೆಯನ್ನು ಕಾರ್ಯದರ್ಶಿಯಾದ ಬಸವರಾಜ ಪವಾರ ನಡೆಸಿಕೊಟ್ಟರು.
ಈ ಸಂಧರ್ಭದಲ್ಲಿ ದೀಪಕ ವಾಲಿ, ರಜನೀಶ ವಾಲಿ, ಸೋಮಶೇಖರ ಪಾಟೀಲ ಗಾದಗಿ, ಸೂರ್ಯಕಾಂತ ಶೆಟಕರ, ಸುಭಾಷ ಗಾದಾ, ರಾಜಕುಮಾರ ಚಿದ್ರಿ, ಸುಭಾಷ ಮಡಿವಾಳ, ರೋಷನ ವರ್ಮಾ, ನವೀನ ಚಿಟ್ಟಾ ಗಣೇಶ ಭೋಸ್ಲೆ ಸೇರಿದಂತೆ ಪ್ರಮುಖರು ಮತ್ತು ಅನೇಕರು ಉಪಸ್ಥಿತರಿದ್ದರು.