ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದಿಂದ “ವಿಶ್ವ ಛಾಯಾಗ್ರಹಣ ದಿನಾಚರಣೆ”
ವಿಜಯಪುರ:ಆ.23: ಸರಕಾರಿ ಆರ್ಟ್ ಗ್ಯಾಲರಿಯಲ್ಲಿ ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಹಾಗೂ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘ ಬೆಂಗಳೂರು ಇವರ ಸಹಯೋಗದಲ್ಲಿ “ವಿಶ್ವ ಛಾಯಾಗ್ರಹಣ ದಿನಾಚರಣೆಯ” ಅಂಗವಾಗಿ ಛಾಯಾಗ್ರಹಣ ಕ್ಷೇತ್ರದ ಹಿರಿಯರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಛಾಯಾಚಿತ್ರಗಳ ಪ್ರದರ್ಶನ ಆಯೋಜಿಸಲಾಗಿತ್ತು ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ನೆರವೇರಿಸಿ ನಮ್ಮ ಪರಂಪರೆ ವಿಶ್ವದ ಐತಿಹಾಸಿಕ ಕ್ಷಣಗಳ ಇತಿಹಾಸ, ತಲೆ ತಲೆ ಮಾರುಗಳ ದಾಖಲಿಕರಣವನ್ನು ತಮ್ಮ ಕ್ಯಾಮರಾಗಳ ಮುಖಾಂತರ ಸೆರೆ ಹಿಡಿದು ಇಡಿ ಜಗತ್ತಿಗೆ ತೋರಿಸುವಲ್ಲಿ ಸಾಕ್ಷಿಯಾಗಿಸಿದ್ದಾರೆ ಅಂಥ ಛಾಯಾಗ್ರಾಹಕರನ್ನು ಸಮಾಜದ ಅವಿಭಾಜ್ಯ ಅಂಗ ಎನ್ನುಬಹುದು. ಜೊತೆಗೆ ಛಾಯಾಗ್ರಾಹಕರೆಲ್ಲ ನಮ್ಮ ಸಾಂಸ್ಕ್ರತಿಕ ರಾಯಭಾರಿಗಳೆಂದರೆ ತಪ್ಪಲ್ಲ. ಈ ಪ್ರರ್ದಶನದಲ್ಲಿ ಹಲವಾರು ವಿಭಿನ್ನ ವಿಷಯಗಳ ಅದ್ಬುತ ದೃಶ್ಯಕಾವ್ಯವನ್ನು ಛಾಯಾಗ್ರಾಹಕರು ಸೆರೆಹಿಡಿದಿದ್ದಾರೆ. ಸರಕಾರ ಛಾಯಾಗ್ರಾಹಕರಿಗೆ ಎಲ್ಲ ರೀತಿಯ ಆರ್ಥಿಕ ಸೌಲಭ್ಯ ನೀಡಿ ಅವರಿಗೂ ನೆಮ್ಮದಿಯ ಜೀವನ ಸಾಗಿಸುವ ಹಾಗೆ ಮತ್ತು ಸರಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ದೊರಕಿಸಿಕೊಡುವುದರಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಬಿ.ಎಲ್.ಡಿ.ಇ ವಿಶ್ವವಿದ್ಯಾಲಯದ ಶಸ್ತ್ರ ಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾ ಡಾ. ದೀಪಕ್ ಆರ್. ಚವ್ಹಾಣ. ಮಾತನಾಡುತ್ತ ಇವತ್ತು ಜಗತ್ತಿನಲ್ಲಿ ಛಾಯಾಗ್ರಹಣ ಕ್ಷೇತ್ರ ಕೇವಲ ಉದ್ಯೋಗದ ದೃಷ್ಠ್ರೀಯಿಂದ ನೋಡದೆ ವೈದ್ಯಕೀಯ ಕ್ಷೇತ್ರದಲ್ಲಿಯೂ ಕೂಡ ಅದರ ಊಪಯೋಗ ಮಹತ್ವದ್ದಾಗಿದೆ. ಅತ್ಯಂತ ಸೂಕ್ಮ ಕ್ಯಾಮರಾಗಳ ಮೂಲಕ ದೇಹದ ವಿವಿಧ ಭಾಗಗಲಲ್ಲಿ ರೋಗ ಪ್ತತೆ ಮಾಡಲು ಮತ್ತು ಅದರ ಪರಿಹಾರಕ್ಕೂ ವೈದ್ಯಕೀಯ ಕ್ಷೇತ್ರದಲ್ಲಿ ಕ್ಯಾಮರಾ ಉಪಯೋಗ ಮಾಡಲಾಗುತ್ತಿದೆ, ಜೊತೆಯಲ್ಲಿ ಜೀವನದ ಆತ್ಮೀಯ ಸಂಭಂಧದ ಅಪರೂಪದ ಕ್ಷಣಗಳನ್ನು ಸೆರೆಹಿಡಿದು ಶಾಶ್ವತವಾಗಿ ಸಂಗ್ರಹಯೋಗ್ಯ ಕೆಲಸ ಮಾಡುತ್ತಿದೆ ಇಂಥ ಕಾರ್ಯ ಮಾಡುತ್ತಿರುವ ಛಾಯಾಗ್ರಾಹಕರು ನಾಡಿನ ಶೇಷ್ಠರ ಸಾಲಿನಲ್ಲಿ ನಿಲುವ ಎಲ್ಲ ಅರ್ಹತೆಗಳು ಇವರಲ್ಲಿದೆ ನಾವು ಗುರುತಿಸಿ ಗೌರವಿಸುವ ಕೆಲಸ ಮಾಡಬೇಕಿದೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು,
ಈಡಿ ಜಗತ್ತಿನಲ್ಲಿ ಯಾರಾದರು ಸುಳ್ಳುಹೇಳಬಹುದು ಆದರೆ ಕ್ಯಾಮರೆ ಯಾವ ಕಾರಣಕ್ಕೂ ಸುಳ್ಳುಹೇಳಲು ಸಾಧ್ಯವಿಲ್ಲ ಈ ಇವತ್ತು ನ್ಯಾಯಾಲಯದ ತೀರ್ಪೂ ಬರಬೇಕಾದರೆ ಸಾಕ್ಷಿ ಎಷ್ಟು ಮುಖ್ಯವೂ ಅಷ್ಠೇ ಮುಖ್ಯ ಒಂದು ಫೋಟೋ ಆಗಿದೆ ಇದರಿಂದ ಅಪರಾಧಿಗೆ ಶಿಕ್ಷೆ ಆಗಬಹುದು ನಿರಪರಾಧಿಗೆ ಬಿಡುಗಡೆ ಆಗಬಹುದು ಇದು ನಿರ್ಧಾರವಾಗಲು ಛಾಯಾಗ್ರಾಹಕ ಬೇಕೆ ಬೇಕು ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ ಬೋಳಸೂರ ತಮ್ಮ ಅತಿಥಿ ಭಾಷಣದಲ್ಲಿ ತಿಳಿಸಿದರು ಹಾಗೆ ಛಾಯಾಗ್ರಾಹಕರು ಶಿಸ್ತು, ಸಂಯಮ ದಿಂದ ಜೀವನ ನಡೆಸಲು ಉಪಯೋಗವಾಗುವಂತಹ ಹಲವಾರು ವಿಚಾರಗಳನ್ನು ತಿಳಿಸಿದರು.
ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ನಿರ್ದೇಶಕರಾದ ನಾಗರಾಜ ಟಿ. ಸಿ. ಮತ್ತು ರವಿಕಿರಣ ಅವರು ಛಾಯಾಗ್ರಾಹಕ ವೃತಿಯಲ್ಲಿ ಸುಮಾರು ವರ್ಷ ಸಾಗಿದ್ದೆವೆ ಸರಕಾರ ನಮ್ಮನ್ನು ಗುರುತಿಸುವಲ್ಲಿ ಮರೆತಿದೆ ಎಲ್ಲರಿಗೂ ಸಿಗುವ ಸೌಲಭ್ಯ ನಮಗೂ ಸಿಗುವಂತಾಗಲಿ ಸರಕಾರದಿಂದ ಛಾಯಾಗ್ರಾಹಕರಿಗೂ ಮಾಶಾಸನ ದೊರೆಯುಂತೆ ಆದೇಶ ಮಾಡಲಿ ಎಂದು ನುಡಿದರು. ಮುಂದಿನ ತಿಂಗಳೂ ಬೆಂಗಳೂರಿನಲ್ಲಿ ನಡೆಯುವ ಅಂತರರಾಷ್ಟ್ರೀಯ ವಸ್ಯಪ್ರದರ್ಶನದ ಬಗ್ಗೆ ಮಾಹಿತಿ ನೀಡಿ ಪ್ರದರ್ಶನದ ಪ್ರಚಾರ ಅಭೀಯಾನ ಕ್ಕೆ ಚಾಲನೆ ನೀಡಲಾಯಿತು ಎಲ್ಲಛಾಯಾಗ್ರಾಹಕರು ಪ್ರದರ್ಶನದ ಲಾಭ ಪಡೆಯಲು ತಿಳಿಸಿದರು
