ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಡಿಡಿಪಿಐ ಸೂರ್ಯಕಾಂತ್ ಮದಾನಿ ಕರೆ
ಆಳಂದ:ಆ.23: ಎಸ್‍ಎಸ್‍ಎಲ್‍ಸಿ ಮಕ್ಕಳಲ್ಲಿ ಪರೀಕ್ಷೆ ಭಯ ನಿವಾರಣೆಗೆ ಅವರಲ್ಲಿನ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವ ಮೂಲಕ ಪರೀಕ್ಷಾ ವೆಬ್‍ಕಾಸ್ಟಿಂಗ್ ಮಾದರಿಯಲ್ಲೇ ತರಗತಿಯಲ್ಲಿ ತಿಂಗಳ ಮತ್ತು ಮಾಸಿಕ ಪರೀಕ್ಷೆಗಳನ್ನು ನಡೆಸಿ ಪರೀಕ್ಷೆ ಭಯವನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಕಲಬುರಗಿ ಜಿಲ್ಲೆಯ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ (ಡಿಡಿಪಿಐ) ಸೂರ್ಯಕಾಂತ್ ಮದಾನಿ ಅವರು ಶಾಲೆಗಳ ಮುಖ್ಯಸ್ಥರಿಗೆ ಕರೆ ನೀಡಿದರು.
ಪಟ್ಟಣದ ಬಿಆರ್‍ಸಿ ಕೇಂದ್ರದಲ್ಲಿ ಬುಧುವಾರ 10ನೇ ತರಗತಿಯ ಪರೀಕ್ಷೆಯ ಫಲಿತಾಂಶ ಸುಧಾರಣೆ ಕುರಿತ ಪೂರ್ವಭಾವಿ ಸಭೆಯಲ್ಲಿ ಶಿಕ್ಷರು ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಶಾಲಾ ಮಕ್ಕಳ ಹಾಜರಾತಿ ಹೆಚ್ಚಿಸುವಲ್ಲಿ ಮತ್ತು ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಹಿಂದೇಟು ಏಕಾಗುತ್ತಿದೆ. ಇದಕ್ಕೆ ಎಲ್ಲ ಶಾಲೆಗಳಲ್ಲಿ ಒತ್ತು ನೀಡುವಂತಾಗಬೇಕು. ಶಾಲಾ ಮಕ್ಕಳ ಹಾಜರಾತಿಯನ್ನು ಹೆಚ್ಚಿಸಲು ಶಿಕ್ಷಕರು ತ್ವರಿತ ಕ್ರಮ ಕೈಗೊಳ್ಳಬೇಕು ಮತ್ತು ಶಾಲಾ ಬಿಟ್ಟ ಮಕ್ಕಳ ಮನೆಗಳಿಗೆ ಭೇಟಿಕೊಟ್ಟು ಅವರ ಹಾಜರಾತಿ ಪ್ರಮಾಣವನ್ನು ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿರುವ ಪರೀಕ್ಷಾ ಭಯವನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ, ವೆಬ್‍ಕಾಸ್ಟಿಂಗ್ ಮಾದರಿಯಲ್ಲಿ ನಿರಂತರವಾಗಿ ಘಟಕ ಪರೀಕ್ಷೆಗಳು ಮತ್ತು ಟೆಸ್ಟ್‍ಗಳನ್ನು ನಡೆಸಿ, ಮಕ್ಕಳಲ್ಲಿ ಧೈರ್ಯ ಮೂಡಿಸಬೇಕು. ಪರೀಕ್ಷೆಯ ಸಂದರ್ಭದಲ್ಲಿ ಸುಲಭವಾಗಿ ಬರೆಯಲು ಮನೋಧೈರ್ಯವನ್ನು ತಂದುಕೊಳ್ಳುವಂತಾಗಬೇಕು ಎಂದು ಅವರು ತಿಳಿಸಿದರು.
