ತಾಯಿಯ ಹೆಸರಲ್ಲಿ ಒಂದು ವೃಕ್ಷ ಅಭಿಯಾನಕ್ಕೆ ಕಾರ್ಯಕ್ರಮಕ್ಕೆ ಚಾಲನೆ
ಬೀದರ್ :ಆ.23: ಸುಸ್ಥಿರ ಅಭಿವೃದ್ಧಿಯ ಅವಶ್ಯಕತೆ ಈ ಕಾಲಘಟ್ಟದಲ್ಲಿ ಗಿಡಗಳು ತಾಯಿಯ ಸಮಾನವಾಗಿದ್ದು ಅವುಗಳ ಪಾಲನೆ ಹಾಗೂ ಪೆÇೀಷಣೆಯ ಮೇಲೆ ನಮ್ಮ ಭವಿಷ್ಯ ಇದೆ ಎಂದು ಪಶು ವಿಶ್ವ ವಿದ್ಯಾಲಯದ ಉಪ ಕುಲಪತಿ ಕೆಸಿ ವೀರಣ್ಣ ಹೇಳಿದರು.
ತಾಲೂಕಿನ ಎದಲಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ನಂದಿ ನಗರ ಪಶುವೈದ್ಯಕೀಯ ಮಹಾ ವಿದ್ಯಾಲಯ ಕೇಂದ್ರದಲ್ಲಿ ಸಾಮಾಜಿಕ ಅರಣ್ಯ ವಲಯ ಬೀದರ ಮತ್ತು ಎನ್, ಎನ್, ಎಸ್. ಘಟಕ ಪಶು ವೈದ್ಯಕೀಯ ಮಹಾ ವಿದ್ಯಾಲಯ ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ” ತಾಯಿಯ ಹೆಸರಲ್ಲಿ ಒಂದು ವೃಕ್ಷ ” ( ಇಞ Peಜ ಒಚಿಚಿ ಏe ಓಚಿಚಿm ) ಸಸಿ ನೆಡುವ ಕಾರ್ಯಕ್ರಮಕ್ಕೆ ಮಾನ್ಯ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವ ವಿದ್ಯಾಲಯದ ಉಪ ಕುಲಪತಿಗಳು ಹಾಗೂ ಉಪ ಕಾರ್ಯದರ್ಶಿಗಳು ಜಿಪಂ ರವರು ಜಂಟಿಯಾಗಿ ಚಾಲನೆ ನೀಡಿ ಮಾತನಾಡಿದ ಅವರು ಪ್ರತಿಯೊಬ್ಬರು ಸಸಿಗಳನ್ನು ನೀಡುವುದರ ಮೂಲಕ ಉತ್ತಮ ಪರಿಸರ ನಿರ್ಮಾಣ ಮಾಡಬೇಕೆಂದು ಎಂದರು.
ನಂತರ ಮಾತನಾಡಿದ ಮುಕ್ಕಣ್ಣ ಕರಿಗಾರ ಉಪ ಕಾರ್ಯದರ್ಶಿಗಳು ಜಿಪಂ ರವರು ಪ್ರಸ್ತುತ ದಿನಗಳಲ್ಲಿ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿರುವುದರಿಂದ ಪ್ರತಿಯೊಬ್ಬರು ತಮ್ಮ ಮನೆ ಅಕ್ಕ ಪಕ್ಕ ಸಿಸಿಗಳನು ನೆಡುವುದರ ಮೂಲಕ ಹಸಿರು ಕಾರಣ ಮಾಡಬೇಕು ಇದರಿಂದ ಕಾಲ್ ಕಾಲಕ್ಕೆ ಉತ್ತಮ ಮಳೆ ಆಗುವ ಸಾಧ್ಯತೆ ಹೆಚ್ಚಾಗುತ್ತದೆ ಎಂದರು.
ಇಂದು ನಾವು ನೆಡುವ ಚಿಕ್ಕ ಸಸಿ ನಾಳೆ ಹೆಮ್ಮರವಾಗಿ ಬೆಳೆದು ನಮಗ್ಗೆಲ್ಲ ಆಮ್ಲಜನಕದ ಜೊತೆಗೆ ಉತ್ತಮ ಆರೋಗ್ಯ ನೀಡುತ್ತದೆ ಎಂದರು.
ಈ ಸಂಧರ್ಭದಲ್ಲಿ ಜೈ ಪ್ರಕಾಶ್ ಚೌಹಾಣ್ ಸಹಾಯಕ ಕಾರ್ಯದರ್ಶಿಗಳು ಜಿಪಂ, ದೀಪಕ್ ಎಡಿಪಿಸಿ, ವಿಶ್ವವಿದ್ಯಾಲಯದ ನಿರ್ದೇಶಕರಾದ ಡಾ. ಬಸವರಾಜ್ ಅವಟಿ, ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾ ಅಧಿಕಾರಿಗಳಾದ ಡಾ ಚನ್ನಪ್ಪಗೌಡ ಬಿರಾದಾರ, ಜಿಲ್ಲಾ ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳಾದ ಶ್ರೀ ಎಬಿ ಪಾಟೀಲ್, ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳಾದ ಡಾಕ್ಟರ್ ಪೃಥ್ವಿರಾಜ್ ಹಾಗೂ ಡಾಕ್ಟರ್ ಪ್ರವೀಣ್ ಎಂ ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮುಜಿ ಬುದ್ದಿನ, ವಲಯ ಅರಣ್ಯಾಧಿಕಾರಿಗಳಾದ ಪ್ರೇಮ್ ಶೇಖರ್ ಹಾಗೂ ಉಪ ವಲಯ ಅರಣ್ಯಾಧಿಕಾರಿಗಳಾದ ಬಾಲಾಜಿ ವರ್ಷದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳು ಇದ್ದರು.