ಪ್ರಾಸ್ತಾವಿಕವಾಗಿ ಮಾತನಾಡಿದ ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ರಮೇಶ ಚವ್ಹಾಣ ನಾವು ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಸಂಘಟನೆ ಗಟ್ಟಿಗೊಳಿಸಬೇಕಾಗಿದೆ ನಮ್ಮ ವೃತ್ತಿ ಸುಮಾರು 187ವರ್ಷಗಳ ಹಳೆಯದಾಗಿದೆ ಎಲ್ಲ ರಂಗಕ್ಕೆ ಸರ್ಕಾರ ಅಕಾಡೆಮಿ ರಚನೆ ಮಾಡದೆ ನಮ್ಮ ಛಾಯಾಗ್ರಾಹಕರನ್ನು ಗುರುತಿಸದೇ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಇಂದು ನಾವೆಲ್ಲರೂ ಸಂಘವನ್ನು ಬಲಿಷ್ಠಗೊಳಿಸಿ ಕರ್ನಾಟಕ ಛಾಯಾಗ್ರಹಣ ಅಕಾಡೆಮಿ ರಚನೆ ಮಾಡುವಂತೆ ಒತ್ತಾಯಿಸುವದು ಅನಿವಾರ್ಯವಾಗಿದೆ ಎಂದರು. ಕಾರ್ಮಿಕ ಇಲಾಖೆ ಅಡಿ ನಮ್ಮನ್ನು ಸೇರಿಸಲಾಗಿದೆ ನಮಗೆ ಸ್ಮಾರ್ಟ್ ಕಾರ್ಡ್ ನೀಡಲು ಮಾನ್ಯ ಕಾರ್ಮಿಕ ಸಚಿವರು ಆದೇಶ ನೀಡಿದ್ದಾರೆ ಅವರಿಗೆ ಸಂಘದ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು ಹಾಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅಡಿಯಲ್ಲಿ ನಮ್ಮ ಸಂಘವನ್ನು ಸೇರ್ಪಡಿಸಿ ನಮಗೂ ಎಲ್ಲ ರೀತಿಯ ಕಲಾವಿದರಿಗೆ ಸಿಗುವ ಮೂಲಭೂತ ಸೌಕರ್ಯ ಕಲ್ಪಿಸಲು ಒತ್ತಾಯಿಸುತ್ತೇವೆ ಎಂದರು.
ಸಮಾರಂಭದಲ್ಲಿ ಜಿಲ್ಲೆಯ ಹಿರಿಯ ಛಾಯಾಗ್ರಾಹಕರುಗಳಾದ ವಿಜಯಪುರ. ರವೀಂದ್ರ ಪೂಜಾರಿ, ಮಹೇಶ ಬಾಗಿ, ವಿವೇಕಾನಂದ ಅಕ್ಕಿ. ಸಿಂದಗಿಯ ಚಂದ್ರಕಾಂತ (ಪುಟ್ಟು) ಸಂಗಮ, ಇಂಡಿಯ ಮಹಮ್ಮದ್ ಇಸಾಕ್. ಲಾಳಸಂಗಿ, ಆಲಮೇಲದ ಪ್ರಭಾಕರ ನೆಲವಡೆ, ದೇವರ ಹಿಪ್ಪರಗಿಯ ಶಶೀಧರ ಆಲಗೂರ ಅವರ ಅನುಪಮ ಸೇವೆಯನ್ನೂ ಗುರುತಿಸಿ ಜಿಲ್ಲಾ ಛಾಯಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಎಸ್.ಎಸ್.ಎಲ್.