ತರಗತಿಯಲ್ಲಿ ಹಿಂದುಳಿದ ಮಕ್ಕಳ ಕಲಿಕೆಗೆ ಪ್ರಾಮುಖ್ಯತೆ ನೀಡಬೇಕು. ವಿಶೇಷ ತರಗತಿ ನಡೆಸಿ, ಹಿಂದುಳಿದ ವಿದ್ಯಾರ್ಥಿಗಳನ್ನು ಮುಂಚಿನ ಸಾಲಿಗೆ ತರಲು ಶ್ರಮಿಸಬೇಕು. ಮೊದಲ ಭಾಗದಲ್ಲಿ ಸಮರ್ಥ ಕಲಿಕಾ ಸಾಮಥ್ರ್ಯವುಳ್ಳ ಮಕ್ಕಳು, ಎರಡನೆಯ ಭಾಗದಲ್ಲಿ ಹಿಂದುಳಿದ ಮಕ್ಕಳು ಮತ್ತು ಮೂರನೆಯ ಭಾಗದಲ್ಲಿ ಅತಿ ಹಿಂದುಳಿದ ವಿದ್ಯಾರ್ಥಿಗಳನ್ನು ಸೇರಿಸಿ, ಪ್ರತಿ ಗುಂಪಿಗೆ ಅನುಗುಣವಾಗಿ ತರಗತಿಗಳನ್ನು ಏರ್ಪಡಿಸಬೇಕು. ಶಿಕ್ಷಕರು ಮತ್ತು ಪಾಲಕರ ನಡುವೆ ನಿಕಟ ಸಮಾಲೋಚನೆ ನಡೆಸಿ, ಶಾಲಾ ಮಕ್ಕಳು ಬೆಳೆಯುವಂತೆ ವಿಶೇಷ ಗಮನ ಹರಿಸಬೇಕು ಎಂದು ತಿಳಿಸಿದರು.
ಶಾಲಾ ಬಿಸಿ ಊಟದ ಸ್ಥಳದಲ್ಲಿ ಸ್ವಚ್ಛತೆಗೆ ವಿಶೇಷ ಮಹತ್ವ ನೀಡಿ, ಗುಣಮಟ್ಟದ ಶಿಕ್ಷಣದ ಪ್ರಭಾವವನ್ನು ಬಲಪಡಿಸಲು ಈ ಕ್ರಮಗಳನ್ನು ಕೈಗೊಳ್ಳಬೇಕು. ಶಾಲಾ ಆಡಳಿತವು ಪೋಷಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿ, ಶಿಕ್ಷಣದ ಗುಣಮಟ್ಟದಲ್ಲಿ ಸುಧಾರಣೆ ಮಾಡಬೇಕೆಂದು ತಿಳಿಸಿದರು.
ಶಿಕ್ಷಕರ ಯಾವುದೇ ಸಮಸ್ಯೆಗಳಿದ್ದರೂ, ಡಿಪಿಐ ಕಚೇರಿಯ ಸಿಬ್ಬಂದಿಯನ್ನು ನೇರವಾಗಿ ಸಂಪರ್ಕಿಸಿ, ತಮ್ಮ ಕಾರ್ಯಗಳನ್ನು ಸರಳಗೊಳಿಸಬೇಕೆಂದು ಶಾಲಾ ಬಿಟ್ಟು ಅಲೆದಾಡುವುದು ಬೇಡ, ಎಲ್ಲಾ ಸಮಸ್ಯೆಗಳನ್ನು ಸ್ಥಳೀಯವಾಗಿ ಮತ್ತು ಪ್ರಾಮಾಣಿಕವಾಗಿ ಪರಿಹರಿಸಿಕೊಳ್ಳಬೇಕು. ಸರ್ಕಾರ ನೀಡಿರುವ ಕಲಿಕಾ ಬಲವರ್ಧನೆ ಯೋಜನೆಗಳ ಅನುμÁ್ಠನವನ್ನು ಸಕಾಲದಲ್ಲಿ ನಡೆಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಸುಧಾರಣೆ ಮತ್ತು ಅವರ ಸೌಲಭ್ಯಗಳಿಗೆ ಪೂರಕವಾಗಿ ಕೆಲಸ ಮಾಡಬೇಕೆಂದು ಅವರು ಕರೆ ನೀಡಿದರು.
ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ. ಹಳ್ಳದ, ಇಸಿಒ ಪ್ರಕಾಶ ಕೊಟ್ರೆ, ಪಂಕಜ್ ಘಂಟೆ, ಡಿಡಿಪಿಐ ಕಚೇರಿಯ ಎಫ್‍ಡಿಎ ಆನಂದ ಜೋಶಿ, ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮರೆಪ್ಪ ಬಡಿಗೇರ, ಕಾರ್ಯದರ್ಶಿ ಎಲ್.ಎಸ್.ಬೀದಿ, ಸಹ ಕಾರ್ಯದರ್ಶಿ ಸೋಮನಾಥ ಝಳಕೋಟಿ, ಖಜಾಂಚಿ ಅಣ್ಣಪ್ಪ ಹಾದಿಮನಿ ಸೇರಿದಂತೆ ವಿವಿಧ ಶಾಲೆಗಳ ಮುಖ್ಯಸ್ಥರು, ಶಿಕ್ಷಕರು ಸಭೆಯಲ್ಲಿ ಹಾಜರಿದ್ದರು.