ಸಿ ದ್ವೀತಿಯ ಪಿಯೂಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ಛಾಯಾಗ್ರಾಹಕರ ಮಕ್ಕಳಾದ ಐಶ್ವರ್ಯ ಹಣಮಂತಸಿಂಗ್ ರಜಪೂತ, ಭವಾನಿ ನೇಮಿನಾಥ ನೇಜ, ಪ್ರಜ್ವಲ ಶೇಖಪ್ಪಾ ನ್ಯಾಮಗೊಂಡ, ಪ್ರೀಯಾ ಪಂಡಿತ್ ಬಿರಾದಾರ, ಸಚೀನ ಮೌನೇಶ ಬಡಿಗೇರ ಇವರನ್ನು ವೇದಿಕೆ ಮೇಲಿದ್ದ ಗಣ್ಯರು ಗೌರವಧನ, ಪ್ರಮಾಣಪತ್ರ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಜಂಗಲಿಬಾμÁ ಮುಜಾವರ ಅಧ್ಯಕ್ಷರು, ಬಬಲೇಶ್ವರ ತಾಲೂಕು ಛಾಯಾಗ್ರಾಹಕರ ಸಂಘ. ಸಂಗಯ್ಯ ಮಠಪತಿ ಅಧ್ಯಕ್ಷರು, ಕೋಲ್ಟಾರ್ ತಾಲೂಕು ಛಾಯಾಗ್ರಾಹಕರ ಸಂಘ. ಸಿದ್ದು ಕುದುರೆ ಅಧ್ಯಕ್ಷರು, ಇಂಡಿ ತಾಲೂಕು ಛಾಯಾಗ್ರಾಹಕರ ಸಂಘ. ಶಿವರುದ್ರಯ್ಯ ಹಿರೇಮಠ ಅಧ್ಯಕ್ಷರು, ಬಸವನ ಬಾಗೇವಾಡಿ ತಾಲೂಕು ಛಾಯಾಗ್ರಾಹಕರ ಸಂಘ. ಪರಶುರಾಮ ಗುಳ್ಳೂರ ಅಧ್ಯಕ್ಷರು, ಸಿಂದಗಿ ತಾಲೂಕು ಛಾಯಾಗ್ರಾಹಕರ ಸಂಘ. ಮಡಿವಾಳಪ್ಪಾ ಪಾಟೀಲ ಹಿರಿಯ ಛಾಯಾಗ್ರಾಹಕರು, ತಿಕೋಟಾ ಇವರಿದ್ದರು
ವಿಜಯಪುರ ಜಿಲ್ಲಾ ನೂತನ ಛಾಯಾ ಗ್ರಾಹಕರ ಸಂಘದ ಪದಾಧಿಕಾರಿಗಳಾದ ಸತೀಶ ಕಲಾಲ, ಪ್ರಶಾಂತ್ ಪಟ್ಟಣಶೆಟ್ಟಿ, ರಾಜುಸಿಂಗ್ ರಜಪೂತ, ಗುರುಬಾಳಪ್ಪ ಗಲಗಲಿ, ಮಲ್ಲಿಕಾರ್ಜುನ ಪಾರ್ವತಿ, ಪವನಕುಮಾರ ಅಂಗಡಿ, ಸಂಜೀವ್ ಕುಂಬಾರ, ಹಿರಿಯತ ಕಲಾವಿದರಾದ ಪಿ.ಎಸ್.ಕಡೆಮನಿ, ಬಿ.ಎಸ್. ಪಾಟೀಲ, ಪಿಂಟು ಕರ್ವಾ, ಉಮೇಶ ಹಿರೇದೆಸಾಯಿ, ಕಿರಣ ಸುಭಾಸ ಅಕ್ಕಿ, ಸಮೀರ ಅಥಣಿ, ಸದಾನಂಧ ದಾರಫಳ, ಆನಂದ ಮಹಾಂತಮಠ, ರಮೇಶ ಮೈದರಗಿ, ಶಶಿಕುಮಾರ ಕುಂಬಾರ. ಕಿಶೋರ ಖಂಡಾಗಳೆ, ಬಾಳು ಕಲಾಲ, ಂದ್ರಶೇಖರ ವಡ್ಡರ, ಸುನೀಲಗೌಡ ಬಿರಾದಾರ, ಗೌಡಪ್ಪಗೌಡ ಬಿರಾದಾರ, ಸುಗುರೇಶ ಗುಲ್ಫಿ, ಅನಂತ ಭೋಸಲೆ, ಸುಭಾಶ ಪವಾರ, ಸಂಗನಗೌದ ಬಿರಾದಾರ. ಸದಾಶಿವ ಪವಾರ, ಗಣೇಶ ಶಿಂದೆ, ಪುಟ್ಟು ಕುಲಕರ್ಣಿ, ಇಕಬಾಲ ಕಲಾದಗಿ, ಅಕ್ಷಯ ಪೋತೆ, ಸಹಿತ ನೂರಾರು ಛಾಯಾಗ್ರಾಹಕರು ಉಪಸ್ಥತರಿದ್ದಯ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಸುರೇಶ ಬಿಜಾಪುರ ನೆರವೇರಿಸಿದರು.